ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿವೋ Y50t ಸ್ಮಾರ್ಟ್‌ಫೋನ್‌!..ಫೀಚರ್ಸ್‌ ಏನು?

|

ಪ್ರಮುಖ ಮೊಬೈಲ್ ಕಂಪನಿಗಳ ಪೈಕಿ ಒಂದಾದ ವಿವೋ ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ವಿವೋ ಇದೀಗ ನೂತನವಾಗಿ ವಿವೋ Y50t ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿವೋ Y50t ಸ್ಮಾರ್ಟ್‌ಫೋನ್‌!..ಫೀಚರ್ಸ್‌ ಏನು?

ಹೌದು, ಜನಪ್ರಿಯ ವಿವೋ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ವಿವೋ Y50t ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಹಾಗಾದರೇ ಹೊಸ ವಿವೋ Y50t ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ವಿವೋ Y50t ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು ಪಂಚ್‌ಹೋಲ್‌ ವಿನ್ಯಾಸವನ್ನ ಹೊಂದಿರಲಿದ್ದು, 19.5: 9 ರಚನೆಯ ಅನುಪಾತವನ್ನ ಒಳಗೊಂಡಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 394ppi ಆಗಿದೆ.

ಪ್ರೊಸೆಸರ್‌ ಪವರ್ ಯಾವುದು
ವಿವೋ Y50t ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 720G SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಣೆ ಮಾಡಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ವಿವೋ Y50t ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ ಸಹ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇದಲ್ಲದೆ ಪೂರಕವಾಗಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ವಿವೋ Y50t ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ (ನ್ಯಾನೋ), 3.5 ಎಂಎಂ ಆಡಿಯೊ ಜ್ಯಾಕ್, ಬ್ಲೂಟೂತ್ v5.1, ಮೈಕ್ರೋ ಯುಎಸ್‌ಬಿ ಪೋರ್ಟ್ ಮತ್ತು ವೈ-ಫೈ ಸೇರಿವೆ. ಇದು 162.05x76.61x8.46mm ಅಳತೆ ಮತ್ತು 190 ಗ್ರಾಂ ತೂಗುತ್ತದೆ.

ಬೆಲೆ ಮತ್ತು ಲಭ್ಯತೆ
ವಿವೋ Y50t ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ವೇರಿಯಂಟ್ ಬೆಲೆ ಚೀನಾದಲ್ಲಿ CNY 1,399 (ಭಾರತದಲ್ಲಿ ಅಂದಾಜು 16,300ರೂ.) ಆಗಿದೆ. ಹಾಗೆಯೇ ಈ ಫೋನ್ ಸೀಕ್ರೆಟ್ ರಿಯಲ್‌ಮ ಬ್ಲಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Vivo Y50t With Triple Rear Cameras Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X