'ವಿವೋ Z1x' 8GB RAM ವೇರಿಯಂಟ್ ಲಾಂಚ್!..ಬೆಲೆ ಎಷ್ಟು ಗೊತ್ತಾ?
ವಿವೋ ಕಂಪನಿಯು ಇತ್ತೀಚಿಗೆ ದೇಶಿಯ ಮೊಬೈಲ್ ಮಾರುಕಟ್ಟೆಗೆ 'ವಿವೋ Z1x' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 'ಸ್ನ್ಯಾಪ್‌ಡ್ರಾಗನ್ 712' ಪ್ರೊಸೆಸರ್, 48ಎಂಪಿ ಕ್ಯಾಮೆರಾ, 4,500mAh ಬ್ಯಾಟರಿ ಫೀಚರ್‌ಗಳಿಂದ ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನಿನ ವೇಗಕ್ಕೆ ಇನ್ನಷ್ಟು ಬಲ ತುಂಬಲು ವಿವೋ ಇದೀಗ 8GB RAM ವೇರಿಯಂಟ್ ಬಿಡುಗಡೆ ಮಾಡಿದೆ.

ಹೌದು, ವಿವೋ ಕಂಪನಿಯು ಹೊಸದಾಗಿ 'ವಿವೋ Z1x' ಸ್ಮಾರ್ಟ್‌ಫೋನ್ 8GB RAM ಮತ್ತು 128GB ವೇರಿಯಂಟ್ ಅನ್ನು ಲಾಂಚ್ ಮಾಡಿದೆ. ಈ ಮೊದಲು 6GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದ್ದ ಈ ಸ್ಮಾರ್ಟ್‌ಫೋನ್ ಇನ್ನು ಒಟ್ಟು ಮೂರು ವೇರಿಯಂಟ್ ಆಯ್ಕೆಗಳಲ್ಲಿ ಸಿಗಲಿದೆ. ಹೊಸ 8GB RAM ಮತ್ತು 128GB ವೇರಿಯಂಟ್ ಬೆಲೆಯು 21,990ರೂ.ಗಳಾಗಿದೆ.

ವಿವೋ Z1x' ಸ್ಮಾರ್ಟ್‌ಫೋನಿಗೆ ಹೊಸದಾಗಿ 8GB RAM ಮತ್ತು 128GB ವೇರಿಯಂಟ್ ಅಷ್ಟೇ ಸೇರ್ಪಡೆ ಆಗಿದ್ದು, ಉಳಿದಂತೆ ಬೇರೆನು ಬದಲಾವಣೆ ಆಗಿಲ್ಲ. ಈ ಸ್ಮಾರ್ಟ್‌ಫೋನ್ ಫ್ಯೂಶನ್ ಬ್ಲೂ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಹಾಗೆಯೇ ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರಿಗೆ ಶೇ.5% ಡಿಸ್ಕೌಂಟ್ ಸಿಗಲಿದೆ. ಈ ಆಫರ್ ಇದೇ ಅಕ್ಟೋಬರ್ 31ರ ವರೆಗೆ ಮಾತ್ರ ಲಭ್ಯ. ಹಾಗಾದರೇ 'ವಿವೋ Z1x' ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ವಿವೋ Z1x' ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.38 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ವಾಟರ್ ಡ್ರಾಪ್ ಸ್ಟೈಲ್‌ನ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇ ಸುತ್ತಲೂ ಕರ್ವ್ ಆಕಾರದ ಡಿಸೈನ್ ನೀಡಲಾಗಿದ್ದು, ಫೋನಿನ ಬಾಹ್ಯ ಸೌಂದರ್ಯ ಹೆಚ್ಚಿಸಿದೆ. ವಿಶಾಲ ಡಿಸ್‌ಪ್ಲೇಯು ವೀಕ್ಷಣೆಗೆ ಮತ್ತು ಗೇಮಿಂಗ್‌ಗೆ ಅನುಕೂಲಕರವಾಗಿದೆ.

ಪ್ರೊಸೆಸರ್ ಯಾವುದು
ವಿವೋ Z1x' ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 712 SoC ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 6GB RAM + 64GB ಸ್ಟೋರೇಜ್ ಮತ್ತು 6GB RAM +128GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ. ಜೊತೆಗೆ ಹೊಸದಾಗಿ 8GB RAM ಮತ್ತು 128GB ವೇರಿಯಂಟ್ ಸೇರ್ಪಡೆ ಆಗಿದೆ.

ಕ್ಯಾಮೆರಾ ವಿಶೇಷತೆ
ಫೋನ್ ಹಿಂಬದಿಯಲ್ಲಿ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಿದ್ದು, ಮುಖ್ಯ ಕ್ಯಾಮೆರಾವು f/1.79 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದ್ದು, ಮೂರುನೇ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 32ಎಂಪಿ ಸೆನ್ಸಾರ್ ಪಡೆದಿದೆ ಮತ್ತು ಪಾಪ್‌ಅಪ್ ಮಾದರಿಯಲ್ಲಿದೆ.

ಬ್ಯಾಟರಿ ಸಾಮರ್ಥ್ಯ
ವಿವೋ Z1x' ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಇದರೊಂದಿಗೆ 22.5W ಸಾಮರ್ಥ್ಯ ಫ್ಲಾಶ್‌ಚಾರ್ಜರ್ ಅನ್ನು ಹೊಂದಿದೆ. ಉಳಿದಂತೆ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5ಎಂಎಂ ಹೆಡ್‌ಫೋನ್ ಜಾಕ್, ವೈಫೈ, ಬ್ಲೂಟೂತ್ ಸೇರಿದಂತೆ ಗೇಮಿಂಗ್‌ಗಾಗಿ ಮಲ್ಟಿಟರ್ಬೋ ಮತ್ತು ಅಲ್ಟ್ರಾ ಗೇಮ್ ಮೋಡ್ ಆಯ್ಕೆಗಳನ್ನು ಪರಿಚಯಿಸಿದೆ.

ಬೆಲೆ
ವಿವೋ Z1x' ಸ್ಮಾರ್ಟ್‌ಫೋನಿನ ಹೊಸ 8GB RAM ಮತ್ತು 128GB ವೇರಿಯಂಟ್ ಬೆಲೆಯು 21,990ರೂ.ಗಳಾಗಿದೆ. ಉಳಿದಂತೆ 6GB RAM + 64GB ವೇರಿಯಂಟ್ ಬೆಲೆಯು 16,990ರೂ.ಗಳಾಗಿದೆ ಮತ್ತು 6GB RAM +128GB ವೇರಿಯಂಟ್ ಬೆಲೆಯು 18,990ರೂ.ಗಳಾಗಿದೆ. ಫ್ಯೂಶನ್ ಬ್ಲೂ ಮತ್ತು ಫ್ಯಾಂಟೋಮ್ ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








