Home
ಸುದ್ದಿಜಾಲ

vivo: ವಿವೋ Y200i ಸ್ಮಾರ್ಟ್‌ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ

ವಿವೋ ಸ್ಮಾರ್ಟ್‌ಫೋನ್‌ಗಳು (Vivo Smartphones) ಬಹು ಬೇಡಿಕೆ ಪಡೆದುಕೊಂಡಿದ್ದು, ಈ ನಡುವೆ ವಿವೋ Y200i ಸ್ಮಾರ್ಟ್‌ಫೋನ್ (Vivo Y200i smartphone) ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ವಿವೋ Y100i ಸ್ಮಾರ್ಟ್‌ಫೋನ್‌ನ ಉತ್ತರಾಧಿಕಾರಿಯಾಗಿದೆ.

ಹೌದು, ವಿವೋ ಇದೀಗ ವಿವೋ Y200i ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ ಒರಿಜಿನ್ ಓಎಸ್ 4 ನೊಂದಿಗೆ ಅಂಡ್ರಾಯ್ಡ್‌ 14 ಅನ್ನು ರನ್ ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ವಿವೋ Y200i ಸ್ಮಾರ್ಟ್‌ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ

ವಿವೋ Y200i ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.72 ಇಂಚಿನ (2408×1080 ಪಿಕ್ಸೆಲ್‌ ) ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಬೆಂಬಲ ಮತ್ತು 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 100% DCI-P3 ಮತ್ತು 107% NTSC ಕಲರ್ ಗ್ಯಾಮಟ್ ಹೊಂದಿದೆ.

ವಿವೋ Y200i ಸ್ಮಾರ್ಟ್‌ಫೋನ್ ಪ್ರೊಸೆಸರ್‌ ವಿವರ: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 4nm ಪ್ರೊಸೆಸರ್‌ ಬಲ ಪಡೆದಿದ್ದು, (2.2 GHz x 2 A78-ಆಧಾರಿತ +2GHz x 6 A55-ಆಧಾರಿತ Kryo CPUಗಳು) ಇದರೊಂದಿಗೆ ಅಡ್ರಿನೋ 613 ಜಿಪಿಯು ಬಲ ಪಡೆದುಕೊಂಡಿದೆ. ಇದರ ಜೊತೆಗೆ 8GB / 12GB LPDDR4x RAM, 256GB / 512GB (UFS 2.2) ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಈ ಫೋನ್‌ ಲಭ್ಯ ಇದೆ.

ವಿವೋ Y200i ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಪೋರ್ಟ್ರೇಟ್ ಕ್ಯಾಮೆರಾ ಆಯ್ಕೆ ಪಡೆದಿದ್ದು f/2.05 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಸೆನ್ಸರ್‌ ಎಲ್‌ಇಡಿ ಪ್ಲ್ಯಾಶ್‌ ಆಯ್ಕೆಯೊಂದಿಗೆ ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ವಿವೋ Y200i ಸ್ಮಾರ್ಟ್‌ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ

ವಿವೋ Y200i ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಧೂಳು ಮತ್ತು ನೀರು ನಿರೋಧಕ (IP64), 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌, 5G SA/NSA, ಡ್ಯುಯಲ್ 4G VoLTE, ವೈ ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, GPS/ GLONASS/ Beidou, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ವಿವೋ Y200i ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ: ಈ ಫೋನ್‌ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಈಗ ಚೀನಾದಲ್ಲಿ ಮಾತ್ರ ಲಾಂಚ್‌ ಮಾಡಲಾಗಿದೆ. ಅಂತೆಯೇ 8GB + 256GB ಮಾದರಿಗೆ 1599 ಯುವಾನ್ (18,800 ರೂ.ಗಳು.) ಬೆಲೆ ನಿಗದಿ ಮಾಡಲಾಗಿದ್ದು, 1799 ಯುವಾನ್ (21,155ರೂ.ಗಳು), 12GB + 256GB ಮತ್ತು 12GB+512GB ವೇರಿಯಂಟ್‌ 1999 ಯುವಾನ್ ನ ಆರಂಭಿಕ ಬೆಲೆ ಹೊಂದಿದೆ. ಫೋನ್ ಇಂದು ಆರ್ಡರ್ ಮಾಡಲು ಲಭ್ಯವಿರುತ್ತದೆ ಮತ್ತು ಏಪ್ರಿಲ್ 27 ರಿಂದ ಚೀನಾದಲ್ಲಿ ಮಾರಾಟವಾಗಲಿದೆ.

Best Mobiles in India

English summary
Vivo has just unveiled the Vivo Y200i smartphone. This phone has got 120Hz refresh rate and 8 megapixel selfie camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+