vivo: 128 GB ಸ್ಟೋರೇಜ್ ಆಯ್ಕೆಯ ವಿವೋದ ಈ ಫೋನ್‌ಗೆ 36% ರಿಯಾಯಿತಿ, ಟ್ರಿಪಲ್ ಕ್ಯಾಮೆರಾ
ವಿವೋ (vivo) ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದ್ದು, ಈ ಫೋನ್‌ಗಳನ್ನು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಲಾಂಚ್ ಆದ ಫೋನ್‌ಗಳು ಆಫರ್ ಬೆಲೆಗೆ ಲಭ್ಯ ಆಗುತ್ತಿರುವುದರಿಂದ ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಬಹುಬೇಡಿಕೆ ಇರುವ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಆಫರ್ ನೀಡಲಾಗಿದೆ.
ಹೌದು, ವಿವೋ Y33s ಸ್ಮಾರ್ಟ್‌ಫೋನ್ (Vivo Y33s smartphone) ಇದೀಗ ಭರ್ಜರಿ ಆಫರ್ ಪಡೆದಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 128 GB ಇಂಟರ್ ಸ್ಟೋರೇಜ್ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ Y33s ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 21,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 13,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 36% ರಿಯಾಯಿತಿ ಘೋಷಣೆ ಮಾಡಿರುವುದರಿಂದ ಇಷ್ಟು ಕಡಿಮೆ ಬೆಲೆಗೆ ಈ ಫೋನ್ ಲಭ್ಯ ಇದೆ. ಇದರೊಂದಿಗೆ ನೀವು ಬ್ಯಾಂಕ್ ಆಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ. ಜೊತೆಗೆ ಪ್ರತಿ ತಿಂಗಳು 867 ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಫೋನ್ ಖರೀದಿ ಮಾಡಬಹುದಾಗಿದೆ.
ವಿವೋ Y33s ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಆಫರ್ ಬೆಲೆಗೆ ಲಭ್ಯ ಇದೆ ಎಂದ ಮಾತ್ರಕ್ಕೆ ಹಣ ಉಳಿಸುವ ಹಿನ್ನೆಲೆ ಹಿಂದು ಮುಂದು ನೋಡದೆ ಖರೀದಿ ಮಾಡಲು ಮುಂದಾಗಬೇಡಿ. ಬದಲಾಗಿ ಇದರ ಫೀಚರ್ಸ್ ಕಡೆ ಕಣ್ಣಾಯಿಸಿ. ಅದರಂತೆ ಈ ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 83.4% ಸ್ಕ್ರೀನ್-ಟು-ಬಾಡಿ ಅನುಪಾತ, 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 401 ppi ಸಾಂದ್ರತೆ ಹೊಂದಿದೆ.

ವಿವೋ Y33s ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾಟೆಕ್ MT6769V/CU ಹಿಲಿಯೊ G80 (12 nm) ಪ್ರೊಸೆಸರ್ ಬಲ ಪಡೆದಿದ್ದು, ಮಾಲಿ-G52 MC2 ಗ್ರಾಫಿಕ್ಸ್ ಬೆಂಬಲದೊಂದಿಗೆ ಆಂಡ್ರಾಯ್ಡ್ 11, ಫನ್‌ಟಚ್ 11.1 ಓಎಸ್ ಅನ್ನು ಇದು ರನ್ ಮಾಡಲಿದೆ. ಇದರೊಂದಿಗೆ 128GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 8GB RAM ಸ್ಟೋರೇಜ್ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.
ವಿವೋ Y33s ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಪಡೆದಿದೆ. ಈ ಸೆನ್ಸರ್‌ಗಳು ಎಲ್ಇಡಿ ಫ್ಲ್ಯಾಶ್ ಸೌಲಭ್ಯದ ಮೂಲಕ ಉತ್ತಮ ಫೋಟೋ ಸೆರೆಹಿಡಿಯಲು ಸಹಾಯ ಮಾಡಲಿವೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ವಿವೋ Y33s ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು, 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಎಫ್‌ಎಮ್ ರೇಡಿಯೋ, ಯುಎಸ್‌ಬಿ ಟೈಪ್-ಸಿ 2.0 ಕನೆಕ್ಟಿವಿಟಿ ಬೆಂಬಲ ಪಡೆದಿದೆ.


Click it and Unblock the Notifications








