ಇದೇ ಮೇ 20 ರಂದು ವಿವೋದಿಂದ ಹೊಸ ಫೋನ್ ಲಾಂಚ್; ಫೀಚರ್ಸ್ ಏನು?
ವಿವೋ ಮೊಬೈಲ್ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ Y ಸರಣಿಯಲ್ಲಿ ಕೆಲವು ಸ್ಮಾರ್ಟ್‌ಫೋನ್ ಮೂಲಕ ಗಮನ ಸೆಳೆದಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಹೊಸದಾಗಿ ವಿವೋ Y200 (Vivo Y200) ಸರಣಿಯನ್ನು ಪರಿಚಯಿಸಲು ತಯಾರಾಗಿದೆ. ಬರಲಿರುವ ವಿವೋ Y200 ಫೋನ್ ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಹೌದು, ವಿವೋ ಕಂಪನಿಯು ವಿವೋ Y200 (Vivo Y200) ಸರಣಿಯನ್ನು ಇದೇ ಮೇ 20 ರಂದು ಚೀನಾ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದ್ದು, ಈ ಫೋನ್ ಸರಣಿಯು ವಿವೋ Y200 5G, ವಿವೋ Y200t 5G ಮತ್ತು ವಿವೋ Y200 GT 5G ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ. ಇನ್ನುಳಿದಂತೆ ಬರಲಿರುವ ಈ ನೂತನ ಫೋನ್‌ಗಳ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y200 ನಿರೀಕ್ಷಿತ ಫೀಚರ್ಸ್
ವಿವೋ ಸಂಸ್ಥೆಯ ವಿವೋ Y200 ಫೋನಿನ ಮಾದರಿ ಸಂಖ್ಯೆ V2343A ಆಗಿದೆ. ಇನ್ನು ಚೀನಾ ಟೆಲಿಕಾಂ ಲಿಸ್ಟ್ ಮಾಹಿತಿಯಂತೆ, ಈ ಫೋನ್ ನಾಲ್ಕು ವೇರಿಯಂಟ್ ಆಯ್ಕೆಗಳಲ್ಲಿ ಮಾರಾಟಕ್ಕೆ ಮುಕ್ತವಾಗಲಿದ್ದು, ಅವುಗಳು ಕ್ರಮವಾಗಿ 8GB + 128GB, 8GB + 256GB, 12GB + 256GB, ಮತ್ತು 12GB + 512 GB ವೇರಿಯಂಟ್ ಎನ್ನಲಾಗಿದೆ.
ವಿವೋ Y200 5G ಫೋನ್ 2400 × 1080 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಡಿಸ್‌ಪ್ಲೇ ಒದಗಿಸಲಿದೆ. ಹಾಗೆಯೇ ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿರಲಿದ್ದು, ಇದರ ಜೊತೆಗೆ ಪವರ್‌ಫುಲ್ ಪ್ರೊಸೆಸರ್ ಪಡೆದಿರುವ ಸಾಧ್ಯತೆಗಳು ಅಧಿಕವಾಗಿವೆ.
ಹಾಗೆಯೇ ವಿವೋ Y200 5G ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 200 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇರಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಸೌಲಭ್ಯ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಬರಲಿರುವ ವಿವೋದ ಈ ಹೊಸ ಫೋನ್ 6,000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರಲಿದೆ. ಹಾಗೆಯೇ ಈ ಫೋನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ.
ಇದರೊಂದಿಗೆ ವಿವೋ Y200 5G ಫೋನ್ 164.36 × 74.75 × 7.61mm ಸುತ್ತಳತೆ ಪಡೆದಿರಲಿದ್ದು, ಇದು ಸುಮಾರು 187 ಗ್ರಾಂ ತೂಕ ಪಡೆದಿರಲಿದೆ. ಹಾಗೆಯೇ USB ಟೈಪ್-C ಪೋರ್ಟ್ ಮೂಲಕ ಚಾರ್ಜ್ ಆಗುತ್ತದೆ. ಈ ಫೋನ್ NFC ಗೆ ಸಪೋರ್ಟ್ ಪಡೆದಿಲ್ಲ ಎನ್ನಲಾಗಿದೆ. ಇನ್ನು ಈ ಫೋನ್ ಮೂರು ಕಲರ್ ಆಯ್ಕೆಗಳಲ್ಲಿ ಎಂಟ್ರಿ ಕೊಡಲಿದ್ದು, ಅವುಗಳು ಕ್ರಮವಾಗಿ ಬ್ಲಾಸಮ್ಸ್, ರೆಡ್ ಆರೆಂಜ್ ಮತ್ತು ಬ್ರೈಟ್ ನೈಟ್ ಆಗಿರಲಿವೆ.
ವಿವೋ Y200 ಇತ್ತೀಚಿಗೆ ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದೆ. ಆ ಮಾಹಿತಿಯಂತೆ, Y ಸರಣಿಯಲ್ಲಿ ಬರಲಿರುವ ಮುಂದಿನ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಇದಕ್ಕೆ ಜೊತೆಯಾಗಿ ಅಡ್ರೆನೊ 710 GPU ಸಹ ಪಡೆದಿರಲಿದೆ. ಲಭ್ಯ ಮಾಹಿತಿ ಪ್ರಕಾರ ಬರಲಿರುವ ಫೋನ್ 80W ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಪಡೆದಿರಲಿದೆ.


Click it and Unblock the Notifications








