Home
ಸುದ್ದಿಜಾಲ

ವಿವೋ Y22s ಸ್ಮಾರ್ಟ್‌ಫೋನ್‌ ಬಿಡುಗಡೆ!..ಬೆಲೆ ಎಷ್ಟು?..ಫೀಚರ್ಸ್‌ ಏನು?

ವಿವೋ ಕಂಪೆನಿಯು ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಮುಖ್ಯವಾಗಿ ಆಕರ್ಷಕ ಕ್ಯಾಮೆರಾ ಹಾಗೂ ಲಾಂಗ್‌ ಬ್ಯಾಟರಿ ಬ್ಯಾಕಪ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಂದ ಕಂಪೆನಿ ಜನಪ್ರಿಯ ಪಡೆದಿದೆ. ಈಗಾಗಲೇ ವಿವೋ ಸಂಸ್ಥೆಯ ಹಲವು ಸ್ಮಾರ್ಟ್‌ಫೋನ್‌ಗಳು ಗ್ರಾಗಕರ ಗಮನ ಸೆಳೆದಿವೆ. ಇದೀಗ ವಿವೋ ಸಂಸ್ಥೆಯು ನೂತನವಾಗಿ ವಿವೋ Y22s ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಡಿಸ್‌ಪ್ಲೇ

ಹೌದು, ವಿವೋ ಕಂಪೆನಿಯು ಮಾರುಕಟ್ಟೆಗೆ ಹೊಸದಾಗಿ ವಿವೋ Y22s ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 90Hz ರೀಫ್ರೇಶ್‌ ರೇಟ್ ಅನ್ನು ಬೆಂಬಲಿಸುವ ಡಿಸ್‌ಪ್ಲೇ ಯನ್ನು ಹೊಂದಿದೆ. ಹಾಗೆಯೇ ಈ ಫೋನ್ ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

ನೀಡಲಾಗಿದೆ

ಇನ್ನು ವಿವೋ Y22s ಸ್ಮಾರ್ಟ್‌ಫೋನ್‌ 8 GB + 128 GB ವರೆಗೆ ವೇರಿಯಂಟ್‌ ಆಯ್ಕೆಯನ್ನು ಸಹ ನೀಡಲಾಗಿದೆ. ಈ ಫೋನ್ ಸ್ಟಾರ್ಲಿಟ್ ನೀಲಿ ಮತ್ತು ಬೇಸಿಗೆ ಸಯಾನ್ ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ. ಇನ್ನುಳಿದಂತೆ ವಿವೋ Y22s ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?

ಡಿಸ್‌ಪ್ಲೇ ರಚನೆ ಹೇಗಿದೆ?

ವಿವೋ Y22s ಸ್ಮಾರ್ಟ್‌ಫೋನ್‌ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದ್ದು, 89.67 % ಸ್ಕ್ರೀನ್‌ ಟು ಬಾಡಿ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್‌ ಕಾರ್ಯವೈಖರಿ ಏನು?

ಪ್ರೊಸೆಸರ್‌ ಕಾರ್ಯವೈಖರಿ ಏನು?

ವಿವೋ Y22s ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಓಎಸ್‌ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ 8 GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ವಿವೋ Y22s ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, f/1.8 ಲೆನ್ಸ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, f/2.4 ಲೆನ್ಸ್‌ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ವಿವೋ Y22s ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.0, GPS, FM ರೇಡಿಯೋ ಮತ್ತು USB ಟೈಪ್ C ಪೋರ್ಟ್ ಸೇರಿವೆ. ಈ ಫೋನ್‌ನ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಮಲ್ಟಿ ಟರ್ಬೊ 5.0 ಸಹ ಇದೆ.

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ವಿವೋ Y22s ಸ್ಮಾರ್ಟ್‌ಫೋನ್‌ ವೇಗವರ್ಧಕ, ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌, ಇ-ಕಂಪಾಸ್‌, ಗೈರೊಸ್ಕೋಪ್ ಸೆನ್ಸಾರ್‌ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಬಯೋಮೆಟ್ರಿಕ್‌ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಫೀಚರ್ಸ್‌ ಅನ್ನು ಬೆಂಬಲಿಸುತ್ತದೆ. ಈ ಫೋನ್ 192 ಗ್ರಾಂ ತೂಕ ಹೊಂದಿದೆ ಮತ್ತು 164.30×76.10×8.38mm ಅಳತೆಗಳನ್ನು ಹೊಂದಿದೆ. ಹಾಗೆಯೇ ಆಂಡ್ರಾಯ್ಡ್ 12 ಆಧಾರಿತ Funtouch OS 12 ಅನ್ನು ಬಾಕ್ಸ್‌ನ ಹೊರಗೆ ರನ್ ಮಾಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫೋನ್ ವಿಯೆಟ್ನಾಂನಲ್ಲಿ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ನೀಡುತ್ತದೆ. ಇದರ ಬೆಲೆ VND 59,90,000 (ಭಾರತದಲ್ಲಿ ಅಂದಾಜು 20,500ರೂ). ಈ ಸಾಧನವು ಎರಡು ಬಣ್ಣಗಳಲ್ಲಿ ಬರುತ್ತದೆ. ಅವು ಕ್ರಮವಾಗಿ ಸ್ಟಾರ್ಲಿಟ್ ಬ್ಲೂ ಮತ್ತು ಸಮ್ಮರ್ ಸಯಾನ್.

Best Mobiles in India

English summary
Vivo Y22s with Snapdragon 680 SoC Launched: Price, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+