Home
ಸುದ್ದಿಜಾಲ

ಮತ್ತೆ ಹೊಸ ಫೋನ್‌ ಲಾಂಚ್‌ ಮಾಡಿದ 'ವಿವೋ'!..ಅಚ್ಚರಿ ಮೂಡಿಸಿದ ಬೆಲೆ!

ವಿವೋ ಕಂಪನಿಯು ಇತ್ತೀಚಿಗಷ್ಟೆ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆ ಮಾಡಿರುವ ವಿವೋ Y27 5G ಸ್ಮಾರ್ಟ್‌ಫೋನ್‌ ತನ್ನ ಫೀಚರ್ಸ್‌ನಿಂದ ಗಮನ ಸೆಳೆದಿದೆ. ಆದ್ರೆ ಸಂಸ್ಥೆಯು ಈಗ ವಿವೋ Y27 ಮೊಬೈಲ್‌ ಅನ್ನು ಇದೀಗ ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಹೆಲಿಯೊ G85 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೌದು, ವಿವೋ ಸಂಸ್ಥೆಯು ಹೊಸದಾಗಿ ವಿವೋ Y27 ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ 6GB RAM + 128 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದ್ದು, 5000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಅಲ್ಲದೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ.

ಮತ್ತೆ ಹೊಸ ಫೋನ್‌ ಲಾಂಚ್‌ ಮಾಡಿದ 'ವಿವೋ'!..ಅಚ್ಚರಿ ಮೂಡಿಸಿದ ಬೆಲೆ!

ಇದರೊಂದಿಗೆ ಮುಂಭಾಗದಲ್ಲಿ 8ಎಂಪಿ ಸೆಲ್ಫಿ ಕ್ಯಾಮೆರಾ ಅನ್ನು ಸಹ ಪಡೆದಿದೆ. ಹಾಗೆಯೇ ಇತ್ತೀಚಿನ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್ ಸಹ ಪಡೆದಿದೆ. ಇನ್ನು ಈ ಮೊಬೈಲ್‌ ಬರ್ಗಂಡಿ ಬ್ಲಾಕ್, ಸೀ ಬ್ಲೂ ಮತ್ತು ಗಾರ್ಡನ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ. ಇನ್ನುಳಿದಂತೆ ವಿವೋ Y27 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y27 ಮೊಬೈಲ್‌ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ವಿವೋ Y27 ಮೊಬೈಲ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಡಿಸ್‌ಪ್ಲೇ LCD ಸ್ಕ್ರೀನ್‌ ಹೊಂದಿದ್ದು, ವಾಟರ್‌ ಡ್ರಾಪ್‌ ನಾಚ್‌ ಮಾದರಿಯನ್ನು ಇದು ಪಡೆದಿದೆ.

ವಿವೋ Y27 ಫೋನ್‌ ಪ್ರೊಸೆಸರ್‌ ಪವರ್‌ ಏನು : ವಿವೋ Y27 ಫೋನ್‌ ಮೀಡಿಯಾ ಟೆಕ್ ಹೆಲಿಯೊ G85 SoC ಪ್ರೊಸೆಸರ್‌ ಪವರ್‌ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಮೊಬೈಲ್‌ 6GB RAM + 128 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಇದು ಪಡೆದಿದ್ದು, ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಪಡೆದಿದೆ.

ವಿವೋ Y27 ಫೋನ್‌ ಕ್ಯಾಮೆರಾ ಸೆನ್ಸಾರ್‌ ಎಷ್ಟಿದೆ : ವಿವೋ Y27 ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಇದು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಆಗಿದ್ದು, ಹಾಗೆಯೆ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಬಲದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ವಿವೋ Y27 ಫೋನ್‌ ಬ್ಯಾಟರಿ ಮತ್ತು ಇತರೆ ಆಯ್ಕೆಗಳು : ವಿವೋ Y27 ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದಕ್ಕೆ ಅನುಗುಣವಾಗಿ 44W
ಫಾಸ್ಟ್‌ ಚಾರ್ಜಿಂಗ್‌ ಬೆಂಬಲವನ್ನು ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಸೌಲಭ್ಯದ ಆಯ್ಕೆಗಳು ಸಹ ಇವೆ.

ವಿವೋ Y27 ಫೋನ್‌ ಬೆಲೆ ಮತ್ತು ಕಲರ್‌ ಆಯ್ಕೆ : ವಿವೋ Y27 ಮೊಬೈಲ್‌ನ 6GB RAM + 128GB ಸ್ಟೋರೇಜ್‌ ವೇರಿಯಂಟ್‌ನ ಬೆಲೆಯು 14,999ರೂ. ಆಗಿದೆ. ಅಂದಹಾಗೆ ಈ ಮೊಬೈಲ್‌ ಬರ್ಗಂಡಿ ಬ್ಲಾಕ್, ಸೀ ಬ್ಲೂ ಮತ್ತು ಗಾರ್ಡನ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ.

Best Mobiles in India

English summary
Vivo Y27 phone Launched in India. Price, Specifications and other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+