Vivo: ಭಾರತದಲ್ಲಿ ವಿವೋ Y200 ಪ್ರೊ 5G ಲಾಂಚ್‌ಗೆ ಡೇಟ್ ಫಿಕ್ಸ್! ಫೀಚರ್ಸ್ ಏನಿದೆ?
ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಭಾರತದಲ್ಲಿ ದೊಡ್ಡ ಸುನಾಮಿಯನ್ನೇ ಎಬ್ಬಿಸುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ಆಗಾಗ್ಗೆ ವಿವೋ ಹೊಸ ಫೋನ್‌ಗಳನ್ನು ಘೋಷಣೆ ಮಾಡುಕೊಂಡು ಬರುತ್ತಲೇ ಇದ್ದು, ಈ ನಡುವೆ ಬಹಳ ಕುತೂಹಲ ಉಂಟು ಮಾಡಿದ್ದ ವಿವೋ Y200 ಪ್ರೊ 5G (Vivo Y200 Pro 5G) ಲಾಂಚ್ ದಿನಾಂಕವನ್ನು ಬಹಿರಂಗಪಡಿಸಿದೆ.
ಹೌದು, ವಿವೋ Y200 ಪ್ರೊ 5G ಭಾರತದಲ್ಲಿ ಕೆಲವೇ ವಾರಗಳಲ್ಲಿ ಲಾಂಚ್ ಆಗಲಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 25,000 ಕ್ಕಿಂತ ಕಡಿಮೆ ಬೆಲೆಯ ಮಧ್ಯಮ ಶ್ರೇಣಿಯ ಫೋನ್ ಆಗಿರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ನ ಏನೆಲ್ಲಾ ಫೀಚರ್ಸ್ ಪಡೆದಿರಲಿದೆ?, ಇದು ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್: ಚೀನೀ ಸ್ಮಾರ್ಟ್‌ಫೋನ್ ಬ್ರಾಂಡ್ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್‌ನ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಮುಂಬರುವ ಸ್ಮಾರ್ಟ್‌ಫೋನ್ ಕಳೆದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾದ ವಿವೋ Y200 ಸ್ಮಾರ್ಟ್‌ಫೋನ್‌ನ ಪ್ರೊ ರೂಪಾಂತರವಾಗಿದೆ ಎಂದು ತಿಳಿದುಬಂದಿದೆ.
ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೇ 21 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಭಾರತದಲ್ಲಿ 25,000 ರೂ.ಗಳ ಬೆಲೆಗಿಂತ ಕಡಿಮೆ ಬೆಲೆಯ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಮುಂಬರುವ ಈ ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬ್ರ್ಯಾಂಡ್‌ನಿಂದ ಹಂಚಿಕೊಳ್ಳಲಾಗಿದೆ.
ಈ ಫೋನ್ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದರ ಹೊರತಾಗಿ, ರಿಯರ್‌ನಲ್ಲಿ ಎರಡು ಕ್ಯಾಮೆರಾ ಆಯ್ಕೆಯನ್ನು ಕಾಣಬಹುದು ಎಂದು ತಿಳಿದುಬಂದಿದೆ. ಜೊತೆಗೆ ತಿಳಿ ಹಸಿರು ಬಣ್ಣದಲ್ಲಿ ಈ ಫೋನ್ ಕಂಡುಬರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ಈ ಫೋನ್ ನಿರೀಕ್ಷಿತ ಫೀಚರ್ಸ್ ಏನಿರಲಿವೆ ಅನ್ನೋದನ್ನು ಇಲ್ಲಿ ಗಮನಿಸೋಣ.
ಈ ವಿಭಾಗದಲ್ಲಿ ಈ ಸ್ಮಾರ್ಟ್‌ಫೋನ್ ಸ್ಲಿಮ್ಮಸ್ಟ್ 3D ಕರ್ವ್ ಡಿಸ್‌ಪ್ಲೇ ಫೋನ್ ಆಗಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದ್ದು, ಇದು 120Hz 3D ಕರ್ವ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಆದಾಗ್ಯೂ, ಡಿಸ್‌ಪ್ಲೇ ಗಾತ್ರದ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫೋನ್ ರಾತ್ರಿಯ ಛಾಯಾಗ್ರಹಣ ಮತ್ತು ಫೋಟೋ ವಿಭಾಗದಲ್ಲಿ ನವೀಕರಣಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದರೊಂದಿಗೆ ಆಂಡ್ರಾಯ್ಡ್ 14 ಆಧಾರಿತ ಓಎಸ್ ನಲ್ಲಿ ರನ್ ಆಗಬಹುದು ಮತ್ತು 8GB RAM ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ.

ವಿವೋ V40 ಸರಣಿ ಮಾಹಿತಿ ಲೀಕ್: ಈ ನಡುವೆ ವಿವೋ V40 ಸರಣಿ ಜಾಗತಿಕವಾಗಿಲಾಂಚ್ ಆಗಲಿದೆ. ಈ ಫೋನ್ IMEI ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ವಿವೋ V40 ಸರಣಿಯು ವಿವೋ V30 ಶ್ರೇಣಿಯನ್ನು ಅನುಸರಿಸುತ್ತದೆ. ಅದರಂತೆ ವಿವೋ V40 ಸರಣಿಯು ವರ್ಷದ ದ್ವಿತೀಯಾರ್ಧದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ವಿವೋ ನ ವಿ ಸರಣಿಯು ಬ್ರ್ಯಾಂಡ್‌ನಿಂದ ಜನಪ್ರಿಯ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿ ಗುರುತಿಸಿಕೊಳ್ಳಲಿವೆ ಎನ್ನಲಾಗಿದೆ.
ವಿವೋ V40 ಸರಣಿಯು ಮೂರು ಮಾದರಿಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ವಿವೋ V40, ವಿವೋ V40 ಪ್ರೊ ಮತ್ತು ವಿವೋ V40e (Vivo V40, Vivo V40 Pro and Vivo V40e). ಫೋನ್‌ಗಳ ಮಾರ್ಕೆಟಿಂಗ್ ಹೆಸರುಗಳನ್ನು IMEI ಡೇಟಾಬೇಸ್ ದೃಢೀಕರಿಸುತ್ತದೆ. ಇತರ V ಸರಣಿಯ ಕೊಡುಗೆಗಳಂತೆ, ಮುಂಬರುವ V40 ಶ್ರೇಣಿಯು ಸಹ ಕ್ಯಾಮೆರಾಗಳು ಮತ್ತು ಸೌಂದರ್ಯಶಾಸ್ತ್ರದ ಮೇಲೆ ಹೆಚ್ಚು ಗಮನಹರಿಸಿದೆ.


Click it and Unblock the Notifications








