ವಿವೋ Y33s 5G ಸ್ಮಾರ್ಟ್‌ಫೋನ್ ಬಿಡುಗಡೆ!..ಡ್ಯುಯಲ್ ಕ್ಯಾಮೆರಾ ರಚನೆ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ವಿವೋ ಕಂಪೆನಿ ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಗುರುತಿಸಿಕೊಂಡಿದೆ. ಕಂಪನಿಯು Y ಸರಣಿಯಲ್ಲಿ ವಿವೋ Y33s ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತ್ತು. ಇದೀಗ ನೂತನವಾಗಿ ವಿವೋ Y33s 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಅಧಿಕ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಆಕರ್ಷಕ ಎನಿಸಿಕೊಂಡಿದೆ.

ಹೌದು, ವಿವೋ ಸ್ಮಾರ್ಟ್‌ಫೋನ್ ಕಂಪೆನಿ ತನ್ನ ಹೊಸ ವಿವೋ Y33s 5G ಸ್ಮಾರ್ಟ್‌ಫೋನ್ ಅನ್ನು ಚೀನಾ ಮೊಬೈಲ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 700 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. 4GB + 128GB, 6GB + 128GB ಮತ್ತು 8GB + 128GB ಸ್ಟೋರೇಜ್ ವೇರಿಯಂಟ್‌ನ ಆಯ್ಕೆಗಳನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಹಾಗಾದರೇ ವಿವೋ Y33s 5G ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಆಕರ್ಷಕ ಡಿಸ್‌ಪ್ಲೇ ರಚನೆ
ವಿವೋ Y33s 5G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ದೊಂದಿಗೆ 6.58 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು IPS ಎಲ್‌ಸಿಡಿ ಹೆಚ್‌ಡಿ + ಮಾದರಿ ಯನ್ನು ಪಡೆದಿದ್ದು, ವಾಟರ್‌ಡ್ರಾಪ್ ಸ್ಟೈಲ್ ನಾಚ್ ವಿನ್ಯಾಸ ಹೊಂದಿದೆ.

ಪ್ರೊಸೆಸರ್ ಪವರ್ ಯಾವುದು
ವಿವೋ Y33s 5G ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಇದೆ. ಇನ್ನು ಈ ಸ್ಮಾರ್ಟ್‌ಫೋನ್ 4GB + 128GB, 6GB + 128GB ಮತ್ತು 8GB + 128GB ಆಂತರಿಕ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್
ವಿವೋ Y33s 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಇದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಇದರೊಂದಿಗೆ 8 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಕ್ಯಾಮೆರಾ ಆಯ್ಕೆಯು ಬೇಸಿಕ್ ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್
ವಿವೋ Y33s 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಇದರೊಂದಿಗೆ 5G ಮತ್ತು 4G LTE, ಡ್ಯುಯಲ್ ಬ್ಯಾಂಡ್ ವೈ ಫೈ, ಬ್ಲೂಟೂತ್ v5 ಮತ್ತು USB OTG ಆಯ್ಕೆ ನೀಡಲಾಗಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ವಿವೋ Y33s 5G ಸ್ಮಾರ್ಟ್‌ಫೋನ್ 4GB + 128GB ಬೇಸ್ ವೇರಿಯಂಟ್ ಬೆಲೆಯು CNY 1,299 (ಭಾರತದಲ್ಲಿ ಅಂದಾಜು 15,500ರೂ. ಆಗಿದೆ). ಇನ್ನು ಈ ಫೋನ್ ಬ್ಲ್ಯಾಕ್, ನೆಬ್ಯುಲಾ ಬ್ಲೂ ಮತ್ತು ಸ್ನೋ ಡಾನ್ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.


Click it and Unblock the Notifications








