Just In
Don't Miss
- News
ಗೋಧಿ ಸರಬರಾಜಿನಲ್ಲಿ ಕೊರತೆ, ಪರಿಹಾರಗಳು
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Movies
'ವಿಕ್ರಾಂತ್ ರೋಣ'ನಿಗೆ ಅಂಜಿದ ಅಜಯ್ ದೇವಗನ್ ಸಿನಿಮಾ ಬಿಡುಗಡೆ ಮುಂದೂಡಿಕೆ!
- Automobiles
ದೇಶದಲ್ಲಿನ ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶ ಬಹಿರಂಗ
- Sports
RCB vs RR Qualifier 2: ಪಂದ್ಯದ ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ
- Finance
ಜೂನ್ 1ರಿಂದ ಎಲ್ಲಾ ರೀತಿಯ ಚಿನ್ನದ ಮೇಲೆ ಹಾಲ್ಮಾರ್ಕ್: ಇಲ್ಲಿದೆ ಪ್ರಮುಖ ಮಾಹಿತಿ
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ವಿವೋ Y21A ಸ್ಮಾರ್ಟ್‌ಫೋನ್ ಅನಾವರಣ!..ಬಿಗ್ ಬ್ಯಾಟರಿ ಬ್ಯಾಕ್‌ಅಪ್!
ಟೆಕ್ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ವಿವೋ ಕಂಪೆನಿ ಹೆಸರುವಾಸಿಯಾಗಿದೆ. ಈಗಾಗಲೇ ತನ್ನ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನೂತನವಾಗಿ ವಿವೋ ವಿವೋ Y21A ಅನ್ನು ಅನಾವರಣ ಮಾಡಿದೆ. ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, 13 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಒಳಗೊಂಡ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ.

ಹೌದು, ವಿವೋ ಕಂಪೆನಿ ಭಾರತದಲ್ಲಿ ವಿವೋ Y21A ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್ 6.51 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್ ಹಿಲಿಯೋ P22 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡೈಮಂಡ್ ಗ್ಲೋ ಹಾಗೂ ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ. ಇನ್ನುಳಿದಂತೆ ವಿವೋ Y21A ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ವಿವೋ Y21A ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಬಲ ಯಾವುದು
ವಿವೋ Y21A ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ P22 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್ ಓಎಸ್ 11.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4 GB RAM ಮತ್ತು 64 GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಬಾಹ್ಯಾ ಮೆಮೊರಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್
ವಿವೋ Y21A ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಕೆಲವು ಫೋಟೊ ಎಡಿಟಿಂಗ್ ಆಯ್ಕೆಗಳು ಲಭ್ಯ ಆಗಲಿವೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ವಿವೋ Y21A ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಡ್ಯುಯಲ್ ಸಿಮ್ ಸ್ಲಾಟ್‌ಗಳು, 4ಜಿ ಮತ್ತು ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಇದು ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ವಿವೋ Y21A ಸ್ಮಾರ್ಟ್‌ಫೋನ್ ಭಾರತದಲ್ಲಿ 4GB + 128GB ಅನಾವರಣ ಮಾಡಿದೆ. ಆದರೆ ಬೆಲೆಯನ್ನು ಇನ್ನು ಬಹಿರಂಗ ಪಡಿಸಿಲ್ಲ. ಇನ್ನು ಈ ಫೋನ್ ಡೈಮಂಡ್ ಗ್ಲೋ ಮತ್ತು ಮಿಡ್ನೈಟ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಹಾಗೆಯೇ ಈ ಹಿಂದಿನ ವಿವೋ Y21 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ HD+ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೋ P35 SoC ಪ್ರೊಸೆಸರ್ ಅನ್ನು ಹೊಂದಿದ್ದು, 4GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999