Home
ಸುದ್ದಿಜಾಲ

vivo: ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಫೀಚರ್ಸ್‌ ಮಾಹಿತಿ ಲೀಕ್!

ವಿವೋ ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡುತ್ತಲೇ ಇರುತ್ತದೆ. ಭಾರತವೂ ಸೇರಿದಂತೆ ಜಾಗತಿಕವಾಗಿ ಈ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದು, ಈ ಬೇಡಿಕೆಯನ್ನು ವ್ಯವಸ್ಥಿತವಾಗಿ ವಿವೋ ಪೂರೈಕೆ ಮಾಡುತ್ತಿದೆ. ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌ (Vivo Y200 Pro Smartphone) ಲಾಂಚ್‌ ಆಗಲಿದ್ದು, ಇದಕ್ಕೂ ಮೊದಲೇ ಈ ಫೋನ್‌ನ ಬೆಲೆ ಮತ್ತು ಫೀಚರ್ಸ್‌ ಮಾಹಿತಿ ಲೀಕ್ ಆಗಿದೆ.

ಹೌದು, ವಿವೋ ಮುಂಬರುವ ದಿನಗಳಲ್ಲಿ ಭಾರತದಲ್ಲಿ Y200 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಪ್ರಮಾಣೀಕರಣಗಳು ಮತ್ತು ಗೂಗಲ್‌ ಪ್ಲೇ ಕನ್ಸೋಲ್ ಪಟ್ಟಿಯು ಇದು ವಿವೋ V29e (Vivo V29e) ನ ಮರುಬ್ರಾಂಡ್ ಆಗಿರಬಹುದು ಎಂದು ಉಲ್ಲೇಖ ಮಾಡಿದೆ. ಹಾಗಿದ್ರೆ, ಈ ಫೋನ್‌ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ, ಯಾವ ಬೆಲೆ ರೇಂಜ್‌ನಲ್ಲಿ ಲಭ್ಯ ಆಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

vivo: ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಫೀಚರ್ಸ್‌ ಮಾಹಿತಿ ಲೀಕ್!

ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ ಬಗ್ಗೆ ವಿವಿಧ ವೆಬ್‌ಸೈಟ್‌ನಲ್ಲಿ ಲೀಕ್‌ ಮಾಹಿತಿಯನ್ನು ವರದಿ ಮಾಡಲಾಗುತ್ತಿದೆ. ಅದರಂತೆ 91ಮೊಬೈಲ್ಸ್‌ ಇದರ ಬೆಲೆ ಹಾಗೂ ಕೆಲವು ಫೀಚರ್ಸ್‌ ಅನ್ನು ಉಲ್ಲೇಖ ಮಾಡಿದೆ. ಅದರ ಪ್ರಕಾರ ಈ ವಿವೋ Y200 ಪ್ರೊ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ 25,000 ರೂ.ಗಳಿಗೆ ಲಭ್ಯ ಆಗಬಹುದು ಎನ್ನಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಪ್ರಸ್ತುತ, ವಿವೋ V29e ಆರಂಭಿಕ ಬೆಲೆ ಸಹ 25,000 ರೂ.ಗಳಾಗಿದೆ.

ಫೀಚರ್ಸ್‌ ವಿಷಯಕ್ಕೆ ಬಂದರೆ ವಿವೋ Y200 ಪ್ರೊ ಬಹುಶಃ 120Hz 3D ಕರ್ವ್ಡ್ ಅಮೋಲೊಡ್‌ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎನ್ನಲಾಗಿದ್ದು, ಪ್ರಾಥಮಿಕ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನವನ್ನು ಒಳಗೊಂಡಿರುವ ಆಂಟಿ-ಶೇಕ್ ಕ್ಯಾಮೆರಾದೊಂದಿಗೆ ಕಾಣಿಸಿಕೊಳ್ಳಲಿದೆ. ಫೋನ್‌ನ ಕ್ಯಾಮೆರಾ ವ್ಯವಸ್ಥೆಯು ಛಾಯಾಗ್ರಹಣ ಮತ್ತು ಭಾವಚಿತ್ರಗಳಲ್ಲಿ ನವೀಕರಣಗಳನ್ನು ತರುತ್ತದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

vivo: ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಫೀಚರ್ಸ್‌ ಮಾಹಿತಿ ಲೀಕ್!

ಇದರ ಜೊತೆಗೆ ಸುಧಾರಿತ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್‌ನ ಬದಲಾಗಿ ಇನ್ನೂ ಹಳೆಯದಾದ ಸ್ನಾಪ್‌ಡ್ರಾಗನ್ 695 ಚಿಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಉಳಿದಂತೆ ಈ ಫೋನ್‌ನ ಇತರೆ ಫೀಚರ್ಸ್‌ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಅದಾಗ್ಯೂ ಕೆಲವು ನಿರೀಕ್ಷಿತ ಫೀಚರ್ಸ್‌ ಬಗ್ಗೆ ನಿಖರವಾಗಿ ತಿಳಿಯುವುದಾದರೆ FHD+ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1300 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಹೊಂದಿರುವ 6.78 ಇಂಚಿನ ಕರ್ವ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎನ್ನಲಾಗಿದೆ.

ವಿವೋ V29e ಸ್ಮಾರ್ಟ್‌ಫೋನ್ ಇದು ಓಐಎಸ್-ನೆರವಿನ 64 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಅನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಈ ಫೋನ್‌ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

vivo: ವಿವೋ Y200 ಪ್ರೊ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಫೀಚರ್ಸ್‌ ಮಾಹಿತಿ ಲೀಕ್!

ವಿವೋ X100 ಸರಣಿ ಸ್ಮಾರ್ಟ್‌ಫೋನ್‌ ಲಾಂಚ್‌: ಇದೀಗ ಈ ಅಲ್ಟ್ರಾ ವೇರಿಯಂಟ್‌ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಅನ್ನು ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಈ ಫೋನ್ 200 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದಿದ್ದು, ವಿವೋ X100s ಮತ್ತು ವಿವೋ X100s ಪ್ರೊ (Vivo X100s, Vivo X100s Pro) ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 9300+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ವಿವೋ X100 ಅಲ್ಟ್ರಾ (Vivo X100 Ultra) ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆಯು ಅದರ ವಿಶೇಷ ಲಕ್ಷಣವಾಗಿದೆ. ಮುಖ್ಯ ಕ್ಯಾಮೆರಾವು 1 ಇಂಚಿನ ಪ್ರಕಾರದ ಸೋನಿ LYT-900 ಸೆನ್ಸರ್ ಹೊಂದಿದ್ದು, ಆದರೆ ಪೆರಿಸ್ಕೋಪ್ ಕ್ಯಾಮೆರಾವು ಸ್ಯಾಮ್‌ಸಂಗ್‌ನೊಂದಿಗೆ ಸಹ-ಅಭಿವೃದ್ಧಿಪಡಿಸಿದ 200 ಮೆಗಾಪಿಕ್ಸೆಲ್ ISOCELL HP9 ಸೆನ್ಸರ್‌ ಅನ್ನು ಬಳಸುತ್ತದೆ, ಇದು ಫೋನ್‌ನಲ್ಲಿ ಇದುವರೆಗೆ ನೋಡಿದ ಅತಿದೊಡ್ಡ ಟೆಲಿಫೋಟೋ ಸೆನ್ಸರ್‌ ಆಗಿದೆ.

Best Mobiles in India

English summary
Vivo is all set to launch the Y200 Pro smartphone in India in the coming days. Certifications and the Google Play Console listing mention that it could be a rebrand of the Vivo V29e.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+