Vivo Y35 ಫೋನ್ ಬೆಲೆಯಲ್ಲಿ ಭಾರೀ ಇಳಿಕೆ: ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ!
ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಅದರಲ್ಲೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಬಯಸುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ವಿವೋದ ವಿವೋ Y35 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಈ ಮೂಲಕ ಗ್ರಾಹಕರು ಸುಲಭವಾಗಿ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಬಹುದಾಗಿದೆ.

ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ಸಂಚಲನ ಉಂಟು ಮಾಡಿರುವ ವಿವೋ Y35 ( Vivo Y35 )ಫೋನ್ ನೀವು ನಿರೀಕ್ಷಿಸದ ಬೆಲೆಗೆ ಲಭ್ಯವಾಗುತ್ತಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್ ಅನ್ನು ಕಡಿಮೆ ಬೆಲೆಗೆ ಮಾರುತ್ತಿರುವ ಈ ಕಾಮರ್ಸ್ ಸೈಟ್ ಯಾವುದು?, ಈ ಫೋನ್‌ನ ಪ್ರಮುಖ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ವಿವೋ Y35 ಸ್ಮಾರ್ಟ್‌ಫೋನ್ ಗೆ ಬೆಲೆ ಇಳಿಕೆ ಎಷ್ಟು?
ವಿವೋ Y35 ಸ್ಮಾರ್ಟ್‌ಫೋನ್ 22,999 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, ಈಗಾಗಲೇ ಹಲವಾರು ಆಫರ್ ಬೆಲೆಯಲ್ಲಿ ಮಾರಾಟವಾಗಿದೆ. ಇದರ ನಡುವೆ ಈಗ ಈ ಫೋನ್ ನಿಮಗೆ 20% ರಿಯಾಯಿತಿಯೊಂದಿಗೆ 18,499 ರೂ. ಗಳ ಆಫರ್ ಬೆಲೆಗೆ ಲಭ್ಯವಾಗುತ್ತಿದೆ. ಇದಿಷ್ಟೇ ಅಲ್ಲದೆ, ಕೆಲವು ಬ್ಯಾಂಕ್ ಕಾರ್ಡ್ ಗ್ರಾಹಕರು ಈ ಬೆಲೆಯ ಜೊತೆಗೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ವಿನಿಮಯ ಆಫರ್ ಸಹ ಲಭ್ಯವಾಗಲಿದೆ.

ಎಲ್ಲಿ ಖರೀದಿ ಮಾಡಬೇಕು?
18,499 ರೂ. ಗಳಿಗೆ ಮಾರಾಟ ಆಗುತ್ತಿರುವ ಈ ಫೋನ್ ಅನ್ನು ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ. ಅಮೆಜಾನ್‌ನಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೇಲೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಹಳೆಯ ಫೋನ್ ಮೂಲಕ ವಿನಿಮಯ ಮಾಡಿಕೊಂಡರೆ ನೀವು 15,450 ರೂ. ಗಳ ವರೆಗೂ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.
ವಿವೋ Y35 ಡಿಸ್‌ಪ್ಲೇ ವಿವರ
ವಿವೋ Y35 ಸ್ಮಾರ್ಟ್‌ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 401ppi ಪಿಕ್ಸೆಲ್ ಸಾಂದ್ರತೆ ಹಾಗೂ 1080 x 2408 ಪಿಕ್ಸೆಲ್‌ರೆಸಲ್ಯೂಶನ್ ಹೊಂದಿದೆ. ಜೊತೆಗೆ ಕ್ಯಾಮೆರಾ ಉದ್ದೇಶಕ್ಕೆ ಡಿಸ್‌ಪ್ಲೆ ಮೇಲ್ಭಾಗದಲ್ಲಿ ವಾಟರ್‌ಡ್ರಾಪ್ ಶೈಲಿ ಪಡೆದುಕೊಂಡಿದೆ.
ವಿವೋ Y35 ಪ್ರೊಸೆಸರ್ ಮಾಹಿತಿ
ವಿವೋ Y35 ಉತ್ತಮ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 680 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಅಡ್ರಿನೊ 610 GPU ನೊಂದಿಗೆ ಕೆಲಸ ಮಾಡಲಿದೆ. ಇನ್ನುಳಿದಂತೆ 4GB+64GB RAM, ಹಾಗೂ 4GB RAM + 128GB ಮತ್ತು 8GB RAM +256GB ಯ ಮೂರು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ.
ವಿವೋ Y35 ಕ್ಯಾಮೆರಾ ಮಾಹಿತಿ
ವಿವೋ Y35 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 50MP f/1.8 ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ, 2MP f/2.4 ಮ್ಯಾಕ್ರೋ ಲೆನ್ಸ್ ಮತ್ತು ಡೆಪ್ತ್ ಲೆನ್ಸ್ ಸೆನ್ಸರ್ ಆಯ್ಕೆ ಹೊಂದಿದೆ. ಹಾಗೆಯೇ 16MP f/2.0 ಸೆಲ್ಫಿ ಕ್ಯಾಮೆರಾ ಮೂಲಕ ಆತ್ಯಾಕರ್ಷಕ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ. ಇದರೊಂದಿಗೆ ರಿಯರ್‌ನಲ್ಲಿ ಎಲ್ಇಡಿ ಫ್ಲ್ಯಾಶ್ ಆಯ್ಕೆ ಸಹ ನೀಡಲಾಗಿದೆ.

ವಿವೋ Y35 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 44W ವೈರ್ಡ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಮೂಲಕ 34 ನಿಮಿಷಗಳಲ್ಲಿ 70% ವರೆಗೆ ಬ್ಯಾಟರಿ ಭರ್ತಿಯಾಗಲಿದೆ. ಇದರೊಂದಿಗೆ ಈ ಫೋನ್ ವೈ ಫೈ 802.11 a/b/g/n/ac ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ.


Click it and Unblock the Notifications








