ಮಾರುಕಟ್ಟೆಯ ಗಮನ ಸೆಳೆದ ಆಫರ್!..ವಿವೋದ ಈ ಎರಡು ಫೋನ್ ಬೆಲೆಯಲ್ಲಿ ಇಳಿಕೆ!
ವಿವೋ ಮೊಬೈಲ್ ಸಂಸ್ಥೆಯು ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಸ್ಮಾರ್ಟ್‌ಫೋನ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ Y ಸರಣಿಯ ಕೆಲವು ಫೋನ್‌ಗಳು ಗಮನ ಸೆಳೆದಿವೆ. ಆ ಪೈಕಿ ವಿವೋ Y36 ಮತ್ತು ವಿವೋ Y02t ಸ್ಮಾರ್ಟ್‌ಫೋನ್‌ಗಳು ಜನಪ್ರಿಯವಾಗಿವೆ. ಸದ್ಯ ಇವುಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ.
ಹೌದು, ವಿವೋ ಸಂಸ್ಥೆಯ ವಿವೋ Y36 ಫೋನ್ ಖರೀದಿಯಲ್ಲಿ 1,000ರೂ ಮತ್ತು ವಿವೋ Y02t ಫೋನ್ ಬೆಲೆಯಲ್ಲಿ 500ರೂ. ಗಳ ಕಡಿತ ಲಭ್ಯವಾಗಿದೆ. ವಿವೋ Y36 ಫೋನ್ ಅನ್ನು ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಯಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಸ್‌ಇಂಡ್ ಬ್ಯಾಂಕ್, ಒನ್ ಕಾರ್ಡ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ, ಕ್ಯಾಶ್‌ಬ್ಯಾಕ್ ಸಿಗಲಿದೆ.

ಅದೇ ರೀತಿ ವಿವೋ Y02t ಫೋನ್ ಖರೀದಿಯಲ್ಲಿಯೂ 500ರೂ. ರಿಯಾಯಿತಿ ದೊರೆಯುತ್ತದೆ. 4GB RAM + 128GB ಸ್ಟೋರೇಜ್‌ನ ಬೆಲೆಯು 9,999ರೂ. ಆಗಿದ್ದು, 9,499ರೂ. ಗಳಿಗೆ ಖರೀದಿಗೆ ಲಭ್ಯ. ಹಾಗಾದರೆ ಈ ಎರಡು ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ Y36 ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಮಾಹಿತಿ : ವಿವೋ Y36 ಸ್ಮಾರ್ಟ್‌ಫೋನ್ 6.51 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಪಡೆದುಕೊಂಡಿದ್ದು, 720 x 1600 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಹಾಗೆಯೇ ಈ ಫೋನ್ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಪಡೆದಿದೆ.
ವಿವೋ Y36 ಪ್ರೊಸೆಸರ್ ಸಾಮರ್ಥ್ಯದ ಮಾಹಿತಿ : ವಿವೋ Y36 ಮೊಬೈಲ್ ಡೈಮೆನ್ಸಿಟಿ 700 ಚಿಪ್‌ಸೆಟ್ ಪ್ರೊಸೆಸರ್ ನಲ್ಲಿ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಆಧಾರಿತ ಒರಿಜಿನ್ ಓಎಸ್ ನಲ್ಲಿ ರನ್ ಆಗಲಿದೆ. 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಇದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ಕೂಡಾ ಇದೆ.
ವಿವೋ Y36 ಟ್ರಿಪಲ್ ಕ್ಯಾಮೆರಾ ಸೆನ್ಸಾರ್ ಮಾಹಿತಿ : ವಿವೋ Y36 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಆಯ್ಕೆ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ.
ವಿವೋ Y36 ಬ್ಯಾಟರಿ ಹಾಗೂ ಇತರೆ ಸೌಲಭ್ಯದ ಮಾಹಿತಿ : ವಿವೋ Y35 ಮೊಬೈಲ್ 44W ಚಾರ್ಜಿಂಗ್ ಅನ್ನು ಸಪೋರ್ಟ್ ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ವೈ-ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಕನೆಕ್ಟಿವಿಟಿ ಆಯ್ಕೆಯ ಜೊತೆಗೆ ಸೆಕ್ಯೂರಿಟಿಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಅನ್ನು ಒಳಗೊಂಡಿದೆ.
ವಿವೋ Y02t ಸ್ಮಾರ್ಟ್‌ಫೋನ್ ಫೀಚರ್ಸ್ :
ವಿವೋ Y02t ಫೋನ್ 6.51 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇನ್ನು ಡಿಸ್‌ಪ್ಲೇ 1600 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಇದು ಮೀಡಿಯಾ ಟೆಕ್ MT6765 ಹಿಲಿಯೊ P35 SoC ಪ್ರೊಸೆಸರ್ ಪವರ್ ಅನ್ನು ಕೂಡಾ ಹೊಂದಿದೆ. ಅಲ್ಲದೇ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.


Click it and Unblock the Notifications








