Home
ಸುದ್ದಿಜಾಲ

vivo: 8 GB RAM ಆಯ್ಕೆಯ ವಿವೋದ ಈ ವಿಶೇಷ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ..

ವಿವೋ ಫೋನ್‌ಗಳು (Vivo phones) ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳಾಗಿವೆ. ಅದರಂತೆ ಬಜೆಟ್‌ ಬೆಲೆಯ ಫೋನ್‌ವೊಂದಕ್ಕೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 8 GB RAM ಆಯ್ಕೆ ಪಡೆದಿದೆ.

ಹೌದು, ವಿವೋದ ವಿವೋ Y35 ಸ್ಮಾರ್ಟ್‌ಫೋನ್‌ (Vivo Y35 smartphone) ಇದೀಗ ಕಡಿಮೆ ಬೆಲೆಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್‌ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಬಲ ಪಡೆದಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

8 GB RAM ಆಯ್ಕೆಯ ವಿವೋದ ಈ ವಿಶೇಷ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ..

ವಿವೋದ ವಿವೋ Y35 ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 19,990 ರೂ.ಗಳ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 13,989 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಪಾರ್ಟ್‌ ಈ ಫೋನ್‌ ಮೇಲೆ 30% ರಿಯಾಯಿತಿ ಘೋಷಣೆ ಮಾಡಿದೆ. ಅದಾಗ್ಯೂ ನೀವು ಬ್ಯಾಂಕ್‌ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ವೇಳೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ ಬಳಕೆ ಮಾಡಿ ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, FreebieSpotify ಪ್ರೀಮಿಯಂ ಸೌಲಭ್ಯದೊಂದಿಗೆ ನೀವು ಏನಾದರೂ ಈ ಫೋನ್‌ ಖರೀದಿ ಮಾಡಿದ ನಂತರ ಎಸಿ ಖರೀದಿ ಮಾಡಲು ಮುಂದಾದ್ರೆ ಅದಕ್ಕೂ ಸಹ ಈ ಮೂಲಕ ಆಫರ್ ನೀಡಲಾಗುತ್ತದೆ. ಹಾಗಿದ್ರೆ ಬನ್ನಿ ಈ ಫೋನ್‌ನ ಫೀಚರ್ಸ್‌ ಕಡೆ ಕಣ್ಣಾಯಿಸೋಣ.

8 GB RAM ಆಯ್ಕೆಯ ವಿವೋದ ಈ ವಿಶೇಷ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ..

ವಿವೋ Y35 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.58 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು 90Hz ರಿಫ್ರೆಶ್‌ ರೇಟ್‌ ಆಯ್ಕೆ ಹಾಗೂ 550 ನಿಟ್ಸ್‌ (HBM) ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಉತ್ತಮ ಎನಿಸಿದೆ. ಅಲ್ಲದೆ 83.4% ಸ್ಕ್ರೀನ್-ಟು-ಬಾಡಿ ಅನುಪಾತ, 401 ppi ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ವಿವೋ Y35 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಈ ಫೋನ್ ಆಂಡ್ರಾಯ್ಡ್ 11, ಫನ್‌ಟಚ್ 12 ಓಎಸ್‌ ಅನ್ನು ರನ್‌ ಮಾಡಲಿದ್ದು, ಕ್ವಾಲ್ಕಾಮ್ SM6225 ಸ್ನಾಪ್ಡ್ರಾಗನ್ 680 4G (6 nm) ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಡ್ರಿನೊ 610 ಗ್ರಾಫಿಕ್ಸ್‌ ಕಾರ್ಡ್‌ ಬಲದೊಂದಿಗೆ ಕೆಲಸ ಮಾಡಲಿದೆ. ಅಲ್ಲದೆ ಆಫರ್ ಬೆಲೆಗೆ ಲಭ್ಯ ಇರುವ ಫೋನ್ 128GB ಇಂಟರ್‌ ಸ್ಟೋರೇಜ್‌ ಮತ್ತು 8GB RAM ಆಯ್ಕೆ ಪಡೆದಿದೆ.

ವಿವೋ Y35 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ನೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಮೂಲಕ 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ.

8 GB RAM ಆಯ್ಕೆಯ ವಿವೋದ ಈ ವಿಶೇಷ ಫೋನ್‌ಗೆ ದೊಡ್ಡ ಆಫರ್! 50MP ಕ್ಯಾಮೆರಾ..

ವಿವೋ Y35 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 44W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಈ ಮೂಲಕ ಕೇವಲ 34 ನಿಮಿಷಗಳಲ್ಲಿ 70% ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಉಳಿದಂತೆ ಈ ಫೋನ್ 3.5 ಎಂಎಂ ಜ್ಯಾಕ್, 24-ಬಿಟ್/192kHz ಹೈ-ರೆಸ್ ಆಡಿಯೋ, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
Vivo's Vivo Y35 smartphone is now available at a low price. This smartphone has a triple rear camera setup along with a 50 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+