ವಿವೋ ಗ್ರ್ಯಾಂಡ್ ದೀಪಾವಳಿ ಫೆಸ್ಟ್ : ಹೊಸ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯ!
ದೀಪಾವಳಿ ಹಬ್ಬ ಇನ್ನೇನು ಬಂದೇ ಬಿಡ್ತು, ಈ ಬಾರಿ ದೀಪಾವಳಿಗೆ ಸ್ಮಾರ್ಟ್‌ಫೋನವೊಂದನ್ನು ಖರೀದಿಸಬೇಕು ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಈ ಕಾರಣದಿಂದಾಗಿಯೇ ಹಬ್ಬದ ಸಮಯದಲ್ಲಿ ಇ-ಕಾಮರ್ಸ್ ತಾಣಗಳು ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್ ಆಫರ್ ಘೋಷಿಸುತ್ತವೆ. ಇದರೊಂದಿಗೆ ಇತ್ತೀಚಿಗೆ ಸ್ಮಾರ್ಟ್‌ಫೋನ್ ಸಂಸ್ಥೆಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ನೀಡಲು ಶುರುಮಾಡಿವೆ. ಸದ್ಯ ವಿವೋ ಬಿಗ್ ಆಫರ್ ತಿಳಿಸಿದೆ.

ಹೌದು, ಜನಪ್ರಿಯ ವಿವೋ ಸ್ಮಾರ್ಟ್‌ಫೋನ್ ಈ ದೀಪಾವಳಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಆಯೋಜಿಸಿದ್ದು, ತನ್ನ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ನೀಡುತ್ತಿದೆ. ಒಟ್ಟು ಐದು ದಿನಗಳ ಈ ಫೆಸ್ಟ್ ಸೇಲ್ ಇದೇ ಅಕ್ಟೋಬರ್ 11 ರಿಂದ (ಇಂದು) ಆರಂಭವಾಗಿದ್ದು, ಅಕ್ಟೋಬರ್ 15ರ ವರೆಗೂ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರು ವಿವೋ ಇ-ಸ್ಟೋರ್ ತಾಣದಲ್ಲಿ ಖರೀದಿಸಬಹುದಾಗಿದೆ. ಹಾಗಾದರೇ ವಿವೋ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಮೇಳದಲ್ಲಿ ಬೆಸ್ಟ್ ಆಫರ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ದೀಪಾವಳಿ ಜಾಕ್‌ಪಾಟ್
ವಿವೋ ಆಯೋಜಿಸಿರುವ ಈ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಮೇಳದಲ್ಲಿ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಸುಮಾರು 11,000ರೂ.ವರೆಗೂ ಡಿಸ್ಕೌಂಟ್ ಲಭ್ಯವಾಗಲಿದ್ದು, ಇದರೊಂದಿಗೆ ಶೇ.10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ನೀಡುವುದಾಗಿ ತಿಳಿಸಿದೆ. ಹಾಗೆಯೇ ಪ್ರತಿದಿನ ವಿಶೇಷ ಆಫರ್‌ಗಳ 'ದೀಪಾವಳಿ ಜಾಕ್‌ಪಾಟ್' ಕೊಡುಗೆ ಸಹ ನೀಡಲಿದ್ದು, ಕಂಪನಿಯ ವಿವೋ Z1 ಪ್ರೊ, ವಿವೋ Z1x ಮತ್ತು ವಿವೋ ಯು10, ಸ್ಮಾರ್ಟ್‌ಫೋನ್‌ಗಳು ಬಿಗ್ ಡೀಲ್ ಪಡೆದಿವೆ.

ಕ್ಯಾಶ್‌ಬ್ಯಾಕ್ ಕೊಡುಗೆ
ವಿವೋ ಗ್ರ್ಯಾಂಡ್ ದೀಪಾವಳಿ ಫೆಸ್ಟ್‌ನಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಸಿ ಇಎಮ್‌ಐ ಟ್ರಾನ್ಸಾಕ್ಶನ್ ಮಾಡಿದರೇ ಶೇ.10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಹಾಗೂ ಇತರೆ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮತ್ತು ಬಜಾಜ್ ಫಿನ್‌ಸರ್ವ್ ಮೂಲಕ ಖರೀದಿಸಿದರೇ ನೋ ಕಾಸ್ಟ್ ಇಎಮ್‌ಐ ಪ್ರಯೋಜನ ದೊರೆಯಲಿದೆ. ಇದಲ್ಲದೇ ಎಕ್ಸ್‌ಚೇಂಜ್ ಕೊಡುಗೆಯಾಗಿ 1,500ರೂ.ವರೆಗೂ ರಿಯಾಯಿತಿ ಸಹ ಸಿಗಲಿದೆ.

ವಿವೋ Z1 ಪ್ರೊ
ವಿವೋ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ವಿವೋ Z1 ಪ್ರೊ' ಸ್ಮಾರ್ಟ್‌ಫೋನಿಗೆ ಸುಮಾರು 3,000ರೂ. ಡಿಸ್ಕೌಂಟ್ ನೀಡಲಾಗಿದ್ದು, 4GB + 64GBಯ ಬೇಸ್ ವೇರಿಯಂಟ್ 12,990ರೂ.ಗಳಿಗೆ ಸಿಗಲಿದೆ. ಹಾಗೆಯೇ 6GB RAM + 64GB ವೇರಿಯಂಟ್ 14,990ರೂ.ಗಳಿಗೆ ಮತ್ತು 6GB RAM + 128GB ವೇರಿಯಂಟ್ ಸ್ಮಾರ್ಟ್‌ಫೋನ್ 16,990ರೂ.ಗಳಿಗೆ ಖರೀದಿಸಬಹುದಾಗಿದೆ.

ವಿವೋ Z1x
ಇತ್ತೀಚಿನ ವಿವೋ Z1x ಸ್ಮಾರ್ಟ್‌ಫೋನ್ 'ಗ್ರ್ಯಾಂಡ್ ದೀಪಾವಳಿ ಫೆಸ್ಟ್'ನಲ್ಲಿ ಸುಮಾರು 2,000ರೂ.ಗಳ ಕ್ಯಾಶ್‌ಬ್ಯಾಕ್ ಪಡೆದಿದ್ದು, 6GB + 64GB ವೇರಿಯಂಟ್ 16,990ರೂ.ಗಳಿಗೆ ಸಿಗಲಿದೆ ಮತ್ತು 6GB + 128GB ವೇರಿಯಂಟ್ 18,990ರೂ.ಗಳಿಗೆ ಲಭ್ಯವಾಗಲಿದೆ. ಸೂಪರ್ AMOLED ಡಿಸ್‌ಪ್ಲೇ, 48ಎಂಪಿ ಕ್ಯಾಮೆರಾ, ವಿವೋ ಫ್ಯಾಶ್ ಚಾರ್ಜರ್ ಸೌಲಭ್ಯದ ಜೊತೆಗೆ 4,500mAh ಬ್ಯಾಟರಿ ಬಾಳಿಕೆ ಸಾಮರ್ಥ್ಯ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ವಿವೋ ಯು10
ವಿವೋ ಯು10 ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665, AI ಬೆಂಬಲಿತ ತ್ರಿವಳಿ ಕ್ಯಾಮೆರಾ ಹಾಗೂ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. 3GB+32GB, 3GB+64GB ಮತ್ತು 6GB+64GB ಸ್ಟೋರೇಜ್‌ನ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಬ್ಕ್ಯಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಸಿಗಲಿದೆ. ಆರಂಭಿಕ ವೇರಿಯಂಟ್ ಆಫರ್‌ನಲ್ಲಿ 8,990ರೂ.ಗಳಿಗೆ ಸಿಗಲಿದೆ.


Click it and Unblock the Notifications








