Home
ಸುದ್ದಿಜಾಲ

vivo: ಶೀಘ್ರದಲ್ಲೇ ಸಂಚಲನ ಉಂಟು ಮಾಡಲಿದೆ ವಿವೋದ ಈ ಹೊಸ ಫೋನ್! ಬ್ಲೂಟೂತ್ SIG ಪ್ರಮಾಣೀಕರಣ

ವಿವೋದ (vivo) ಫೋನ್‌ಗಳು ಸಾಮಾನ್ಯವಾಗಿ ಇತರೆ ಫೋನ್‌ಗಳಿಗಿಂತ ಹೆಚ್ಚಿನ ಆಕರ್ಷಕಣೆಯನ್ನು ಪಡೆಯುತ್ತವೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ಬೆಳವಣಿಗೆ ನಡುವೆ ವಿವೋ ಮತ್ತೊಂದು ಹೊಸ ಫೋನ್‌ ಅನ್ನು ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಲಾಂಚ್‌ ಮಾಡಲಿದೆ ಎಂದು ತಿಳಿದುಬಂದಿದೆ.

ಹೌದು, ವಿವೋ ಇದೀಗ ಹೊಸ ಫೋನ್‌ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಈ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯ ಇಲ್ಲವಾದರೂ ಸಹ ಮಾರುಕಟ್ಟೆಯಲ್ಲಿ ಈ ಫೋನ್‌ಗೆ ಬಹಳ ನಿರೀಕ್ಷೆ ಉಂಟಾಗಿದೆ. ಅಲ್ಲದೆ ಈ ಫೋನ್‌ ಬ್ಲೂಟೂತ್ SIG ಪ್ರಮಾಣೀಕರಣವನ್ನು (Bluetooth SIG certification) ಪಡೆದುಕೊಂಡಿದೆ. ಹಾಗಿದ್ರೆ, ಯಾವುದು ಈ ಫೋನ್‌?, ಇದರ ಮಾದರಿ ಸಂಖ್ಯೆ ಎಷ್ಟು?, ಇದು ಯಾವ ಫೋನ್‌ಗೆ ಹೋಲಿಕೆ ಆಗಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶೀಘ್ರದಲ್ಲೇ ಸಂಚಲನ ಉಂಟು ಮಾಡಲಿದೆ ವಿವೋದ ಈ ಹೊಸ ಫೋನ್!ಬ್ಲೂಟೂತ್ SIG ಪ್ರಮಾಣೀಕರಣ

ವಿವೋ Y200e 5G ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ (Vivo Y200e 5G) ಈಗ ಬ್ಲೂಟೂತ್ SIG ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಬ್ಲೂಟೂತ್ SIG ಪ್ರಮಾಣೀಕರಣದ ಡೇಟಾಬೇಸ್‌ನಲ್ಲಿ ಮಾದರಿ ಸಂಖ್ಯೆ V2336 ನೊಂದಿಗೆ ಇದು ಕಾಣಿಸಿಕೊಂಡಿದ್ದು, ಈ ಡಿವೈಸ್‌ ಮಾರುಕಟ್ಟೆಗೆ ಬಂದಾಗ ಅದನ್ನು ವಿವೋ Y200e 5G ಎಂದು ಕರೆಯಲಾಗುವುದು ಎಂದು ಲಿಸ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಅಸ್ತಿತ್ವದಲ್ಲಿರುವ ವಿವೋ Y200 5G (Vivo Y200 5G) ಸ್ಮಾರ್ಟ್‌ಫೋನ್‌ ನಂತೆಯೇ ಇರಬಹುದು ಎಂದು ತಿಳಿದುಬಂದಿದೆ.

ಏನಿದು ಬ್ಲೂಟೂತ್ SIG ಪಟ್ಟಿ?: ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸುವ ಫೋನ್‌ಗಳ ಲಿಸ್ಟ್‌ ಅನ್ನು ನೀಡಲಾಗಿದೆ. ಅದರಂತೆ ವಿವೋ Y200e 5G ಸ್ಮಾರ್ಟ್‌ಫೋನ್ ಸಹ ಉಲ್ಲೇಖವಾಗಿದ್ದು, ಇದರ ಹೊರತಾಗಿ ಇಲ್ಲಿ ಯಾವುದೇ ಮಾಹಿತಿ ಲಭ್ಯ ಇರುವುದಿಲ್ಲ. ಆದರೆ, ಇದೇ ಪ್ರಮಾಣೀಕರಣವು ಇತ್ತೀಚೆಗೆ ಎರಡು ಹೊಸ V-ಸರಣಿ ಫೋನ್‌ಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಅವೇ ವಿವೋ V30 SE (V2349) ಮತ್ತು ವಿವೋ 40 SE 5G (V2337).

ಶೀಘ್ರದಲ್ಲೇ ಸಂಚಲನ ಉಂಟು ಮಾಡಲಿದೆ ವಿವೋದ ಈ ಹೊಸ ಫೋನ್!ಬ್ಲೂಟೂತ್ SIG ಪ್ರಮಾಣೀಕರಣ

ಬ್ಲೂಟೂತ್ SIG ಅನ್ನು ಆಸಕ್ತಿ ಗುಂಪು ಎಂದು ಕರೆಯಲಾಗುತ್ತದೆ (Special Interest Group) ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುವ ಎಲ್ಲಾ ಉತ್ಪನ್ನಗಳು ಬ್ಲೂಟೂತ್ SIG ಪ್ರಮಾಣೀಕೃತ ಅಥವಾ ಅರ್ಹತೆ ಹೊಂದಿರಬೇಕಿದೆ. ಬ್ಲೂಟೂತ್ SIG ಅರ್ಹತೆಯು ವಿವಿಧ ತಯಾರಕರು ತಯಾರಿಸಿದ ಉತ್ಪನ್ನಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಖಾತ್ರಿಗೊಳಿಸುವ ಕೆಲಸ ಮಾಡುತ್ತದೆ.

ಅಲ್ಲದೆ ಈ ಪ್ರಮಾಣೀಕರಣವು ಬ್ಲೂಟೂತ್ ಸಕ್ರಿಯಗೊಳಿಸಿದ ಡಿವೈಸ್‌ಗಳು ಜಾಗತಿಕವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವ ಅರ್ಹತಾ ಮಾನದಂಡ ಸಹ ಆಗಿದೆ. ಪ್ರಮಾಣೀಕರಣವನ್ನು ಪೂರ್ಣಗೊಳಿಸಿದ ನಂತರ ಕಂಪನಿಗಳು ಬ್ಲೂಟೂತ್ ತಂತ್ರಜ್ಞಾನ ಮತ್ತು ಟ್ರೇಡ್‌ಮಾರ್ಕ್ ಅನ್ನು ಬಳಕೆ ಮಾಡಲು ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ. ಈ ಮೂಲಕ
ಬ್ಲೂಟೂತ್ ಡಿವೈಸ್‌ಗಳು ಇತರ ಹೊಂದಾಣಿಕೆಯ ಡಿವೈಸ್‌ಗಳೊಂದಿಗೆ ಸರಾಗವಾಗಿ ಸಂವಹನ ನಡೆಸಬಹುದು ಎಂದು ಪ್ರಮಾಣೀಕರಣವು ಖಚಿತಪಡಿಸುತ್ತದೆ. ಹಾಗಿದ್ರೆ, ಈಗ ಫೋನ್‌ನ ವಿಚಾರಕ್ಕೆ ಬರೋಣ.

ಶೀಘ್ರದಲ್ಲೇ ಸಂಚಲನ ಉಂಟು ಮಾಡಲಿದೆ ವಿವೋದ ಈ ಹೊಸ ಫೋನ್!ಬ್ಲೂಟೂತ್ SIG ಪ್ರಮಾಣೀಕರಣ

ವಿವೋ Y200 5G ಫೀಚರ್ಸ್: ಕೆಲವು ಮಾಹಿತಿ ಪ್ರಕಾರ ವಿವೋ Y200e 5G ವಿವೋ Y200 5G ಸ್ಮಾರ್ಟ್‌ಫೋನ್‌ನ ​​ಟೋನ್ಡ್ ಆವೃತ್ತಿಯಾಗಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 2023 ರಲ್ಲಿ ಲಾಂಚ್‌ ಆದ Y200 ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ.

ಈ ಸ್ಮಾರ್ಟ್‌ಫೋನ್ ಫನ್‌ಟಚ್‌ಓಎಸ್ 13 ಆಧಾರಿತ ಆಂಡ್ರಾಯ್ಡ್‌ 14 ನಲ್ಲಿ ರನ್‌ ಆಗಲಿದ್ದು, ಸ್ನಾಪ್‌ಡ್ರಾಗನ್ 4 ಜನ್‌ 1 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8 GB LPDDR4x RAM ಮತ್ತು 128 GB UFS 2.2 ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 44W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಶೀಘ್ರದಲ್ಲೇ ಸಂಚಲನ ಉಂಟು ಮಾಡಲಿದೆ ವಿವೋದ ಈ ಹೊಸ ಫೋನ್!ಬ್ಲೂಟೂತ್ SIG ಪ್ರಮಾಣೀಕರಣ

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ರಿಯರ್‌ನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ಥ್‌ ಸೆನ್ಸರ್‌ ಹೊಂದಿದೆ. ಇದರೊಂದಿಗೆ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದಿದ್ದು, IP54 ರೇಟ್‌ ಪಡೆಯುವ ಮೂಲಕ ಡಸ್ಟ್‌ಪ್ರೂಫ್ ಮತ್ತು ಸ್ಪ್ಲಾಶ್-ರೆಸಿಸ್ಟೆಂಟ್ ಫೋನ್‌ಆಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಈ ಫೋನ್ 21,999ರೂ.ಗಳಿಗೆ ಲಭ್ಯ ಇದೆ. ಆದರೆ ಹೊಸದಾಗಿ ಲಾಂಚ್‌ ಆಗುವ ಫೋನ್ 20,000ರೂ.ಗಳ ಬೆಲೆಯಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

Best Mobiles in India

English summary
Vivo is now going to make a big splash with a new phone. Accordingly, the Vivo Y200e 5G smartphone receives Bluetooth SIG certified.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+