Home
ಸುದ್ದಿಜಾಲ

Vivo: ವಿವೋ Y18e ಸ್ಮಾರ್ಟ್‌ಫೋನ್‌ ಲಾಂಚ್‌! 13 MP ಕ್ಯಾಮೆರಾ... 5,000mAh ಬ್ಯಾಟರಿ

ವಿವೋ ಬಜೆಟ್‌ ಬೆಲೆ ವಿಭಾಗದಲ್ಲಿ ಬಹುನಿರೀಕ್ಷಿತ ವಿವೋ Y18e ಸ್ಮಾರ್ಟ್‌ಫೋನ್‌ (Vivo Y18e smartphone) ಅನ್ನು ಲಾಂಚ್‌ ಮಾಡಿದೆ. ಫೆಬ್ರವರಿಯಲ್ಲಿ, V2333 ಮತ್ತು V2345 ಮಾದರಿ ಸಂಖ್ಯೆಗಳನ್ನು ಹೊಂದಿರುವ ಈ ವಿವೋ Y18 (Vivo Y18) ಮತ್ತು V2350 ಮಾದರಿ ಕೋಡ್‌ನೊಂದಿಗೆ ಗುರುತಿಸಲಾದ ವಿವೋ Y18e ಅನ್ನು ಬ್ಲೂಟೂತ್ SIG ಪ್ರಾಧಿಕಾರವು ಅನುಮೋದಿಸಿತ್ತು.

ಹೌದು, ವಿವೋ Y18e ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿದೆ. ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ Y18e ಸ್ಮಾರ್ಟ್‌ಫೋನ್‌ ಲಾಂಚ್‌! 13 MP ಕ್ಯಾಮೆರಾ... 5,000mAh ಬ್ಯಾಟರಿ

ವಿವೋ Y18e ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.56 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯೊಂದಿಗೆ ಹೆಚ್‌ಡಿ+ ರೆಸಲ್ಯೂಶನ್ (1612 x 720) ಮತ್ತು 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸುತ್ತದೆ. ಹಾಗೆಯೇ 163.63 x 75.85 x 8.39mm ಅಳತೆ ಮತ್ತು 185 ಗ್ರಾಂ ತೂಕದ ಪಾಲಿಕಾರ್ಬೊನೇಟ್ ಬಾಡಿ ಆಯ್ಕೆಯ ಸ್ಮಾರ್ಟ್‌ಫೋನ್ ಇದಾಗಿದೆ.

ವಿವೋ Y18e ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 14 ಅನ್ನು ಆಧರಿಸಿ ಫನ್‌ಟಚ್‌ ಓಎಸ್‌ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ 4 GB LPDDR4X RAM ಮತ್ತು 64 GB eMMC 5.1 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 4 GB ವರೆಗೆ ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚುವರಿ ಸ್ಟೋರೇಜ್‌ಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸಹ ಲಭ್ಯ.

ವಿವೋ Y18e ಸ್ಮಾರ್ಟ್‌ಫೋನ್‌ ಲಾಂಚ್‌! 13 MP ಕ್ಯಾಮೆರಾ... 5,000mAh ಬ್ಯಾಟರಿ

ವಿವೋ Y18e ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಸೆಲ್ಫಿಗಳಿಗಾಗಿ f/2.2 ರ ದ್ಯುತಿರಂಧ್ರದೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, 13 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಅನ್ನು f/2.2 ದ್ಯುತಿರಂಧ್ರದೊಂದಿಗೆ ಮತ್ತು 0.08 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು f/3.0 ದ್ಯುತಿರಂಧ್ರದೊಂದಿಗೆ ಪಡೆದಿದೆ. ಅಲ್ಲದೆ ಹಿಂಭಾಗದಲ್ಲಿ ಫ್ಲ್ಯಾಶ್ ಆಯ್ಕೆಯನ್ನೂ ಸಹ ನೀಡಲಾಗಿದೆ ಇದು ಫೋನ್‌ಗೆ ಪ್ರೀಮಿಯಂ ಲುಕ್‌ ನೀಡಲಿದೆ.

ವಿವೋ Y18e ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಯುಎಸ್‌ಬಿ ಟೈಪ್‌ 2.0 ಮೂಲಕ 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಜಿಪಿಎಸ್, ಎಫ್‌ಎಂ ರೇಡಿಯೋ, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ IP54 ರೇಟೆಡ್ ಆಗಿದ್ದು ಇದರಿಂದ ಧೂಳು ನಿರೋಧಕ ಮತ್ತು ನೀರು ನಿರೋಧಕ ಸೌಲಭ್ಯ ಪಡೆದಿದೆ.

ವಿವೋ Y18e ಸ್ಮಾರ್ಟ್‌ಫೋನ್‌ ಲಾಂಚ್‌! 13 MP ಕ್ಯಾಮೆರಾ... 5,000mAh ಬ್ಯಾಟರಿ

ವಿವೋ Y18e ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ: ಈ ಫೋನ್ ಅನ್ನು ವಿವೋ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಇದರ ಬೆಲೆಯನ್ನು ಇನ್ನೂ ಬ್ರ್ಯಾಂಡ್ ದೃಢಪಡಿಸಿಲ್ಲ. ಅದಾಗ್ಯೂ ಈ ಫೋನ್ ಜೆಮ್ ಗ್ರೀನ್ ಮತ್ತು ಸ್ಪೇಸ್ ಬ್ಲ್ಯಾಕ್‌ನಂತಹ ಆಯ್ಕೆಗಳಲ್ಲಿ ಲಭ್ಯ ಇರುತ್ತದೆ ಎಂದು ತಿಳಿಸಿದ. ಈ ಫೋನ್‌ನ ಯಾವಾಗ ಸೇಲ್‌ಗೆ ಲಭ್ಯ?, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಗೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
Vivo Y18e is already official in the Indian market. This smartphone has attractive features including 90Hz refresh rate option, 5 megapixel selfie camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+