Vivo: ವಿವೋ Y20T ಸ್ಮಾರ್ಟ್‌ಫೋನ್‌ಗೆ ಬರೋಬ್ಬರಿ 30% ಡಿಸ್ಕೌಂಟ್! 64 GB ಸ್ಟೋರೇಜ್... ಟ್ರಿಪಲ್ ಕ್ಯಾಮೆರಾ
ವಿವೋ ಸ್ಮಾರ್ಟ್‌ಫೋನ್‌ಗಳಿಗೆ (Vivo smartphone) ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆ ಇದ್ದು, ಈ ಫೋನ್‌ಗಳು ಉತ್ತಮ ಕ್ಯಾಮೆರಾ ಫೀಚರ್ಸ್ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಪಡೆಯುವ ಮೂಲಕ ಬೆಸ್ಟ್ ಎನಿಸಿವೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ವಿವೋ Y20T ಸ್ಮಾರ್ಟ್‌ಫೋನ್‌ಗೆ (Vivo Y20T smartphone) ಭರ್ಜರಿ ಆಫರ್ ನೀಡಲಾಗಿದೆ.
ಹೌದು, ವಿವೋ ಕಂಪೆನಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಪ್ರಮುಖವಾಗಿ ವಿವೋ Y20T ಸ್ಮಾರ್ಟ್‌ಫೋನ್‌ಗೆ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ಇ- ಕಾಮರ್ಸ್ ಸೈಟ್‌ಗಳಲ್ಲಿ ಆಗಾಗ್ಗೆ ಈ ಫೋನ್‌ಗೆ ಆಫರ್ ನೀಡಲಾಗುತ್ತದೆ. ಈ ಫೋನ್ 64 GB ಸ್ಟೋರೇಜ್ ಆಯ್ಕೆ ಮೂಲಕ ಕಾಣಿಸಿಕೊಂಡಿದ್ದು, ಟ್ರಿಪಲ್ ಕ್ಯಾಮೆರಾ ಪಡೆಯುವ ಮೂಲಕ ಕ್ಯಾಮೆರಾ ಪ್ರಿಯರ ನೆಚ್ಚಿನ ಫೋನ್ ಆಗಿದೆ. ಹಾಗಿದ್ರೆ, ಈ ಫೋನ್ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ವಿವೋ Y20T ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಫೋನ್ 19,490 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಆದರೆ ನೀವು ಈಗ ಕೇವಲ 13,490ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ (Flipkart) ಈ ಫೋನ್‌ಗೆ 30% ರಿಯಾಯಿತಿ ನೀಡಿದೆ. ಇದರೊಂದಿಗೆ ಇನ್ನೂ ಕಡಿಮೆ ಬೆಲೆಯಲ್ಲಿ ಈ ಫೋನ್ ಖರೀದಿ ಮಾಡಲು ಅವಕಾಶ ಇದ್ದು, ಬ್ಯಾಂಕ್ ಆಫರ್ ಬಳಕೆ ಮಾಡಬಹುದು.
ಇದರೊಂದಿಗೆ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ ಹಾಗೂ ವಿಶೇಷ ಬೆಲೆ ಹೆಚ್ಚುವರಿ 809 ರೂ.ಗಳ ರಿಯಾಯಿತಿಯೊಂದಿಗೆ ನೀವು ಈ ಫೋನ್ ಅನ್ನು ಖರೀದಿ ಮಾಡಬಹುದು. ನಿಮ್ಮ ಬಳಿ ಇಷ್ಟು ಹಣ ಇಲ್ಲ ಎಂದಾದರೆ ತಿಂಗಳಿಗೆ 475 ರೂ.ಗಳಿಂದ ಆರಂಭವಾಗುವ ಇಎಮ್‌ಐ ಆಯ್ಕೆಯನ್ನು ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮಾಡಬಹುದಾಗಿದೆ.

ವಿವೋ Y20T ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ (LCD display) ಆಯ್ಕೆ ಪಡೆದಿದ್ದು, 20:9 ಆಕಾರ ಅನುಪಾತವನ್ನು ಹೊಂದಿದೆ. ಹಾಗೆಯೇ 89% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು ಸಣ್ಣ ಬೆಜೆಲ್ ಆಯ್ಕೆ ಪಡೆದಿದ್ದು, ಉತ್ತಮ ವೀಕ್ಷಣೆಗಾಗಿ, ವಾಟರ್‌ಡ್ರಾಪ್ ನಾಚ್ ಸ್ಕ್ರೀನ್ ಹಾಗೂ 720x1600px ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ.
ವಿವೋ Y20T ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 11nm ಚಿಪ್‌ಸೆಟ್ ಮತ್ತು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್ (Snapdragon 662 processor) ಮೂಲಕ ಕಾರ್ಯನಿರ್ವಹಿಸಲಿದ್ದು, ದೈನಂದಿನ ಬಳಕೆ ಮತ್ತು ಗೇಮಿಂಗ್‌ಗಾಗಿ ಅಡ್ರಿನೋ 610 ಜಿಪಿಯು ಬಲ ಪಡೆದಿದೆ. ಇದರೊಂದಿಗೆ 6GB RAM ಆಯ್ಕೆ ಹಾಗೂ 64 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಆಂಡ್ರಾಯ್ಡ್ v11 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಫನ್‌ಟಚ್ ಓಎಸ್ 11 ಅನ್ನು ರನ್ ಮಾಡಲಿದೆ.

ವಿವೋ Y20T ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಇನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ ಪ್ರಮುಖವಾಗಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಮತ್ತು ಆಟೋಫೋಕಸ್ ಡೆಪ್ತ್ ಸೆನ್ಸರ್ನ ನೊಂಗೆ ಈ ಫೋನ್ ಕಾಣಿಸಿಕೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅತ್ಯುತ್ತಮ ಎನಿಸಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಈ ಫೋನ್ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ 5.0, A2DP, LE,. ಜಿಪಿಎಸ್, ಗ್ಲೋನಾಸ್, ಬಿಡಿಎಸ್, ಗೆಲಿಲಿಯೋ, ಎಫ್‌ಎಮ್ ರೇಡಿಯೋ, ಮೈಕ್ರೋ ಯುಎಸ್‌ಬಿ 2.0, ಓಟಿಜಿ, ಫಿಂಗರ್‌ಪ್ರಿಂಟ್ ಸೆನ್ಸರ್ (ಸೈಡ್-ಮೌಂಟೆಡ್), ಅಕ್ಸೆಲೆರೊಮೀಟರ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್ ಪಡೆದಿದೆ.


Click it and Unblock the Notifications








