Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾದ ವಿವೋದ ಹೊಸ ಫೋನ್‌!..ಜೂನ್‌ 20 ರಂದು ಲಾಂಚ್‌!

ಜನಪ್ರಿಯ ವಿವೋ ಮೊಬೈಲ್‌ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ Y ಸರಣಿಯಲ್ಲಿ ಕೆಲವು ಮೊಬೈಲ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಹೊಸದಾಗಿ ವಿವೋ Y58 5G ( Vivo Y58 5G ) ಮೊಬೈಲ್‌ ಅನ್ನು ಪರಿಚಯಿಸಲು ತಯಾರಾಗಿದೆ. ಬರಲಿರುವ ನೂತನ ವಿವೋ Y58 5G ಮೊಬೈಲ್‌ ಈ ಹಿಂದಿನ ವಿವೋ Y56 ಫೋನಿನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಹೌದು, ವಿವೋ ಕಂಪನಿಯು ವಿವೋ Y58 5G ( Vivo Y58 5G ) ಫೋನ್‌ ಅನ್ನು ಇದೇ ಜೂನ್‌ 20 ರಂದು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದ್ದು, ಈ ಫೋನ್‌ ಮೊಬೈಲ್‌ ವೈಟ್‌ ಹಾಗೂ ಗ್ರೀನ್‌ ಕಲರ್‌ ವೇರಿಯಂಟ್‌ ಆಯ್ಕೆಗಳಲ್ಲಿ ಲಗ್ಗೆ ಇಡಲಿದೆ ಎಂದು ವರದಿಯಿಂದ ತಿಳಿದುಬಂದಿದೆ. ಇನ್ನುಳಿದಂತೆ ಬರಲಿರುವ ಈ ನೂತನ ಫೋನ್‌ಗಳ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಜ್ಜಾದ ವಿವೋದ ಹೊಸ ಫೋನ್‌!..ಜೂನ್‌ 20 ರಂದು ಲಾಂಚ್‌

ವಿವೋ Y58 5G ನಿರೀಕ್ಷಿತ ಫೀಚರ್ಸ್

ವಿವೋ ಸಂಸ್ಥೆಯ ವಿವೋ Y58 5G ಫೋನ್‌ 6.72 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಇದು 2400 × 1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್‌ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಅನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್‌ 1024 nits ಬ್ರೈಟ್ನೆಸ್‌ ಸಪೋರ್ಟ್‌ ಸಹ ಪಡೆದಿರಲಿದೆ. ಈ ಫೋನ್‌ IP64 ರೇಟಿಂಗ್‌ ಸೌಲಭ್ಯ ಹೊಂದಿರಲಿದೆ.

ವಿವೋ Y58 5G ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜನ್‌ 2 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಕೂಡಾ ಪಡೆದಿರಲಿದೆ. ಅಲ್ಲದೇ ಇದು 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ವಿವೋ Y58 5G ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಇರಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಇರುವ ಸಾಧ್ಯತೆಗಳು ಇವೆ ಎಂದು ತಿಳಿದುಬಂದಿದೆ. ಇನ್ನು ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಅನ್ನು ಪಡೆದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಬರಲಿರುವ ವಿವೋ Y58 5G ಫೋನ್‌ 6,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 44W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರುವ ನಿರೀಕ್ಷೆಗಳು ಅಧಿಕ. ಹಾಗೆಯೇ ಈ ಫೋನ್ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸಪೋರ್ಟ್‌ ಕೂಡಾ ಪಡೆದುಕೊಂಡಿರಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ವಿವೋ Y58 5G ಫೋನ್‌ 199 ಗ್ರಾಂ ತೂಕ ಪಡೆದಿರಲಿದ್ದು, ಸುಮಾರು 7.99 mm ದಪ್ಪ ರಚನೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಇದು IP64 ಧೂಳು ಮತ್ತು ನೀರು ನಿರೋಧಕ ರೇಟಿಂಗ್‌ ಸೌಲಭ್ಯ ಹೊಂದಿರಲಿದೆ. ಹಾಗೆಯೇ USB ಟೈಪ್ C ಪೋರ್ಟ್, ಜಿಪಿಎಸ್‌, ಬ್ಲೂಟೂತ್‌, ಆಡಿಯೋ ಜ್ಯಾಕ್‌ ಸೇರಿದಂತೆ ಇತರೆ ಅಗತ್ಯ ಕನೆಕ್ಟಿವಿಟಿ ಆಯ್ಕೆಗಳು ಇರಲಿವೆ.

Best Mobiles in India

English summary
Vivo Y58 5G is Set to Launch on June 20 in India. Specifications, price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+