Vivo: ವಿವೋ Y28 ಫೋನ್ ಫೀಚರ್ಸ್ ಲೀಕ್! ಸ್ಮಾರ್ಟ್‌ಫೋನ್ ಮಾರುಕಟ್ಟೆಯೇ ಶೇಕ್...
ವಿವೋ ಫೋನ್‌ಗಳು (Vivo smartphone) ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸುತ್ತವೆ. ಅದರಂತೆ ಈಗಾಗಲೇ ಲಾಂಚ್ ಆಗಿರುವ ವಿವೋ ಫೋನ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದು, ಈ ಬೆಳವಣಿಗೆ ನಡುವೆ ಈಗ ವಿವೋದ Y28 (Vivo Y28 Smartphone) ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿವೆ.
ಹೌದು, ಕ್ಯಾಮೆರಾ ಪ್ರಿಯರಿಗೆ ಹಾಗೂ ಉತ್ತಮ ಪ್ರೊಸೆಸರ್ ಇರುವ ಸ್ಮಾರ್ಟ್‌ಫೋನ್ ಬೇಕು ಅನ್ನೋರಿಗೆ ವಿವೋದ ಬಜೆಟ್ ಫೋನ್‌ಗಳು ಉತ್ತಮ ಆಯ್ಕೆ ಆಗಿರಲಿವೆ. ಅದರಂತೆ ಇದೀಗ ವಿವೋ Y28 ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಲೀಕ್ ಆಗಿವೆ. ಈ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಬಲದೊಂದಿಗೆ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಲೀಕ್ ಫೀಚರ್ಸ್ ಏನು?, ಈ ಫೋನ್ ಭಾರತದಲ್ಲಿ ಕಮಾಲ್ ಮಾಡಲಿದೆಯಾ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿವೋ Y28 ಸ್ಮಾರ್ಟ್‌ಫೋನ್: ವಿವೋ Y28 5G ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಈ ವರ್ಷದ ಜುಲೈನಲ್ಲಿ ಅನಾವರಣಗೊಂಡ ವಿವೋ Y27 5G ಗೆ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಮುಂಬರುವ ಈ ಹೊಸ ಸ್ಮಾರ್ಟ್‌ಫೋನ್ ಹಿಂದಿನ ಮಾದರಿಗಿಂತ ನವೀಕರಿಸಿದ ಫೀಚರ್ಸ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ.
ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಗುರುತಿಸಲಾಗಿದ್ದು, ಅಲ್ಲಿ ಈ ಫೋನ್ ಬಗ್ಗೆ ಕೆಲವು ಪ್ರಮುಖ ಫೀಚರ್ಸ್ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದರಲ್ಲಿನ ಈಗ ಒಂದು ವರದಿಯಲ್ಲಿ ವಿವೋ Y28 5G ನ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ತೋರಿಸುವ ಚಿತ್ರವನ್ನು ಪ್ರಚಾರ ಮಾಡಲಾಗಿದೆ. ಇದರೊಂದಿಗೆ ಈ ವಿಶೇಷ ಫೋನ್ ಮೂರು ವಿಭಿನ್ನ RAM ಮತ್ತು ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಇನ್ನು ಅಪ್ಪುಅಲ್ಸ್ ನ ವರದಿಯ ಪ್ರಕಾರ ವಿವೋ Y28 5G ಭಾರತದಲ್ಲಿ ಕ್ರಿಸ್ಟಲ್ ಪರ್ಪಲ್ ಮತ್ತು ಗ್ಲಿಟರ್ ಆಕ್ವಾ ಬಣ್ಣಗಳಲ್ಲಿ ಕಂಡುಬರಲಿದೆ ಎಂದು ಹೇಳಲಾಗಿದೆ. ಅದಾಗ್ಯೂ ಈ ವರದಿಯು ನಿಖರವಾದ ಬಿಡುಗಡೆ ದಿನಾಂಕವನ್ನು ಉಲ್ಲೇಖಿಸಿಲ್ಲ. ಈ ವರದಿಯಲ್ಲೂ ಸಹ ಸ್ಟೋರೇಜ್ ಆಯ್ಕೆ ಬಗ್ಗೆ ಮಾಹಿತಿ ನೀಡಲಾಗಿದ್ದು, ವಿವೋ Y28 5G ಸ್ಮಾರ್ಟ್‌ಫೋನ್‌ನ 4GB + 128GB ಗೆ 13,999, 6GB + 128GB ಮತ್ತು 8GB + 128GB ಫೋನ್‌ಗಳಿಗೆ ಕ್ರಮವಾಗಿ 15,499 ಮತ್ತು 16,999 ರೂ.ಗಳು ಇರಬಹುದು ಎಂದು ಊಹಿಸಲಾಗಿದೆ.
ಇದರೊಂದಿಗೆ ಮೇಲೆ ತಿಳಿಸಲಾದ ಬೆಲೆಗಳ ಮೇಲೆ ಹೆಚ್ಚುವರಿ 2.7 ಶೇಕಡಾ ರಿಯಾಯಿತಿಯನ್ನು ನೀಡುತ್ತದೆ ಎಂದು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಂದರೆ ಈ ಫೋನ್ ಖರೀದಿ ವೇಳೆ ಗ್ರಾಹಕರು 1,500 ರೂ.ಗಳ ವರೆಗೆ ಉಳಿತಾಯ ಮಾಡಬಹುದು ಎನ್ನಲಾಗಿದೆ. ಇದರೊಂದಿಗೆ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗುತ್ತದೆ ಎಂದು ವರದಿಯಾಗಿದೆ.
ಈ ಎಲ್ಲಾ ಬೆವಳಣಿಗೆ ನಡುವೆ ವಿವೋ Y28 5G ವಿನ್ಯಾಸ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ರಿಯರ್ ಪ್ಯಾನಲ್ ಮೇಲಿನ ಎಡ ಮೂಲೆಯಲ್ಲಿ ಲಂಬವಾಗಿ ಜೋಡಿಸಲಾದ ಪ್ರತ್ಯೇಕ ವೃತ್ತಾಕಾರದ ಘಟಕಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಕಾಣಿಸಿಕೊಂಡಿದೆ. ಎರಡನೇ ಕ್ಯಾಮೆರಾದ ಕೆಳಗೆ ವೃತ್ತಾಕಾರದ ಎಲ್ಇಡಿ ಫ್ಲ್ಯಾಶ್ ಲೈಟ್ ಆಯ್ಕೆ ನೀಡಲಾಗಿದ್ದು, . ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ಕಂದುಬಂದಿದೆ.

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಬಗ್ಗೆ ಮೈ ಸ್ಮಾರ್ಟ್‌ಪ್ರೈಸ್ ವರದಿ ಮಾಡಿದ್ದು, ಅದರಂತೆ ಈ ಫೋನ್ ಅನ್ನು ಬ್ಲೂಟೂತ್ SIG ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ಗಳಲ್ಲಿ ಗುರುತಿಸಲಾಗಿರುವುದನ್ನು ಉಲ್ಲೇಖ ಮಾಡಲಾಗಿದೆ. ಜೊತೆಗೆ ಮಾಲಿ G57 MP2 GPU ನೊಂದಿಗೆ ಈ ಫೋನ್ ಕಾಣಿಸಿಕೊಳ್ಳಲಿದ್ದು, 6nm ಮೀಡಿಯಾಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್ ಅನ್ನು ಫೋನ್ ಪಡೆದಿರಬಹುದು ಎಂದು ಸೂಚಿಸಲಾಗಿದೆ.


Click it and Unblock the Notifications








