Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್‌ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
ಸ್ಮಾರ್ಟ್‌ಫೋನ್ ವಲಯದಲ್ಲಿ ವಿವೋ ಫೋನ್‌ಗಳು ವಿಶೇಷವಾದ ಬೇಡಿಕೆ ಪಡೆದುಕೊಂಡಿದ್ದು, ಈ ನಡುವೆ ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್‌ಫೋನ್ (Vivo Y38 5G smartphone) ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ. ಈ ಫೋನ್‌ನ ಕೆಲವು ಮಾಹಿತಿ ಲೀಕ್ ಆಗಿವೆ.
ಹೌದು, ವಿವೋ Y38 5G ಸ್ಮಾರ್ಟ್‌ಫೋನ್ ಮೇ ತಿಂಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ. ಈ ಫೋನ್ ಈಗಾಗಲೇ ಬ್ಲೂಟೂತ್ SIG ವೆಬ್‌ಸೈಟ್ ಮತ್ತು ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ಆಕರ್ಷಕ ಫೀಚರ್ಸ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಪಡೆದಿರಲಿದೆ?, ಬನ್ನಿ ಗಮನಿಸೋಣ.

ವಿವೋ Y38 5G ಸ್ಮಾರ್ಟ್‌ಫೋನ್: ವಿವೋ Y38 5G ಬ್ರ್ಯಾಂಡ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮೂರು ಫೋನ್‌ಗಳಲ್ಲಿ ವಿವೋ Y03s ಮತ್ತು ವಿವೋ Y03t (Vivo Y03s and Vivo Y03t) ಜೊತೆಗೆ ವರದಿಯಾಗಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಬ್ಲೂಟೂತ್ SIG, CQC ಮತ್ತು ಗೀಕ್‌ಬೆಂಚ್ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ. ಈ ಸಂಬಂಧ 91ಮೊಬೈಲ್ಸ್ ವರದಿ ಮಾಡಿದೆ. ಇದರ ಜೊತೆಗೆ ವಿವೋ Y38 5G ಅನ್ನು IMDA ಮತ್ತು NCC ಪ್ರಮಾಣೀಕರಣ ಸೈಟ್‌ಗಳಲ್ಲೂ ಕಾಣಿಸಿಕೊಂಡಿದೆ.
ವಿವೋ Y38 5G ಸ್ಮಾರ್ಟ್‌ಫೋನ್ ಮಾದರಿ ಸಂಖ್ಯೆ V2343 ಅನ್ನು ಹೊಂದಿದ್ದು, NFC ಬೆಂಬಲದೊಂದಿಗೆ ಬರುತ್ತದೆ ಎಂದು ಖಚಿತಪಡಿಸುತ್ತದೆ. ಈ ಸ್ಮಾರ್ಟ್‌ಫೋನ್n1, n3, n7, n8, n28, n38, n41 ಮತ್ತು n78 5G ಬ್ಯಾಂಡ್‌ಗಳನ್ನು ಬೆಂಬಲಿಸಲಿದೆ. ಮತ್ತೊಂದೆಡೆ, NCC ಪ್ರಮಾಣೀಕರಣವು ಎಲ್ಲಾ ಕೋನಗಳಿಂದ ವಿವೋ Y38 5G ವಿನ್ಯಾಸವನ್ನು ಬಹಿರಂಗಪಡಿಸುವ ಚಿತ್ರಗಳನ್ನು ಹೊಂದಿದೆ.

ಪಂಚ್-ಹೋಲ್ ಡಿಸ್‌ಪ್ಲೇಯೊಂದಿಗೆ ಈ ಫೋನ್ ರಂಡೆಡ್ ಅಂಚುಗಳನ್ನು ಹೊಂದಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಸ್ಪೀಕರ್ ಗ್ರಿಲ್ ಕೆಳಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಅನ್ನು ಬದಿಯಲ್ಲಿ ಇರಿಸಲಾಗಿದೆ. ಹಿಂಭಾಗದ ಕ್ಯಾಮರಾ ಮಾಡ್ಯೂಲ್ ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಎರಡು ಸೆನ್ಸರ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಔರಾ ಲೈಟ್ ರಿಂಗ್‌ನಂತೆ ಕಾಣುತ್ತದೆ.
NCC ಲಿಸ್ಟ್‌ನಲ್ಲಿ ಇರುವಂತೆ ವಿವೋ Y38 5G ಚಾರ್ಜಿಂಗ್ ಅಡಾಪ್ಟರ್ ಮತ್ತು ಬ್ಯಾಟರಿಯ ಮಾದರಿ ಸಂಖ್ಯೆಗಳನ್ನು ಆಧರಿಸಿದೆ. ಹಾಗೆಯೆ 8GB RAM + 128GB ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಗಳೊಂದಿಗೆ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದೆ. ಇದರ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.
ಈ ಫೋನ್ ಅನ್ನು ಗೀಕ್‌ಬೆಂಚ್‌ನಲ್ಲಿ ಉಲ್ಲೇಖ ಮಾಡಿದ್ದು, ವಿವೋ Y38 5G ಅನ್ನು ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನೊಂದಿಗೆ ಗುರುತಿಸಲಾಗಿದೆ. 8GB RAM ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಸಿಂಗಲ್-ಕೋರ್ ಪರೀಕ್ಷೆಯಲ್ಲಿ ಹ್ಯಾಂಡ್‌ಸೆಟ್ 3092 ಅಂಕಗಳನ್ನು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 7035 ಅಂಕಗಳನ್ನುಗಳಿಸಿದೆ. ಗೀಕ್‌ಬೆಂಚ್ ಪಟ್ಟಿಯ ಪ್ರಕಾರ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಅನ್ನು ರನ್ ಮಾಡಲಿದೆ.

ವಿವೋ V30e ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಬಗ್ಗೆ ವಿವೋ ಕೀಟಲೆ ಮಾಡುತ್ತಿದೆ. ಈ ಫೋನ್ ಕೆಲವು ಫೀಚರ್ಸ್ ಈಗಾಗಲೇ ಲೀಕ್ ಆಗಿದ್ದು, ಸ್ಮಾರ್ಟ್‌ಫೋನ್ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲ ಪಡೆದಿದ್ದು, 8GB RAM ಆಯ್ಕೆ ಹಾಗೂ 5,500mAh ಸಾಮರ್ಥ್ಯದ ಬ್ಯಾಟರಿ ಮತ್ತು ಕರ್ವ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.


Click it and Unblock the Notifications








