Home
ಸುದ್ದಿಜಾಲ

Vivo: ವಿವೋದ ಈ ಫೋನ್‌ಗಿದೆ ಭಾರೀ ಆಫರ್... 128 GB ಸ್ಟೋರೇಜ್‌, 50MP ಕ್ಯಾಮೆರಾ

ವಿವೋ (Vivo) ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ವಿವೋ ಸಾಕಷ್ಟು ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬಂದಿದ್ದು, ಗ್ರಾಹಕರಿಗೆ ಅಚ್ಚು ಮೆಚ್ಚಿನ ಬ್ರ್ಯಾಂಡ್‌ ಆಗಿದೆ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ವಿವೋದ ಈ ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ.

ಹೌದು, ವಿವೋ ಫೋನ್‌ಗಳು ಕ್ಯಾಮೆರಾ ಪ್ರಿಯರಿಗೆ ಅಚ್ಚು ಮೆಚ್ಚು. ಅದರಂತೆ ಈಗ ವಿವೋ Y36 ಸ್ಮಾರ್ಟ್‌ಫೋನ್‌ಗೆ (Vivo Y36 smartphone) ಭರ್ಜರಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅತ್ಯುತ್ತಮ ಡಿಸ್‌ಪ್ಲೇ ಫೀಚರ್ಸ್‌ ಅನ್ನೂ ಸಹ ಹೊಂದಿದೆ. ಹಾಗಿದ್ರೆ ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ವಿವೋದ ಈ ಫೋನ್‌ಗಿದೆ ಭಾರೀ ಆಫರ್... 128 GB ಸ್ಟೋರೇಜ್‌, 50MP ಕ್ಯಾಮೆರಾ

ವಿವೋ Y36 ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಫೋನ್‌ 21,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 14,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 31% ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಫೋನ್ ಅನ್ನೂ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಅನುಕೂಲ ಮಾಡಿಕೊಡಲಾಗಿದ್ದು, ಈ ಮೂಲಕ ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ನಿಮ್ಮದಾಗಿಸಿಕೊಳ್ಳಬಹುದು.

ಈ ಫೋನ್‌ ಖರೀದಿ ವೇಳೆ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ಸ್ಪಾಟಿಫೈ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಫೋನ್‌ ಖರೀದಿ ಮಾಡಿದ ನಂತೆ ನೀವು ಇದರೊಂದಿಗೆ ರೂಮ್ ಹೀಟರ್‌ಗಳನ್ನು ಖರೀದಿ ಮಾಡಿದ್ರೆ ಅದರ ಮೇಲೂ ಹೆಚ್ಚುವರಿ ಆಫರ್ ಲಭ್ಯ ಇದೆ. ಇನ್ನು ತಿಂಗಳಿಗೆ 528 ರೂ.ಗಳ ಇಎಮ್‌ಐ ಪಾವತಿ ಮಾಡುವ ಮೂಲಕವೂ ಖರೀದಿ ಮಾಡಬಹುದಾಗಿದೆ.

ವಿವೋ Y36 ಡಿಸ್‌ಪ್ಲೇ ವಿವರ: ಈ ಫೋನ್ 6.64 ಇಂಚಿನ ಫುಲ್‌ ಹೆಚ್‌ಡಿ + LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 2388 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಈ ಮೂಲಕ ಅತ್ಯುತ್ತಮ ಅನುಭವ ನೀಡಲಿದೆ. ಅಂದರೆ ಉತ್ತಮ ಕ್ವಾಲಿಟಿಯ ವಿಡಿಯೋಗಳನ್ನು ವೀಕ್ಷಣೆ ಮಾಡಲು ಹಾಗೂ ಗೇಮ್‌ ಆಡಲು ಅನುಕೂಲಕರವಾದ ಸೌಲಭ್ಯ ಪಡೆದಿದೆ.

ವಿವೋದ ಈ ಫೋನ್‌ಗಿದೆ ಭಾರೀ ಆಫರ್... 128 GB ಸ್ಟೋರೇಜ್‌, 50MP ಕ್ಯಾಮೆರಾ

ವಿವೋ Y36 ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ. ಇನ್ನು 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 8 GB RAM ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಅದಾಗ್ಯೂ ನೀವು ಇನ್ನೂ ಹೆಚ್ಚಿನ ಸ್ಟೋರೇಜ್‌ ಆಯ್ಕೆ ಪಡೆಯಲು ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಳ್ಳಬಹುದು.

ವಿವೋ Y36 ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಪಡೆದುಕೊಂಡಿದೆ. ಅದರಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ (f/1.8 ಅಪರ್ಚರ್) + 2 ಮೆಗಾಪಿಕ್ಸೆಲ್‌ ಬೊಕೆ ಕ್ಯಾಮೆರಾ (f/2.4 ಅಪರ್ಚರ್), ಆಯ್ಕೆ ಪಡೆದಿದ್ದು, ಈ ಸೆನ್ಸರ್‌ ವಿವಿಧ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಹಾಗೆಯೇ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದೂ ಸಹ ವಿವಿಧ ಫೀಚರ್ಸ್‌ ಅನ್ನು ಹೊಂದಿದೆ.

ವಿವೋದ ಈ ಫೋನ್‌ಗಿದೆ ಭಾರೀ ಆಫರ್... 128 GB ಸ್ಟೋರೇಜ್‌, 50MP ಕ್ಯಾಮೆರಾ

ವಿವೋ Y36 ಬ್ಯಾಟರಿ ಹಾಗೂ ಇತರೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, ಇದರೊಂದಿಗೆ ಯುಎಸ್‌ಬಿ ಟೈಪ್‌-ಸಿ, ಬ್ಲೂಟೂತ್ ಆವೃತ್ತಿ v5.1, ವೈ-ಫೈ ಆವೃತ್ತಿ 2.4 GHz, 5 GHz ಬೆಂಬಲ, ಯುಎಸ್‌ಬಿ ಟೆಥರಿಂಗ್, ಜಿಪಿಎಸ್ ಬೆಂಬಲ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್‌ ಪಡೆದುಕೊಂಡಿದೆ.

Best Mobiles in India

English summary
Vivo Y36 smartphone is available at an offer price. This smartphone has 50 MP rear camera option and has excellent display features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+