Home
ಸುದ್ದಿಜಾಲ

ಮಾರುಕಟ್ಟೆಗೆ ಬರ್ತಿದೆ Vivo Y300 5G ಫೋನ್; 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. ಲಾಂಚ್ ಯಾವಾಗ?

ವಿವೋ (Vivo) ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ವಿವೋ Y300 5G (Vivo Y300 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ. ಹೌದು, ಕಂಪನಿಯು ಕಳೆದ ತಿಂಗಳು ಭಾರತದಲ್ಲಿ ವಿವೋ Y300 ಪ್ಲಸ್ 5G (Vivo Y300+ 5G) ಫೋನನ್ನು ಲಾಂಚ್ ಮಾಡಿತ್ತು. ಇದೀಗ, ಮತ್ತೊಂದು ಹೊಸ ಮೊಬೈಲ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಫೋನಿನ ಪ್ರಮುಖ ವೈಶಿಷ್ಟ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಬನ್ನಿ, ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎನ್ನುವುದನ್ನು ತಿಳಿಯೋಣ.

ಕಂಪನಿಯು ಮುಂದಿನ 15 ದಿನಗಳಲ್ಲಿ ವಿವೋ Y300 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ನ ಮುಂಭಾಗದಲ್ಲಿ ಪಂಚ್ ಹೋಲ್ ಇರುತ್ತದೆ. ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಬಟನ್ ಮತ್ತು ಪವರ್ ಬಟನ್ ಇರುತ್ತದೆ. ಅಲ್ಲದೆ, ಕೆಳಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ ಲಭ್ಯವಿರುತ್ತದೆ. ಫೋನನ್ನು ಫ್ಲಾಟ್ ವಿನ್ಯಾಸದಲ್ಲಿ ಪರಿಚಯಿಸಲಾಗುತ್ತದೆ. ಇದು ಡ್ಯುಯಲ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ ಎಐ ಔರಾ ಲೈಟ್ ಮತ್ತು ಡ್ಯುಯಲ್ ಎಲ್ಇಡಿ ಫ್ಲ್ಯಾಷ್ ಲೈಟ್ ಹೊಂದಿದೆ.

Vivo Y300 5G ಬಿಡುಗಡೆಗೆ ಸಿದ್ಧ; 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. ಬೆಲೆ ನೋಡಿ

ವಿವೋ Y300 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮಾಹಿತಿಯ ಪ್ರಕಾರ, ವಿವೋ Y300 5G ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿರುತ್ತದೆ. ಇದಲ್ಲದೆ, ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಒಳಗೊಂಡಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ವಿವೋ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 8 ಕೋರ್ ಪ್ರೊಸೆಸರ್ ಆಗಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಪ್ರಕ್ರಿಯೆ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ.

ಸ್ಟೋರೇಜ್‌ ಆಯ್ಕೆ

ವಿವೋ Y300 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ. ಜೊತೆಗೆ, ಈ ಫೋನಿನ ಸ್ಟೋರೇಜ್‌ ಹೆಚ್ಚಿಸಲು, ಇದು ಮೈಕ್ರೊ ಎಸ್‌ಡಿ ಕಾರ್ಡ್‌ನ ಸೌಲಭ್ಯವನ್ನು ಹೊಂದಿರುತ್ತದೆ. ಇದರ ಮೂಲಕ 1 TB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

ಈ ಸುದ್ದಿ ಓದಿದ್ದೀರಾ?: OPPO Reno 13 ಸರಣಿ ಬಿಡುಗಡೆಗೆ ಸಿದ್ಧ; ಒಂದಲ್ಲ.. ಎರಡು ಹೊಸ ಫೋನ್! ವಿಶೇಷತೆಗಳೇನು?

ಕ್ಯಾಮೆರಾ ಸೆಟಪ್

ಹೊಸ ವಿವೋ Y300 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಸಿಂಗಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ IMX882 ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಆಳ ಸಂವೇದಕ ಇರುತ್ತದೆ. ಜೊತೆಗೆ, ಎಐ (AI) ಔರಾ ಲೈಟ್ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಮುಂಬರುವ ಫೋನನ್ನು 5,000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಸೌಲಭ್ಯ ನೀಡಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ವಿವೋ Y300 5G ಮೊಬೈಲ್ ನೀರು ಮತ್ತು ಧೂಳು ನಿರೋಧಕ ⁠IP64 ರೇಟಿಂಗ್ ಪಡೆದಿದೆ. ಫೋನಿನಲ್ಲಿ ಹಲವು ಎಐ (⁠AI) ಫೀಚರ್ಸ್‌ ಲಭ್ಯವಿರಲಿದೆ. ಎಐ ಔರಾ ಲೈಟ್ ಪೋರ್ಟ್ರೇಟ್, ಎಐ ಡಾಕ್ಯುಮೆಂಟ್‌ಗಳು, ಎಐ ಅಳಿಸುವಿಕೆ, ಎಐ ಸೂಪರ್‌ಮೂನ್ ಮತ್ತು ಎಐ ವರ್ಧನೆ ಸೇರಿದಂತೆ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Best Mobiles in India

English summary
Vivo Y300 5G launch with 5000mAh Battery and 50MP camera: Expected Specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+