Home
ಸುದ್ದಿಜಾಲ

Vivo: ಹೊಸ ವೇರಿಯಂಟ್‌ನಲ್ಲಿ ವಿವೋ Y200 5G ಸ್ಮಾರ್ಟ್‌ಫೋನ್‌!ಆಫರ್ ಏನಿದೆ?

ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ಕ್ಯಾಮೆರಾ ಹಾಗೂ ಪ್ರೊಸೆಸರ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿವೆ. ಈ ನಡುವೆ ವಿವೋ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ Y200 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಹೌದು, ವಿವೋ ಈಗಾಗಲೇ ವಿವೋ Y200 5G ಸ್ಮಾರ್ಟ್‌ಫೋನ್ (Vivo Y200 5G smartphone) ಅನ್ನು ಅನಾವರಣ ಮಾಡಿದ್ದು, ಈ ಫೋನ್‌ ಅನ್ನು ಗ್ರಾಹಕರು ಭಾರೀ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ಹೊಸ ವೇರಿಯಂಟ್‌ನಲ್ಲಿ ಮತ್ತೆ ಹೊಸ ಫೋನ್‌ ಅನ್ನ ಘೋ‍ಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಹೊಸ ವೇರಿಯಂಟ್‌ ಯಾವುದು?, ಇದರ ಬೆಲೆ ಎಷ್ಟು?, ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೊಸ ವೇರಿಯಂಟ್‌ನಲ್ಲಿ ವಿವೋ Y200 5G ಸ್ಮಾರ್ಟ್‌ಫೋನ್‌! ಆಫರ್ ಏನಿದೆ?

ವಿವೋ Y200 5G ಸ್ಮಾರ್ಟ್‌ಫೋನ್ ಹೊಸ ವೇರಿಯಂಟ್‌ನಲ್ಲಿ: ಈ ಮೊದಲು ವಿವೋ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಒಂದೇ ವೇರಿಯಂಟ್‌ನಲ್ಲಿ ಲಾಂಚ್‌ ಮಾಡಿತ್ತು. ಆದರೆ, ಈಗ ದ್ವಿಗುಣ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಹೊಸ ಫೋನ್‌ ಅನ್ನು ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ 25,000ರೂ. ಬೆಲೆಯ ವಿಭಾಗದಲ್ಲಿ ಅತ್ಯುತ್ತಮ ಫೋನ್‌ ಎನಿಸಿಕೊಂಡಿದೆ.

ಇನ್ನು ಈ ವಿವೋ Y200 5G ಸ್ಮಾರ್ಟ್‌ಫೋನ್‌ ಅದೇ 8GB RAM ಆಯ್ಕೆ ಪಡೆದಿದೆಯಾದರೂ ಇಂಟರ್‌ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಂಡಿದೆ. ಅಂದರೆ 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಈ ಸ್ಮಾರ್ಟ್‌ಫೋನ್‌ಗೆ ಇದೀಗ 23,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಜಂಗಲ್ ಗ್ರೀನ್ ಮತ್ತು ಡೆಸರ್ಟ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ಲಭ್ಯ ಇದೆ. ಜೊತೆಗೆ 8GB + 128GB ವೇರಿಯಂಟ್‌ ಫೋನ್‌ 21,999 ರೂ.ಗಳ ಬೆಲೆಯಲ್ಲಿ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯ ಇದೆ.

ಹೊಸ ವೇರಿಯಂಟ್‌ನಲ್ಲಿ ವಿವೋ Y200 5G ಸ್ಮಾರ್ಟ್‌ಫೋನ್‌! ಆಫರ್ ಏನಿದೆ?

ಈ ಫೋನ್‌ಗೆ ಬ್ಯಾಂಕ್‌ ಆಫರ್ ಸಹ ನೀಡಲಾಗಿದೆ. ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಹಾಗೂ ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1500 ರೂ.ಗಳ ರಿಯಾಯಿತಿ. ಇದರೊಂದಿಗೆ FreebieSpotify ಪ್ರೀಮಿಯಂ ಸೌಲಭ್ಯ ಸಿಗಲಿದೆ. ಇದರೊಂದಿಗೆ ನೀವು ಇಎಮ್‌ಐ ಆಯ್ಕೆ ಮೂಲಕವೂ ಈ ಫೋನ್‌ ಖರೀದಿ ಮಾಡಬಹುದು. ಈ ವೇಳೆ ನೀವು ತಿಂಗಳಿಗೆ 3,667 ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು.

ವಿವೋ Y200 5G ಸ್ಮಾರ್ಟ್‌ಫೋನ್‌ ಫೀಚರ್ಸ್‌: ಸ್ಟೋರೇಜ್‌ ವಿಷಯ ಹೊರತುಪಡಿಸಿದ್ರೆ ವಿವೋ Y200 5G ನ ಫೋನ್‌ ಒಂದೇ ರೀತಿಯ ಫೀಚರ್ಸ್‌ ಆಯ್ಕೆ ಪಡೆದಿದೆ. ಅಂದರೆ ಇದು FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ ಆಯ್ಕೆ ಇರುವ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ HDR10+ ಅನ್ನು ಬೆಂಬಲಿಸುತ್ತದೆ. ಪ್ರಮುಖವಾಗಿ ಈ ಫೋನ್ ಫ್ಲಾಟ್ ಫ್ರೇಮ್ ವಿನ್ಯಾಸ ಮತ್ತು ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.

ಹೊಸ ವೇರಿಯಂಟ್‌ನಲ್ಲಿ ವಿವೋ Y200 5G ಸ್ಮಾರ್ಟ್‌ಫೋನ್‌! ಆಫರ್ ಏನಿದೆ?

ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಅನ್ನು ರನ್‌ ಮಾಡಲಿದೆ. ಉಳಿದಂತೆ ಈ ಫೋನ್ 44W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಇದರೊಂದಿಗೆ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್‌ ಡೆಪ್ತ್ ಲೆನ್ಸ್ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Vivo has already unveiled the Vivo Y200 5G smartphone and now this phone has been unveiled in a new variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+