Home
ಸುದ್ದಿಜಾಲ

ವಿವೋ Y78 5G ಸ್ಮಾರ್ಟ್‌ಫೋನ್‌ ಅನಾವರಣ: ಫೀಚರ್ಸ್‌ ಏನಿವೆ?

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ವಿವೋದ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈಗ ಹೊಸ ಸ್ಮಾರ್ಟ್‌ಫೋನ್‌ವೊಂದು ಸೇರ್ಪಡೆಗೊಂಡಿದೆ. ಈ ಫೋನ್ 64MP ಪ್ರಮುಖ ಕ್ಯಾಮೆರಾ, 120Hz ರಿಫ್ರೆಶ್‌ ರೇಟ್ ಹೊಂದಿದ್ದು, ಆಕರ್ಷಕ ಶೈಲಿ ಪಡೆದಿದೆ.

ಹೌದು, ವಿವೋ ಇದೀಗ ಜಾಗತಿಕವಾಗಿ ವಿವೋ Y78 5G (Vivo Y78 5G)ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಗಮನಿಸುವ ವಿಷಯ ಏನೆಂದರೆ ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಲಾಂಚ್‌ ಆದ ಈ ವೇರಿಯಂಟ್‌ ಡೈಮೆನ್ಸಿಟಿ 7020 SoCನ ಬಲ ಪಡೆದುಕೊಂಡಿದೆ.ಹಾಗಿದ್ರೆ,ಮತ್ಯಾಕೆ ತಡ ಬನ್ನಿ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ವಿವರವನ್ನು ತಿಳಿಯೋಣ.

ವಿವೋ Y78 5G ಸ್ಮಾರ್ಟ್‌ಫೋನ್‌ ಅನಾವರಣ: ಫೀಚರ್ಸ್‌ ಏನಿವೆ?

ವಿವೋ Y78 5G ಡಿಸ್‌ಪ್ಲೇ ವಿವರ: ಈ ವಿವೋ Y78 5G ಸ್ಮಾರ್ಟ್‌ಫೋನ್ 678 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ 120Hz ರಿಫ್ರೆಶ್‌ ರೇಟ್‌ ಆಯ್ಕೆ ನೀಡಲಾಗಿದ್ದು, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸೌಲಭ್ಯ ಈ ಫೋನ್‌ನಲ್ಲಿದೆ. ಇನ್ನು ಸೆಲ್ಫಿ ಉದ್ದೇಶಕ್ಕಾಗಿ ಪಂಚ್-ಹೋಲ್ ಕಟೌಟ್‌ ಶೈಲಿ ಪಡೆದುಕೊಂಡಿದೆ.

ವಿವೋ Y78 5G ಪ್ರೊಸೆಸರ್ ಮಾಹಿತಿ: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ ಬಲ ಹೊಂದಿದ್ದು, ಅಡ್ರಿನೊ ಜಿಪಿಯು ಶಕ್ತಿ ಪಡೆದುಕೊಂಡಿದೆ. ಇದರೊಂದಿಗೆ 8 GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದ್ದು, ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ 13 ಅನ್ನು ರನ್ ಮಾಡುತ್ತದೆ.

ವಿವೋ Y78 5G ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್‌ ಡೆಪ್ತ್ ಯೂನಿಟ್ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕೆ 16 ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ಪಡೆದುಕೊಂಡು ಆಕರ್ಷಕ ಶೈಲಿಯಲ್ಲಿ ಕಾಣುತ್ತದೆ.

ವಿವೋ Y78 5G ಸ್ಮಾರ್ಟ್‌ಫೋನ್‌ ಅನಾವರಣ: ಫೀಚರ್ಸ್‌ ಏನಿವೆ?

ವಿವೋ Y78 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇನ್ನುಳಿದಂತೆ 5G SA/NSA, 4G VoLTE, ವೈ ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ ಮತ್ತು ಎನ್‌ಎಫ್‌ಸಿ ಕನೆಕ್ಟಿವಿಟಿ ಆಯ್ಕೆ ಪಡೆದಿಕೊಂಡಿದೆ. ಜೊತೆಗೆ ಈ ಫೋನ್ ಫ್ಲೇರ್ ಬ್ಲಾಕ್ ಹಾಗೂ ಡ್ರೀಮಿ ಗೋಲ್ಡ್ ಬಣ್ಣದ ಎರಡು ಆಯ್ಕೆಗಳಲ್ಲಿ ಲಭ್ಯ.

ಈ ಫೋನ್‌ ಅನ್ನು ಜಾಗತಿಕವಾಗಿ ಲಾಂಚ್‌ ಮಾಡಲಾಗಿದೆಯಾದರೂ ಸಹ ಫೋನ್‌ನ ಬೆಲೆ ಬಗ್ಗೆ ಇನ್ನೂ ಮಾಹಿತಿ ಬಹಿರಂಗಪಡಿಸಿಲ್ಲ. ಇನ್ನು ವಿವೋ Y ಸರಣಿಯ ಫೋನ್‌ಗಳು ಸಾಮಾನ್ಯವಾಗಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಾಗಿವೆ. ವಿವೋ ಕಂಪೆನಿಯು ಈ ಸರಣಿಯನ್ನು 2015ರಲ್ಲಿ ಆರಂಭಿಸಿತ್ತು. ಈ ಮೂಲಕ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಇರುವ ಫೋನ್‌ಗಳನ್ನು ಮಾರಾಟ ಮಾಡಿಕೊಂಡು ಬರುತ್ತಿದೆ.

ವಿವೋ Y78 5G ಸ್ಮಾರ್ಟ್‌ಫೋನ್‌ ಅನಾವರಣ: ಫೀಚರ್ಸ್‌ ಏನಿವೆ?

ವಿವೋ Y78 5G ಯ ನಿರೀಕ್ಷಿತ ಬೆಲೆ ವಿವರ: ವಿವೋ Y78 5G ಸ್ಮಾರ್ಟ್‌ಫೋನ್‌ನ 8 GB RAM ಹಾಗೂ 256 GB ಇಂಟರ್‌ಸ್ಟೋರೇಜ್ ಆಯ್ಕೆಗೆ 1,699 ಚೈನೀಸ್ ಯುವಾನ್ ಬೆಲೆ ನಿಗದಿ ಮಾಡಲಾಗಿದ್ದು, ಈ ಮೂಲಕ ಜಾಗತಿಕವಾಗಿ 20,100ರೂ. ಗಳ ಆಸುಪಾಸಿನ ಬೆಲೆ ಪಡೆಯಬಹುದು ಎನ್ನಲಾಗಿದೆ. ಹಾಗೆಯೇ 12 GB RAM ಹಾಗೂ 256 GB ಇಂಟರ್‌ ಸ್ಟೋರೇಜ್‌ಗೆ 23,700ರೂ.ಗಳಾಗಿರಬಹುದು ಎಂದು ನಂಬಲಾಗಿದೆ.

Best Mobiles in India

English summary
Vivo has just unveiled the Vivo Y78 5G smartphone globally. The phone will be powered by Qualcomm Snapdragon 695 SoC processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+