Home
ಸುದ್ದಿಜಾಲ

Vivo: ವಿವೋ Y36s ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಕನ್ಸೋಲ್‌ನಲ್ಲಿ! ಮೀಡಿಯಾಟೆಕ್‌ ಡೈಮೆನ್ಸಿಟಿ 6020 ಬಲ

ವಿವೋ ಫೋನ್‌ಗಳು (Vivo phones) ಯಾವಾಗಲೂ ಸಹ ಭರ್ಜರಿ ಬೇಡಿಕೆ ಪಡೆದುಕೊಂಡಿರುತ್ತವೆ. ಈ ನಡುವೆ ಬಹು ನಿರೀಕ್ಷಿತ ವಿವೋ Y36s ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಕನ್ಸೋಲ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 6020 ಪ್ರೊಸೆಸರ್ ಬಲ ಪಡೆದಿದೆ ಎನ್ನಲಾಗಿದೆ. ಈ ಮೂಲಕ ವಿವೋ ಫೋನ್‌ಗಳ ವಲಯದಲ್ಲಿ ಈ ಫೋನ್ ವಿಶೇಷವಾಗಿ ಗುರುತಿಸಿಕೊಳ್ಳಲಿದೆ.

ಹೌದು, ವಿವೋ Y36s ಸ್ಮಾರ್ಟ್‌ಫೋನ್‌ (Vivo Y36s smartphone) ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಫೋನ್ ಈಗಾಗಲೇ ಮಾದರಿ ಸಂಖ್ಯೆ PD2318 ಅನ್ನು ಹೊಂದಿದ್ದು, ಆಕರ್ಷಕ ಫೀಚರ್ಸ್‌ ಪಡೆದಿರಲಿದೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ 6GB RAM ಅನ್ನು ಪ್ಯಾಕ್ ಮಾಡುತ್ತದೆ ಎನ್ನಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಏನು?, ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ Y36s ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಕನ್ಸೋಲ್‌ನಲ್ಲಿ! ಡೈಮೆನ್ಸಿಟಿ 6020 ಬಲ

ವಿವೋ Y36s ಸ್ಮಾರ್ಟ್‌ಫೋನ್‌: ಗೂಗಲ್ ಪ್ಲೇ ಕನ್ಸೋಲ್ ಪಟ್ಟಿಯಲ್ಲಿ ಈ ಫೋನ್‌ ಕಾಣಿಸಿಕೊಂಡಿದ್ದು, ಈ ಫೋನ್ ಹೆಚ್‌ಡಿಪ್ಲಸ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿರಲಿದ್ದು, ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದ್ದು, ಇದು ಆಂಡ್ರಾಯ್ಡ್‌ ಓಎಸ್‌ನಲ್ಲಿ ರನ್‌ ಆಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಈ ಫೋನ್‌ ವಿವೋ Y36s ವಿವೋ G2 ನ ಮರುಬ್ರಾಂಡ್ ಆಗಿರುವ ನಿರೀಕ್ಷೆಯಿದೆ.

ಇನ್ನು ವಿವೋ Y36s ವೈ ಸರಣಿಯಲ್ಲಿ ಬ್ರ್ಯಾಂಡ್‌ನ ಮುಂದಿನ ಬಜೆಟ್ ಕೊಡುಗೆಯಾಗಿರಬಹುದು ಮತ್ತು ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಲೀಕ್‌ ಮಾಹಿತಿ ಪ್ರಕಾರ ಈ ಫೋನ್ 720 X 1612 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ವಾಟರ್‌ಡ್ರಾಪ್ ನಾಚ್ ಶೈಲಿಯನ್ನು (Waterdrop notch style) ಪಡೆದಿದೆ ಎಂದು ತೋರುತ್ತದೆ.

ವಿವೋ Y36s ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಕನ್ಸೋಲ್‌ನಲ್ಲಿ! ಡೈಮೆನ್ಸಿಟಿ 6020 ಬಲ

ಇದರ ಜೊತೆಗೆ ಆಂಡ್ರಾಯ್ಡ್ 13 ಓಎಸ್‌ ಅನ್ನು ರನ್ ಮಾಡಲಿದೆ ಎನ್ನಲಾಗಿದ್ದು, 6GB RAM ಅನ್ನು ಪ್ಯಾಕ್ ಮಾಡುತ್ತದೆ ಎನ್ನಲಾಗಿದೆ. ಮದರ್‌ಬೋರ್ಡ್ ವಿಚಾರಕ್ಕೆ ಬಂದರೆ ವಿವೋ Y36s ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ ಎನ್ನಲಾಗಿದೆ. ಇನ್ನು ಈ ಫೋನ್‌ ಅನ್ನು ವಿವೋ G2 ನ (Vivo G2s) ರೀಬ್ರಾಂಡ್ ಆಗಿದೆ ಎನ್ನಲಾಗುತ್ತಿರುವುದರಿಂದ ಅದರ ಪ್ರಮುಖ ಫೀಚರ್ಸ್‌ ತಿಳಿಯೋಣ ಬನ್ನಿ.

ವಿವೋ G2 ಫೀಚರ್ಸ್: ವಿವೋ Y36s ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ಸೆಲ್ಫಿ ಶೂಟರ್‌ಗಾಗಿ ವಾಟರ್‌ಡ್ರಾಪ್ ನಾಚ್ ಅನ್ನು ಹೊಂದಿದೆ. ಇದರ ಜೊತೆಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಮತ್ತು 128GB/256GB ಇಂಟರ್‌ ಸ್ಟೋರೇಜ್‌ ಬಲದೊಂದಿಗೆ ಪ್ಯಾಕ್‌ ಆಗಿದ್ದು, ಆಂಡ್ರಾಯ್ಡ್‌13 ಆಧಾರಿತ ಒರ್ಜಿನ್‌ಓಎಸ್‌ 3 (OriginOS 3) ಕಸ್ಟಮ್ ಸ್ಕಿನ್ ಆಫ್ ದಿ ಬಾಕ್ಸ್ ಅನ್ನು ರನ್‌ ಮಾಡಲಿದೆ.

ವಿವೋ Y36s ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಕನ್ಸೋಲ್‌ನಲ್ಲಿ! ಡೈಮೆನ್ಸಿಟಿ 6020 ಬಲ

ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬಂದರೆ ವಿವೋ G2 ರಿಯರ್‌ನಲ್ಲಿ 13 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ‌ಶೂಟರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 15W ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ.

Best Mobiles in India

English summary
Vivo Y36s smartphone will be launched in a few days. This phone already has the model number PD2318 and is said to have attractive features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+