Home
ಸುದ್ದಿಜಾಲ

Vivo: ಬಜೆಟ್‌ ಬೆಲೆಯಲ್ಲಿ ವಿವೋ Y33t ಸ್ಮಾರ್ಟ್‌ಫೋನ್ ಲಾಂಚ್! 128GB ಸ್ಟೋರೇಜ್‌.. ಬೆಲೆ ಎಷ್ಟು?

ವಿವೋ (vivo) ತನ್ನ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ನಡುವೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಾಗಿದ್ದು, ಈ ಫೋನ್‌ ಬಜೆಟ್‌ ಸ್ನೇಹಿ (Budget friendly) ಎಂಬುದು ವಿಶೇಷ.

ಹೌದು, ವಿವೋ Y33t ಸ್ಮಾರ್ಟ್‌ಫೋನ್‌ (Vivo Y33t smartphone) ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ ಮೀಡಿಯಾಟೆಕ್‌ G85 ಪ್ರೊಸೆಸರ್ (MediaTek G85 processor) ಬಲ ಪಡೆದುಕೊಂಡಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದ್ದು, ಈ ಮೂಲಕ ಗ್ರಾಹಕರು ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೊಡಿ.

ಬಜೆಟ್‌ ಬೆಲೆಯಲ್ಲಿ ವಿವೋ Y33t ಸ್ಮಾರ್ಟ್‌ಫೋನ್ ಲಾಂಚ್! 128GB ಸ್ಟೋರೇಜ್‌...

ವಿವೋ Y33t ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.56 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ನೇರ ಅಂಚಿನ ಮಧ್ಯ-ಫ್ರೇಮ್ ವಿನ್ಯಾಸವನ್ನು ಹೊಂದಿದೆ. ಇದರೊಂದಿಗೆ 60Hz ರಿಫ್ರೆಶ್ ರೇಟ್ ಆಯ್ಕೆ ಹಾಗೂ ಡ್ಯೂಡ್ರಾಪ್ ನಾಚ್ ಶೈಲಿಯಲ್ಲಿ ಇದು ಕಾಣಿಸಿಕೊಂಡಿದೆ. ಇನ್ನು ಹೆಚ್ಚಿನ ರಿಫ್ರೆಶ್ ರೇಟ್ ಆಯ್ಕೆ ಬೇಕು ಎನ್ನುವವರಿಗೆ ಇದು ಇಷ್ಟವಾಗದೇ ಇರಬಹುದು.

ವಿವೋ Y33t ಸ್ಮಾರ್ಟ್‌ಫೋನ್‌ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ G85 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಮಧ್ಯಮ ಶ್ರೇಣಿಯ ಚಿಪ್‌ಸೆಟ್ ಆಗಿದೆ. ಇದರೊಂದಿಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ನಿತ್ಯದ ಸಾಮಾನ್ಯ ಬಳಕೆಗೆ ಈ ಫೋನ್‌ ಖರೀದಿ ಮಾಡಬಹುದಾಗಿದೆ. ಜೊತೆಗೆ ಸಾಧನವು 6GB ವರ್ಚುವಲ್ ಮೆಮೊರಿ ಆಯ್ಕೆಯನ್ನೂ ಸಹ ನೀಡಲಾಗಿದೆ. ಉಳಿದಂತೆ ಆಂಡ್ರಾಯ್ಡ್‌ 13 ಆಧಾರಿತ ಒರ್ಜಿನ್‌ಓಎಸ್ 3 ನಲ್ಲಿ ರನ್‌ ಆಗಲಿದೆ.

ವಿವೋ Y33t ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್ ಡೀಪ್‌ ಸೆನ್ಸರ್‌ ಆಯ್ಕೆ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ವಿವೋ Y33t ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಉಳಿದಂತೆ ಇದು ಸುಧಾರಿತ ಬ್ಲೂಟೂತ್‌ ಆವೃತ್ತಿ, ವೈ-ಫೈ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಬಯೋಮೆಟ್ರಿಕ್‌ಗಳಿಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆಯನ್ನು ಈ ಫೋನ್‌ ಹೊಂದಿದೆ.

ವಿವೋ Y33t ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಫೋನ್ 749 ಯುವಾನ್ ($110) ಅನ್ನು ಹೊಂದಿದೆ. ಅಂದರೆ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 9,139ರೂ.ಗಳಾಗಿರಬಹುದು. ಇದು ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ವೈಲ್ಡ್ ಗ್ರೀನ್ ಮತ್ತು ಕ್ರಿಸ್ಟಲ್ ಪರ್ಪಲ್‌ನಲ್ಲಿ ಕಾಣಿಸಿಕೊಂಡಿದೆ. ಇದು JD.com ಮೂಲಕ ಚೀನಾದಲ್ಲಿ ಖರೀದಿಗೆ ಮಾತ್ರ ಲಭ್ಯವಿದೆ. ಭಾರತವೂ ಸೇರಿದಂತೆ ಇತರೆ ದೇಶಗಳಲ್ಲಿ ಈ ಫೋನ್‌ ಶೀಘ್ರದಲ್ಲೇ ಲಭ್ಯವಿದೆ.

ಬಜೆಟ್‌ ಬೆಲೆಯಲ್ಲಿ ವಿವೋ Y33t ಸ್ಮಾರ್ಟ್‌ಫೋನ್ ಲಾಂಚ್! 128GB ಸ್ಟೋರೇಜ್‌...

ಈ ನಡುವೆ ಚೀನಾದಲ್ಲಿ ವಿವೋ Y78t ಎಂಬ ಹೊಸ ಸ್ಮಾರ್ಟ್‌ಫೋನ್‌ ಅನ್ನು ಸಹ ಲಾಂಚ್‌ ಮಾಡಿದೆ. ಈ ಫೋನ್ 6.64 ಇಂಚಿನ ಎಲ್‌ಸಿಡಿ ಪ್ಯಾನೆಲ್ ಅನ್ನು ಹೊಂದಿದ್ದು, ಸ್ನಾಪ್‌ಡ್ರಾಗನ್ 6 ಜನ್‌ 1 ಚಿಪ್‌ಸೆಟ್‌ ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರೊಂದಿಗೆ 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಬೃಹತ್ 6,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಈ ಸ್ಮಾರ್ಟ್‌ಫೋನ್ 8 GB RAM + 128 GB ಸ್ಟೋರೇಜ್‌, 8 GB RAM + 256 GB ಸ್ಟೋರೇಜ್‌ ಮತ್ತು 12 GB RAM + 256 GB ಸ್ಟೋರೇಜ್‌ನ ಮೂರು ಕಾನ್ಫಿಗರೇಶನ್‌ಗಳಲ್ಲಿ ಕಾಣಿಸಿಕೊಂಡಿದೆ. ಇದರ ಆರಂಭಿಕ ಬೆಲೆ 1,499 ಯುವಾನ್ ಆಗಿದೆ. ಇದ ಕಪ್ಪು, ಬಿಳಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಸಿದ್ಧವಾಗಿದೆ.

Best Mobiles in India

English summary
Vivo Y33t smartphone has been unveiled and this phone is powered by MediaTek G85 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+