Just In
- 2 hrs ago
ಹೆಚ್ಚು ಹಣ ನೀಡಿ ಹೊಸ ಫೋನ್ ಖರೀದಿ ಮಾಡ್ತಾ ಇದ್ದೀರಾ?..ಇಲ್ಲಿ ಗಮನಿಸಿ!
- 16 hrs ago
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- 17 hrs ago
ನೀವು ಸ್ಮಾರ್ಟ್ವಾಚ್ ಬಳಕೆ ಮಾಡುತ್ತೀರಾ!?... ಈ ಸೆನ್ಸರ್ಗಳ ಬಗ್ಗೆ ತಿಳಿಯಿರಿ!
- 18 hrs ago
ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಒಪ್ಪೋ ರೆನೋ 8T! ಬೆಲೆ ಎಷ್ಟಿರಬಹುದು?
Don't Miss
- Automobiles
ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಆಕ್ಟಿವಾ ಸ್ಕೂಟರ್
- Movies
ಅಪ್ಪು ಸ್ಥಾನ ತುಂಬೋಕೆಲ್ಲಾ ಆಗೋದಿಲ್ಲ; ಕೆಸಿಸಿ ಪತ್ರಿಕಾಗೋಷ್ಠಿಯಲ್ಲಿ ಗೆಳೆಯ ಪುನೀತ್ ಬಗ್ಗೆ ಕಿಚ್ಚನ ಮಾತು
- News
Vande Bharat Express; ದಕ್ಷಿಣ ಭಾರತಕ್ಕೆ 3 ಹೊಸ ರೈಲುಗಳು
- Sports
SA20: ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಹೊಡೆದ ರೀತಿ ಸಿಕ್ಸ್ ಬಾರಿಸಿದ ವಿಲ್ ಜ್ಯಾಕ್ಸ್! 20 ಎಸೆತಗಳಲ್ಲಿ ಆರ್ಸಿಬಿ ಬ್ಯಾಟರ್ ಅರ್ಧಶ
- Finance
ಬ್ಯಾಂಕ್ ಲಾಕರ್ ಒಪ್ಪಂದ ರಿನಿವಲ್ ಗಡುವು ವಿಸ್ತರಣೆ, ಹೊಸ ಡೆಡ್ಲೈನ್ ತಿಳಿಯಿರಿ
- Lifestyle
Horoscope Today 24 Jan 2023: ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
6,990ರೂ.ಗಳಿಗೆ ಎಂಟ್ರಿ ಲೆವೆಲ್ 'ವಿವೋ Y90' ಫೋನ್ ಬಿಡುಗಡೆ!
ಜನಪ್ರಿಯ ವಿವೋ ಕಂಪನಿಯು ಇತ್ತೀಚಿಗೆ ವಿವೋ ವಿ15 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಪಾಪ್ಅಪ್ ಸೆಲ್ಫಿ ಕ್ಯಾಮೆರಾ ಪರಿಚಯಿಸಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿತ್ತು. ಅದರ ಬೆನ್ನಲ್ಲೇ ಇದೀಗ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಒಂದನ್ನು ಅಗ್ಗದ ಬೆಲೆಯಲ್ಲಿ ಲಾಂಚ್ ಮಾಡಿದೆ. ಆಕರ್ಷಕ ಫೀಚರ್ಸ್‌ಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಇಂಡಿಯಾದಲ್ಲಿಯೇ ತಯಾರಿಸಲಾಗಿದೆ.

ಹೌದು, ವಿವೋ ಕಂಪನಿಯು ನೂತನವಾಗಿ 'ವಿವೋ Y90' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಇಂದಿನಿಂದ (ಜುಲೈ.27) ಪ್ರಮುಖ ರೀಟೈಲ್ ಸ್ಟೋರ್‌ಗಳಲ್ಲಿ ಮತ್ತು ಜನಪ್ರಿಯ ಇ ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್ ಶಕ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು ಜೊತೆಗೆ ವಿಶಾಲ ಡಿಸ್‌ಪ್ಲೇ, ಬಿಗ್ ಬ್ಯಾಟರಿ ಸಾಮರ್ಥ್ಯ ಸ್ಪೆಷಲ್ ಎನಿಸಿವೆ.

ಬ್ಲ್ಯಾಕ್ ಮತ್ತು ಗೋಲ್ಡ್ ಕಲರ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೊ 8.1 ಓಎಸ್‌ನ ಬೆಂಬಲ ಪಡೆದಿದೆ. ಹಿಂಬದಿಯಲ್ಲಿ 8ಎಂಪಿ ಸೆನ್ಸಾರ್‌ನ ರಿಯರ್ ಕ್ಯಾಮೆರಾ ನೀಡಲಾಗಿದೆ. ಹಾಗದಾರೇ ವಿವೋ ಕಂಪನಿಯ ಹೊಸ ವಿವೋ Y90 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್ ಮತ್ತು ಡಿಸ್‌ಪ್ಲೇ
ವಿವೋ Y90 ಸ್ಮಾರ್ಟ್‌ಫೋನ್ 720×1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ Halo ಫುಲ್‌ವ್ಯೂವ್ IPS ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ವಿಶಾಲ ಸ್ಕ್ರೀನಿನ್ ಈ ಸ್ಮಾರ್ಟ್‌ಫೋನ್ ಸುತ್ತಳತೆಯೂ 155.11x75.09x8.28mm ಆಗಿದ್ದು, ಲೈಟ್ ವೈಟ್ ರಚನೆಯನ್ನು ಪಡೆದಿದೆ ಇದರ ತೂಕವು 163.5 ಗ್ರಾಂ ಆಗಿದೆ.

ಪ್ರೊಸೆಸರ್ ಪವರ್
64 ಬಿಟ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಆಂಡ್ರಾಯ್ಡ್ ಓರಿಯೊ 8.0 ಬೆಂಬಲವಿದೆ. 2GB RAM ಸಾಮರ್ಥ್ಯವನ್ನು ಹೊಂದಿದ್ದು, 16GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್
ವಿವೋ Y90 ಸ್ಮಾರ್ಟ್‌ಫೋನ್ ಹಿಂಬದಿ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದ್ದು, f/2.0 ಅಪಾರ್ಚರ್‌ನೊಂದಿಗೆ 8ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸೆಲ್ಫಿ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 5ಎಂಪಿ ಸಾಮರ್ಥ್ಯದಲ್ಲಿದೆ. ಜೊತೆಗೆ ಏಸ್ ಬ್ಯೂಟಿ, ಪಾಮ್ ಕ್ಯಾಪ್ಚರ್, ವಾಯ್ಸ್ ಕಂಟ್ರೋಲ್, ಸೆಲ್ಫಿ ಲೈಟಿಂಗ್, ವಿಡಿಯೋ ಮತ್ತು ಟೈಮ್ ವಾಟರ್ಮಾರ್ಕ್ ಸೌಲಭ್ಯಗಳಿವೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
4,030mAh ಸಾಮರ್ಥ್ಯದ ಬ್ಯಾಟರಿ ಪವರ್ ನೀಡಲಾಗಿದ್ದು, ಜೊತೆಗೆ 10W ಮೈಕ್ರೋ ಯುಎಸ್‌ಬಿ ಚಾರ್ಜರ್ ಸೌಲಭ್ಯ ಸಹ ಇದೆ. ಇದರೊಂದಿಗೆ ವೈ ಫೈ, ಬ್ಲೂಟೂತ್ 5.0, ಮೈಕ್ರೋ ಯುಎಸ್‌ಬಿ ಪೋರ್ಟ್, ಜಿಪಿಎಸ್, ಓಟಿಜಿ, 3.5ಎಂಎಂ ಆಡಿಯೊ ಜಾಕ್, ಡಿಜಿಟಲ್ ಕಂಪಾಸ್, ಪ್ರೊಕ್ಸಿಮಿಟಿ ಸೆನ್ಸಾರ್, ಆಂಬಿಯಂಟ್ ಲೈಟ್ ಸೆನ್ಸಾರ್ ಸೌಲಭ್ಯಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ವಿವೋ Y90 ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಗೆ ಲಾಂಚ್ ಆಗಿದ್ದು, ಈ ಫೋನ್ 2GB RAM ಮತ್ತು 16GB ಸ್ಟೋರೇಜ್ ವೇರಿಯಂಟ್ ಮಾತ್ರ ಇದೆ. ಇದರ ಬೆಲೆಯು 6,990ರೂ.ಗಳು ಆಗಿದೆ. ಅಧಿಕೃತ ವಿವೋ ಸ್ಟೋರ್‌ಗಳಲ್ಲಿ, ಪ್ರಮುಖ ರೀಟೈಲ್ ಸ್ಟೋರ್‌ಗಳಲ್ಲಿ ಮತ್ತು ಜನಪ್ರಿಯ ಇ ಕಾಮರ್ಸ್ ತಾಣಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470