Home
ಸುದ್ದಿಜಾಲ

ವಿವೋ Y3s 2021 ಫೋನ್ ಲಾಂಚ್!..ಗ್ರಾಹಕರ ಜೇಬಿಗೆ ಹೊರೆಯಿಲ್ಲದ ಬೆಲೆ!

ಪ್ರಮುಖ ಮೊಬೈಲ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದಾ ವಿವೋ ದೇಶಿಯ ಮಾರುಕಟ್ಟೆಯಲ್ಲಿ ಭಿನ್ನ ಬೆಲೆಯಲ್ಲಿ ಹಲವು ಫೋನ್‌ಗಳನ್ನು ಲಾಂಚ್ ಮಾಡಿದೆ. ಆ ಪೈಕಿ ವಿವೋ Y33s ಸ್ಮಾರ್ಟ್‌ಫೋನ್‌ ಗಮನ ಸೆಳೆದಿದೆ. ಇದೀಗ ಕಂಪನಿಯ ಇದರ ಅಪ್‌ಡೇಟ್‌ ಆವೃತ್ತಿಯಾದ 'ವಿವೋ Y3s (2021)' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ ರೀವರ್ಸ್‌ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಬಿಡುಗಡೆ

ಹೌದು, ವಿವೋ ಸ್ಮಾರ್ಟ್‌ಫೋನ್‌ ಕಂಪೆನಿಯು ನೂತನವಾಗಿ 'ವಿವೋ Y3s (2021)' ಸ್ಮಾರ್ಟ್‌ಫೋನ್‌ ಅನ್ನು ಇಂದು (ಅಕ್ಟೋಬರ್ 18) ಭಾರತೀಯ ಮೊಬೈಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್ ಮಾಡೆಲ್‌ ಆಗಿದ್ದು, ಮೀಡಿಯಾ ಟೆಕ್ ಹಿಲಿಯೋ P35 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಈ ಫೋನ್ 6.51 ಇಂಚಿನ ವಿಶಾಲ ಡಿಸ್‌ಪ್ಲೇ ರಚನೆಯನ್ನು ಪಡೆದಿದೆ. ಹಾಗೆಯೇ 2GB RAM + 32GB ಸ್ಟೋರೇಜ್ ವೇರಿಯಂಟ್‌ನ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ ವಿವೋ Y3s 2021 ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಆಕರ್ಷಕ ಡಿಸ್‌ಪ್ಲೇ ರಚನೆ

ಆಕರ್ಷಕ ಡಿಸ್‌ಪ್ಲೇ ರಚನೆ

ವಿವೋ Y3s 2021 ಸ್ಮಾರ್ಟ್‌ಫೋನ್ 720 x 1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.51 ಇಂಚಿನ ವಿಶಾಲ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು LCD ಮಾದರಿಯಲ್ಲಿದ್ದು, ವಾಟರ್‌ಡ್ರಾಪ್ ಸ್ಟೈಲ್ ನಾಚ್ ವಿನ್ಯಾಸ ಹೊಂದಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ವಿವೋ Y3s 2021 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ P35 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಇದೆ. ಇನ್ನು ಈ ಸ್ಮಾರ್ಟ್‌ಫೋನ್ 2GB RAM ಸಾಮರ್ಥ್ಯ ಮತ್ತು 32GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಬಾಹ್ಯ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ವಿವೋ Y3s 2021 ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದ್ದು, f/2.2 ಅಪಾರ್ಚರ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 5 ಮೆಗಾ ಪಿಕ್ಸಲ್‌ ಸೆನ್ಸಾರ್ ಪಡೆದಿದ್ದು, f/1.8 ಅಪಾರ್ಚರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಇದು ಒಳಗೊಂಡಿದೆ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌

ವಿವೋ Y3s 2021 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಅತ್ಯುತ್ತ ಸಾಮರ್ಥ್ಯದ ಚಾರ್ಜಿಂಗ್ ಸಪೋರ್ಟ್‌ ಇದೆ. ಇನ್ನು ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5, ಮೈಕ್ರೋ ಯುಎಸ್‌ಬಿ ಪೋರ್ಟ್, ಜಿಪಿಎಸ್ ಸೇರಿದಂತೆ ಇತರೆ ಫೀಚರ್ಸ್‌ ಸೇರಿವೆಸ. ಇದು ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುತ್ತದೆ.

ಬೆಲೆ ಎಷ್ಟು ಮತ್ತು ಲಭ್ಯತೆ

ಬೆಲೆ ಎಷ್ಟು ಮತ್ತು ಲಭ್ಯತೆ

ವಿವೋ Y3s 2021 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ 2GB RAM ಸಾಮರ್ಥ್ಯ ಮತ್ತು 32GB ಆಂತರಿಕ ಸ್ಟೋರೇಜ್‌ ಬೆಲೆಯು 9,490 ರೂ. ಆಗಿದೆ. ಇನ್ನು ಈ ಫೋನ್ ಪರ್ಲ್ ವೈಟ್, ಮಿಂಟ್ ಗ್ರೀನ್ ಮತ್ತು ಸ್ಟಾರಿ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಹಾಗೆಯೇ ಈ ಫೋನ್ ಇಂದಿನಿಂದ ವಿವೋ ಇಂಡಿಯಾ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್, ಟಾಟಾ ಕ್ಲಿಕ್ಯೂ, ಪೇಟಿಎಂ, ಬಜಾಜ್ ಫಿನ್‌ಸರ್ವ್ ಇಎಂಐ ಸ್ಟೋರ್ ಮತ್ತು ಪಾಲುದಾರ ರಿಟೇಲ್ ಸ್ಟೋರ್‌ಗಳಲ್ಲಿ ಮಾರಾಟ ಲಭ್ಯ.

Best Mobiles in India

English summary
Vivo Y3s (2021) With 5,000mAh Battery Launched in India: Price, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+