Vivo: ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್‌ಗೆ ದಿನಗಣನೆ! ಫೀಚರ್ಸ್ ಏನಿವೆ?
ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ವಿಭಿನ್ನ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷ ಪ್ರಯೋಜನ ಕಲ್ಪಿಸಿಕೊಡುತ್ತವೆ. ಈ ನಡುವೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್ (Vivo Y200 Pro 5G smartphone) ಬರ್ತಾ ಇದೆ.
ಹೌದು, ವಿವೋ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಈ ಫೋನ್‌ಗಳನ್ನು ಭಾರತದಲ್ಲಿ ಮುಗಿಬಿದ್ದು ಖರೀದಿ ಮಾಡುವ ಗ್ರಾಹಕರು ಇದ್ದಾರೆ. ಈ ನಡುವೆ ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್ ಬ್ಲೂಟೂತ್ SIG ಪ್ರಮಾಣೀಕರಣಗಳನ್ನು ಸ್ವೀಕರಿಸುತ್ತಿದ್ದು, ಇದರ ಬಿಡುಗಡೆ ಸನ್ನಿಹಿತವಾಗಿದೆ. ಹಾಗಿದ್ರೆ, ಕೆಲವು ಮಾಹಿತಿ ಪ್ರಕಾರ ಈ ಫೋನ್ ಏನೆಲ್ಲ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ ಬನ್ನಿ ನೋಡೋಣ.

ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿವೋ Y200 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ವಿವೋ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದಾದ ನಂತರದಲ್ಲಿ ಅಂದರೆ ಈ ವರ್ಷದ ಫೆಬ್ರವರಿಯಲ್ಲಿ ವಿವೋ Y200e 5G ಅನ್ನು ಘೋಷಣೆ ಮಾಡಲಾಗಿತ್ತು. ಈ ಫೋನ್‌ಗಳ ಆರ್ಭಟದ ಜೊತೆಗೆ ಈಗ ವಿವೋ Y200 ಪ್ರೊ 5G ಎಂಬ ಮತ್ತೊಂದು Y200 ಸರಣಿ ಫೋನ್ ಅನ್ನು ಲಾಂಚ್ ಮಾಡಲು ವಿವೋ ಸಜ್ಜಾಗಿದೆ.
ಇನ್ನು ಭಾರತದಲ್ಲಿ BIS ಪ್ರಾಧಿಕಾರವು ಮಾದರಿ ಸಂಖ್ಯೆ V2401 ನೊಂದಿಗೆ ಹೊಸ ವಿವೋ ಫೋನ್ ಅನ್ನು ಅನುಮೋದಿಸಿದೆ. ಗೂಗಲ್ ಪ್ಲೇ ಬೆಂಬಲಿತ ಡಿವೈಸ್‌ಗಳ ಲಿಸ್ಟ್‌ನಲ್ಲಿ ವಿವೋ Y200 ಪ್ರೊ 5G ಬ್ರ್ಯಾಂಡಿಂಗ್‌ನೊಂದಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಈ ಲಿಸ್ಟ್‌ನಲ್ಲಿ ಮಾದರಿ ಸಂಖ್ಯೆ V2303 ಸಹ ಕಾಣಿಸಿಕೊಂಡಿದೆ. ಇದೂ ಸಹ ಈ ಫೋನ್‌ಗೆ ಸಂಬಂಧಿಸಿದ್ದೇ ಆಗಿದೆ. ಈ ಲಿಸ್ಟ್ ಫೋನ್‌ಗಾಗಿ ಕೆಲವು ಫೀಚರ್ಸ್ ಅನ್ನು ಬಹಿರಂಗಗೊಳಿಸಿದೆ.

ಅಲ್ಲದೆ ಕಳೆದ ತಿಂಗಳು ಈ ವಿವೋ Y200 ಪ್ರೊ 5G ಅನ್ನು ಗೂಗಲ್ ಪ್ಲೇ ಕನ್ಸೋಲ್ ಡೇಟಾಬೇಸ್‌ನಲ್ಲಿ ಗುರುತಿಸಲಾಗಿದೆ. ಈ ಮಾದರಿ ಸಂಖ್ಯೆಗಳನ್ನು ಗಮನಿಸಿದ್ರೆ ವಿವೋ Y200 ಪ್ರೊ 5G ವಿವೋ V29e (Vivo V29e) ಅನ್ನು ಆಧರಿಸಿರಬಹುದು ಎಂದು ತೋರುತ್ತದೆ. ಈ ಫೋನ್ 6.78 ಇಂಚಿನ ಅಮೋಲೆಡ್ ಕರ್ವ್ ಎಡ್ಜ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಫುಲ್‌ಹೆಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯದ ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದೆ. ಅಲ್ಲದೆ ಭದ್ರತೆಗಾಗಿ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆಯನ್ನೂ ಪಡೆದಿದೆ.
ಉಳಿದಂತೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8 GB RAM ಮತ್ತು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಇಂಟರ್ ಸ್ಟೋರೇಜ್ ವಿಚಾರಕ್ಕೆ ಬಂದರೆ ಈ ಫೋನ್ 128 GB ಮತ್ತು 256 GB ನ ಎರಡು ಸ್ಟೋರೇಜ್ ವೇರಿಯಂಟ್‌ಗಳನ್ನು ಕಾಣಬಹುದಾಗಿದೆ.

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಆಟೋಫೋಕಸ್ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 64 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಈ ಕ್ಷಣಕ್ಕೂ ಸಹ ಮಿಡ್ ರೇಂಜ್ ವಿಭಾಗದಲ್ಲಿ ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಮೂಲಕ ಮುಂಬರುವ ವಿವೋ Y200 ಪ್ರೊ 5G ಸ್ಮಾರ್ಟ್‌ಫೋನ್ ಸಹ ಇದೇ ರೀತಿಯ ಫೀಚರ್ಸ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದ್ದು, ಮೇ ತಿಂಗಳಲ್ಲಿ ಅಧಿಕೃತವಾಗಿ ಘೋಷಣೆ ಆಗಬಹುದು ಎನ್ನಲಾಗಿದೆ.


Click it and Unblock the Notifications








