Home
ಸುದ್ದಿಜಾಲ

ವಿವೋ ಗ್ರಾಹಕರೇ ಗಮನಿಸಿ!..ಈ ಜನಪ್ರಿಯ ವಿವೋ ಫೋನ್‌ ಬೆಲೆಯಲ್ಲಿ ಇಳಿಕೆ!

ವಿವೋ ಕಂಪೆನಿಯ ಜನಪ್ರಿಯ ಮೊಬೈಲ್‌ಗಳಲ್ಲಿ ಒಂದಾದ ವಿವೋ Y35 5G ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಏಕಾಏಕಿ ಇಳಿಕೆ ಆಗಿದೆ. ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಡೈಮೆನ್ಸಿಟಿ 680 ಚಿಪ್‌ಸೆಟ್‌ ‌ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ವಿವೋ Y35 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ 500ರೂ. ಗಳ ಕಡಿತವಾಗಿದೆ. ಈ ಪೋನಿನ 8 GB RAM ಮತ್ತು 128 GB ವೇರಿಯಂಟ್‌ ಬೆಲೆಯಲ್ಲಿ ಇದೀಗ 500ರೂ. ಗಳ ಕಡಿತವಾಗಿದ್ದು, 16,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44w ಫಾಸ್ಟ್‌ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ವಿವೋ ಗ್ರಾಹಕರೇ ಗಮನಿಸಿ!..ಈ ಜನಪ್ರಿಯ ವಿವೋ ಫೋನ್‌ ಬೆಲೆಯಲ್ಲಿ ಇಳಿಕೆ!

ಹಾಗೆಯೇ ವಿವೋ Y35 5G ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಂಭಗಾದಲ್ಲಿ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಜೊತೆಗೆ 1080 x 2408 ಸಾಮರ್ಥ್ಯದ ಡಿಸ್‌ಪ್ಲೇ ರೆಸಲ್ಯೂಶನ್ ಪಡೆದಿರುವುದು ಪ್ರಮುಖ ಅಮಶ ಎನಿಸಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿವೋ Y35 5G ಡಿಸ್‌ಪ್ಲೇ ರಚನೆ : ಈ ಹೊಸ ವಿವೋ Y35 5G ಸ್ಮಾರ್ಟ್‌ಫೋನ್ ಟಿಯರ್‌ಡ್ರಾಪ್ ನಾಚ್‌ನೊಂದಿಗೆ 6.51 ಇಂಚಿನ IPS ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 1080 x 2408 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್‌ ಹಾಗೂ 120 Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಈ ಫೋನ್‌ ನೀಡಲಿದೆ. ಜೊತೆಗೆ 20: 9 ಆಕಾರ ಅನುಪಾತ, 1500: 1 ಕಾಂಟ್ರಾಸ್ಟ್ ಅನುಪಾತ, 269 ppi ಪಿಕ್ಸೆಲ್ ಸಾಂದ್ರತೆ ಈ ಡಿಸ್‌ಪ್ಲೇನಲ್ಲಿದೆ.

ವಿವೋ Y35 5G ಪ್ರೊಸೆಸರ್ ಪವರ್ : ವಿವೋ Y35 5G ಫೋನ್ ಆಕ್ಟಾ ಕೋರ್ ಡೈಮೆನ್ಸಿಟಿ 700 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಆಧಾರಿತ ಒರಿಜಿನ್ಓಎಸ್ ಓಷನ್ ಯುಐ ನಲ್ಲಿ ರನ್‌ ಆಗಲಿದೆ. ಇದು 8 GB RAM ಮತ್ತು 128 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ ಆಯ್ಕೆ ಇದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಇಂಟರ್ನಲ್‌ ಸ್ಟೋರೇಜ್‌ ಅನ್ನು ಇನ್ನೂ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ವಿವೋ Y35 5G ಡ್ಯುಯಲ್‌ ಕ್ಯಾಮೆರಾ ರಚನೆ : ವಿವೋದ ಈ ಹೊಸ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. 50 ಮೆಗಾ ಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 2 MP ಮ್ಯಾಕ್ರೋ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಇದ್ದು, ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ. ಫೋಟೊ ಎಡಿಟಿಂಗ್ ಆಯ್ಕೆಗಳು ಸಹ ಲಭ್ಯ.

ವಿವೋ Y35 5G ಬ್ಯಾಟರಿ ಹಾಗೂ ಇತರೆ : ವಿವೋ Y35 ಸ್ಮಾರ್ಟ್‌ಫೋನ್ 18 W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ವೈ-ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಕನೆಕ್ಟಿವಿಟಿ ಆಯ್ಕೆಯ ಜೊತೆಗೆ ಸೆಕ್ಯೂರಿಟಿಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಹೊಂದಿದೆ.

ವಿವೋ Y35 5G ಬೆಲೆ ಇಳಿಕೆ : ಈ ಫೋನ್ ಈಗ ಬೆಲೆ ಇಳಿಕೆ ಆಗಿದೆ. 8 GB RAM + 128 GB ಸ್ಟೋರೇಜ್‌ನ ಈ ಫೋನ್ ಬೆಲೆ ಇಳಿಕೆಯಿಂದ ಇದೀಗ 16999ರೂ. ಗಳಿಗೆ ಖರೀದಿಗೆ ಲಭ್ಯ ಇದೆ.

Best Mobiles in India

English summary
Vivo Y35 receives a price cut in India: check new price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+