Home
ಸುದ್ದಿಜಾಲ

ಇದೇ ಆಗಸ್ಟ್ 23 ರಂದು ವಿವೋ Y33s ಸ್ಮಾರ್ಟ್‌ಫೋನ್ ಬಿಡುಗಡೆ ಸಾಧ್ಯತೆ!

ಪ್ರತಿಷ್ಠಿತ ಮೊಬೈಲ್ ಕಂಪನಿಗಳ ಪೈಕಿ ಒಂದಾಗಿರುವ ವಿವೋ ಕಂಪನಿಯು ಈಗಾಗಲೇ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಅವುಗಳಲ್ಲಿ ಬಹುತೇಕ ಫೋನ್‌ಗಳು ಬಜೆಟ್‌ ದರದ ರೇಟ್‌ ಅನ್ನು ಪಡೆದಿದೆ. ಇನ್ನು ಕೆಲವು ಹೈ ಎಂಡ್‌ ಮಾಡೆಲ್‌ನಲ್ಲಿ ಕಾಣಿಸಿಕೊಂಡಿವೆ. ಸಂಸ್ಥೆಯು ಇದೀಗ ವಿವೋ Y33s ಹೆಸರಿನ ಹೊಸದೊಂದು ಸ್ಮಾರ್ಟ್‌ಫೋನ್‌ ಅನ್ನು ತನ್ನ ಲಿಸ್ಟ್‌ಗೆ ಸೇರಿಸಲು ಸಜ್ಜಾಗಿದ್ದು, ಅದಕ್ಕೆ ಮುಹೂರ್ತ ಫಿಕ್ಸ್‌ ಮಾಡಿದೆ.

Y33s

ಹೌದು, ವಿವೋ ಕಂಪನಿಯು ಹೊಸ ವಿವೋ Y33s ಸ್ಮಾರ್ಟ್‌ಫೋನ್ ಅನ್ನು ಇದೇ ಆಗಸ್ಟ್ 23 ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಾಗಿದೆ. ಅಮೆಜಾನ್ ಇ-ಕಾಮರ್ಸ್ ತಾಣದಲ್ಲಿ ವಿವೋ Y33s ಸ್ಮಾರ್ಟ್‌ಫೋನ್ ಕಾಣಿಸಲಾಗಿದೆ. ಇನ್ನು ಈ ಪೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇನ್ನುಳಿದಂತೆ ಈ ಫೋನಿನ ಬೆಲೆ ಎಷ್ಟು ಹಾಗೂ ಇತರೆ ಫೀಚರ್ಸ್‌ಗಳು ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿವೋ Y33s ಡಿಸ್‌ಪ್ಲೇ

ವಿವೋ Y33s ಡಿಸ್‌ಪ್ಲೇ

ವಿವೋ Y33s ಸ್ಮಾರ್ಟ್‌ಫೋನ್ 2,408x1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇಯು Halo ಫುಲ್‌ ವ್ಯೂವ್ ಮಾದರಿಯನ್ನು ಪಡೆದಿದ್ದು, ಪಂಚ್‌ಹೋಲ್ ವಿನ್ಯಾಸ ಹೊಂದಿದೆ.

ವಿವೋ Y33s ಪ್ರೊಸೆಸರ್

ವಿವೋ Y33s ಪ್ರೊಸೆಸರ್

ವಿವೋ Y33s ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಇದೆ. ಇನ್ನು ಈ ಸ್ಮಾರ್ಟ್‌ಫೋನ್ 8GB RAM ಸಾಮರ್ಥ್ಯ ಮತ್ತು 128GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ವಿವೋ Y33s ಕ್ಯಾಮೆರಾ

ವಿವೋ Y33s ಕ್ಯಾಮೆರಾ

ವಿವೋ Y33s ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್ ಇರಲಿದೆ. ಸೆಕೆಂಡರಿ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 16 ಎಂಪಿಯ ಸೆಲ್ಫಿ ಕ್ಯಾಮೆರಾ ಒಳಗೊಂಡಿರುತ್ತದೆ.

ವಿವೋ Y33s ಬ್ಯಾಟರಿ

ವಿವೋ Y33s ಬ್ಯಾಟರಿ

ವಿವೋ Y33s ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರಲಿದ್ದು, ಅದಕ್ಕೆ ಪೂರಕವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಇರಲಿದೆ. ಇದರೊಂದಿಗೆ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ v5 ಮತ್ತು USB OTG ಆಯ್ಕೆ ನೀಡಲಾಗಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

ನಿರೀಕ್ಷಿತ ಬೆಲೆ ಎಷ್ಟು?

ನಿರೀಕ್ಷಿತ ಬೆಲೆ ಎಷ್ಟು?

ರಿಯಲ್‌ಮಿ C21Y ಸ್ಮಾರ್ಟ್‌ಫೋನ್ ಇದೇ ಆಗಸ್ಟ್ 23 ರಂದು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯು ತಿಳಿಸಿದೆ. 8GB RAM + 128GB ಸ್ಟೋರೇಜ್ ಮಾಡೆಲ್‌ ಬೆಲೆಯು 17,990 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಮಿಡ್ ಡೇ ಡ್ರೀಮ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ ಎನ್ನಲಾಗಿದೆ.

Best Mobiles in India

English summary
Vivo Y33s Launch In India Is Tipped For August 23: Price And Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+