ಇನ್ನು ಕೆಲವು ದಿನಗಳಲ್ಲಿ ಲಾಂಚ್ ಆಗಲಿದೆ ವಿವೋದ ಈ ಹೊಸ ಫೋನ್!
ಜನಪ್ರಿಯ ವಿವೋ ಸಂಸ್ಥೆಯ ಬಹುನಿರೀಕ್ಷಿತ ವಿವೋ Y200e 5G (Vivo Y200e 5G) ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 22 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವಿವೋ ಖಚಿತಪಡಿಸುತ್ತದೆ. ವಿವೋ ಕಂಪನಿಯ ಈ ನೂತನ ಸ್ಮಾರ್ಟ್‌ಫೋನ್ ಡೈಮಂಡ್ ಬ್ಲ್ಯಾಕ್ ಮತ್ತು ಕೇಸರಿ ಡಿಲೈಟ್ ಕಲರ್ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ ಎಂದು ಸೂಚಿಸಲಾಗಿದೆ.
ಹೌದು, ವಿವೋ ಇಂಡಿಯಾ ಎಕ್ಸ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ವಿವೋ Y200e 5G ಫೋನ್ ಭಾರತದಲ್ಲಿ ಫೆಬ್ರವರಿ 22 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಮುಂಬರುವ ಈ ಫೋನಿಗಾಗಿ ಡಿವೈಸ್ ಪೇಜ್ ಈಗ ಕಂಪನಿಯ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ.

ಕೆಲವು ಲೀಕ್ ಮಾಹಿತಿಗಳ ಪ್ರಕಾರ ಸೋರಿಕೆಗಳು ವಿವೋ Y200e 5G ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ+ ಸ್ಯಾಮ್‌ಸಂಗ್ AMOLED ಡಿಸ್ಪ್ಲೇ ಅನ್ನು ಪಡೆದಿರಲಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್ ಅನ್ನು ಹಾಗೂ 1200nits ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆಯುವ ಸಾಧ್ಯತೆಯಿದೆ ಎಂದು ಸೂಚಿಸಿದೆ.
ಅಲ್ಲದೇ ಈ ಫೋನ್ ಕ್ವಾಲ್ಕಮ್‌ನ ಸ್ನಾಪ್‌ಡ್ರಾಗನ್ 4 ಜೆನ್ 2 SoC ಚಿಪ್‌ಸೆಟ್ ಪ್ರೊಸೆಸರ್ ಪಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ ಆಂಡ್ರಾಯ್ಡ್ 13 ಅಥವಾ ಆಂಡ್ರಾಯ್ಡ್ 14 ಆಧಾರಿತ UI ನೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. ಮುಂಬರುವ ಈ ವಿವೋ ಫೋನ್ 44W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಜೊತೆಗೆ ಇದು 5,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವ ಸಾಧ್ಯತೆ ಇದೆ.
ಹಾಗೆಯೇ ವಿವೋ Y200e 5G ಫೋನ್ ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಪಡೆದಿದ್ದು, ಅಲ್ಲದೇ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಅನ್ನು ಪಡೆದಿರುವ ಸಾಧ್ಯತೆ ಇದೆ. ಹಾಗೆಯೇ ಮುಂಭಾಗದ ಕ್ಯಾಮರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ.
ಇನ್ನು ಇದರೊಂದಿಗೆ ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್‌ನೊಂದಿಗೆ ಆಯ್ಕೆಗಳನ್ನು ಪಡೆದಿರಲಿದೆ. ಇನ್ನು ಈ ಫೋನ್ ಸುಮಾರು 185.5g ತೂಕ ಪಡೆದಿರಲಿದ್ದು, ಹಾಗೂ 7.79 mm ದಪ್ಪವನ್ನು ಸುತ್ತಳತೆ ಹೊಂದಿರುವ ಸಾಧ್ಯತೆಯಿದೆ.
ಅದೇ ರೀತಿ ಇತ್ತೀಚಿನ ವಿವೋ Y200 5G ಮೊಬೈಲ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜೆನ್ 1 SoC ಪ್ರೊಸೆಸರ್ ಬಲವನ್ನು ಪಡೆದಿದೆ.
ಹಾಗೆಯೇ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ OS 13 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8 GB RAM + 128 GB ಆಂತರೀಕ ಸ್ಟೋರೇಜ್ ಅನ್ನು ಹೊಂದಿದ್ದು, ಇದಲ್ಲದೆ ವಿಸ್ತರಿಸಬಹುದಾದ RAM ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಈ ಫೋನ್ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಪವರ್ ಅನ್ನು ಹೊಂದಿದೆ.


Click it and Unblock the Notifications








