Home
ಸುದ್ದಿಜಾಲ

Vivo: ಬಜೆಟ್‌ ಬೆಲೆಯ ವಿವೋ ಫೋನ್ ಭಾರೀ ಕಡಿಮೆ ಬೆಲೆಗೆ ಲಭ್ಯ! 13MP ಕ್ಯಾಮೆರಾ...

ವಿವೋ ಫೋನ್‌ಗಳಿಗೆ (Vivo phone) ಸಾಕಷ್ಟು ಬೇಡಿಕೆ ಇದ್ದು, ಈ ಫೋನ್‌ಗಳು ವಿಶೇಷ ಕ್ಯಾಮೆರಾ ಫೀಚರ್ಸ್‌ ಪಡೆಯುವ ಮೂಲಕ ಭಾರತದಲ್ಲಿ ಹೆಚ್ಚು ಸೇಲ್‌ ಆಗುವ ಫೋನ್‌ ಆಗಿ ಗುರುತಿಸಿಕೊಂಡಿದೆ. ಅದರಂತೆ ಈಗ ವಿವೋದ ಬಜೆಟ್‌ ಫೋನ್‌ವೊಂದಕ್ಕೆ ಭರ್ಜರಿ ಅಫರ್ ನೀಡಲಾಗಿದೆ.

ಹೌದು, ವಿವೋ Y1S ಸ್ಮಾರ್ಟ್‌ಫೋನ್‌ (Vivo Y1S smartphone) ಇದೀಗ ಕಡಿಮೆ ದರದಲ್ಲಿ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದ್ದು, 32 GB ಇಂಟರ್‌ ಸ್ಟೋರೇಜ್‌ ಆಯ್ಕೆ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಬಜೆಟ್‌ ಬೆಲೆಯ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

ಬಜೆಟ್‌ ಬೆಲೆಯ ವಿವೋ ಫೋನ್ ಭಾರೀ ಕಡಿಮೆ ಬೆಲೆಗೆ ಲಭ್ಯ! 13MP ಕ್ಯಾಮೆರಾ...

ವಿವೋ Y1S ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಫೋನ್ 10,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 7,480ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ ಮೇಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ (Flipkart) 31% ರಿಯಾಯಿತಿ ನೀಡಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಅಲ್ಲದೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಬ್ಯಾಂಕ್ 10% ಆಫರ್, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ ಬ್ಯಾಂಕ್ 10% ರಿಯಾಯಿತಿ ಸಿಗಲಿದ್ದು, ಇದರಿಂದ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ವಿವೋ Y1S ಸ್ಮಾರ್ಟ್‌ಫೋನ್‌ ಡಿಸ್‌ಪ್ಲೆ ಮಾಹಿತಿ: ಈ ಸ್ಮಾರ್ಟ್‌ಫೋನ್ 6.22 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 720 x 1520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ 82.9% ಸ್ಕ್ರೀನ್-ಟು-ಬಾಡಿ ಅನುಪಾತ,270 ppi ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಬಜೆಟ್‌ ಬೆಲೆಯ ವಿವೋ ಫೋನ್ ಭಾರೀ ಕಡಿಮೆ ಬೆಲೆಗೆ ಲಭ್ಯ! 13MP ಕ್ಯಾಮೆರಾ...

ವಿವೋ Y1S ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಫೋನ್ ಮೀಡಿಯಾಟೆಕ್ MT6765 ಹಿಲಿಯೋ P35 (12nm) ಪ್ರೊಸೆಸರ್‌ ಬಲ ಪಡೆದಿದ್ದು, ಆಂಡ್ರಾಯ್ಡ್ 10, ಫನ್‌ಟಚ್ 10.5 ಓಎಸ್‌ ಅನ್ನು ಇದು ರನ್‌ ಮಾಡಲಿದೆ. ಇದರೊಂದಿಗೆ ಪವರ್‌ವಿಆರ್‌ GE8320 ಗ್ರಾಫಿಕ್ಸ್‌ ಕಾರ್ಡ್‌ ಬೆಂಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದ್ದು, 32GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 2GB RAM ಬೆಂಬಲದೊಂದಿಗೆ ಮೈಕ್ರೋ ಎಸ್‌ಡಿಕಾರ್ಡ್‌ ಸೌಲಭ್ಯ ಸಹ ಇದೆ.

ಬಜೆಟ್‌ ಬೆಲೆಯ ವಿವೋ ಫೋನ್ ಭಾರೀ ಕಡಿಮೆ ಬೆಲೆಗೆ ಲಭ್ಯ! 13MP ಕ್ಯಾಮೆರಾ...

ವಿವೋ Y1S ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಇನ್ನು ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಕ್ಯಾಮೆರಾಗಳು ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಹಾಗೆಯೇ 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಯಬಹುದಾಗಿದೆ.

ವಿವೋ Y1S ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 4030 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದರೊಂದಿಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 b/g/n, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಎಫ್‌ಎಮ್‌ ರೇಡಿಯೋ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇನ್ನು ಅಕ್ಸೆಲೆರೊಮೀಟರ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಅರೋರಾ ಬ್ಲೂ, ಆಲಿವ್ ಬ್ಲ್ಯಾಕ್‌ ಬಣ್ಣದಲ್ಲಿ ಈ ಫೋನ್‌ ಲಭ್ಯ ಇದೆ.

Best Mobiles in India

English summary
Vivo Y1S smartphone is now available at a low price. This smartphone has got a 13 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+