ವೊಡಾಫೋನ್‌ನಿಂದ ಹೊಸ 'ಆಲ್‌ರೌಂಡರ್‌' ಪ್ಲ್ಯಾನ್‌ಗಳು!

|

ವೊಡಾಫೋನ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಹಲವು ಭಿನ್ನ ಭಿನ್ನ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಡೇಟಾ, ಉಚಿತ ಕರೆ, ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒಳಗೊಂಡ ಪ್ಲ್ಯಾನ್‌ಗಳು ಗಮನ ಸೆಳೆದಿವೆ. ಆದರೆ ವೊಡಾಫೋನ್ ಈಗ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗುವಂತಹ ಹೊಸದಾಗಿ 'ಆಲ್‌ರೌಂಡರ್‌ ಪ್ರೀಪೇಡ್‌ ಪ್ಲ್ಯಾನ್ಸ್‌'ಗಳನ್ನು ಬಿಡುಗಡೆ ಮಾಡಿದೆ.

ಆಲ್‌ರೌಂಡರ್ ಪ್ಲ್ಯಾನ್ಸ್‌

ಹೌದು, ವೊಡಾಫೋನ್ ಹೊಸದಾಗಿ ಆಲ್‌ರೌಂಡರ್ ಪ್ಲ್ಯಾನ್ಸ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ಗಳು ಗ್ರಾಹಕರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ಉಪಯುಕ್ತವೆನಿಸುತ್ತವೆ. ಹೊಸ ಆಲ್‌ರೌಂಡರ್ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿ ಯಾವ ಪ್ಲ್ಯಾನು 300ರೂ.ಗಡಿ ದಾಟಿಲ್ಲ. ಆರಂಭಿಕ ಪ್ಲ್ಯಾನ್ ದರವು ಕೇವಲ 15.ರೂ.ಗಳಾಗಿದ್ದು, ದೊಡ್ಡ ಮೊತ್ತದ ಪ್ಲ್ಯಾನ್‌ ಅಂದರೇ 245ರೂ.ಗಳಾಗಿದೆ. ಹಾಗಾದರೇ ಈ ಆಲ್‌ರೌಂಡರ್‌ ಪ್ಲ್ಯಾನಿನಲ್ಲಿರುವ ವಿವಿಧ ಪ್ಲ್ಯಾನ್‌ಗಳನ್ನು ಮುಂದೆ ನೋಡೋಣ ಬನ್ನಿರಿ.

15ರೂ ಮತ್ತು 29ರೂ ಪ್ಲ್ಯಾನ್

15ರೂ ಮತ್ತು 29ರೂ ಪ್ಲ್ಯಾನ್

ವೊಡಾಫೋನ್‌ನ 15.ರೂ. ಪ್ಲ್ಯಾನ್‌ ಡೇಟಾ ಸೇರಿದಂತೆ ಯಾವುದೇ ಹೆಚ್ಚಿನ ಪ್ರಯೋಜನಗಳನ್ನು ಹೊಂದಿಲ್ಲ. ಬದಲಿಗೆ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಚಾರ್ಜ್‌ ಅನ್ನು ಪ್ರತಿ ನಿಮಿಷಕ್ಕೆ 30ಪೈಸಾ ಮಾಡಲಿದೆ. 3 ದಿನಗಳ ವ್ಯಾಲಿಡಿಟಿ ವಾಯ್ದೆ ಹೊಂದಿದೆ. ಹಾಗೆಯೇ 29.ರೂ.ಗಳ ಪ್ಲ್ಯಾನ್‌ 7 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇಲ್ಲಿಯೂ ಸಹ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಚಾರ್ಜ್‌ ಪ್ರತಿ ನಿಮಿಷಕ್ಕೆ 30ಪೈಸಾ ಆಗಿರಲಿದೆ.

35ರೂ, 39ರೂ ಮತ್ತು 45ರೂ.ಪ್ಲ್ಯಾನ್

35ರೂ, 39ರೂ ಮತ್ತು 45ರೂ.ಪ್ಲ್ಯಾನ್

ರೂ.35.ರೂ ಪ್ಲ್ಯಾನ್‌ನಲ್ಲಿ 26.ರೂ ಟಾಕ್‌ಟೈಮ್‌ ಸಿಗಲಿದ್ದು, ರೂ.39ರ ಪ್ಲ್ಯಾನಿನಲ್ಲಿ 30.ರೂ ಟಾಕ್‌ಟೈಮ್‌ ದೊರೆಯಲಿದೆ. ಹಾಗೆಯೇ ಈ ಎರಡು ಪ್ಲ್ಯಾನ್‌ಗಳಲ್ಲಿ 100MB ಡೇಟಾ ಲಭ್ಯವಾಗಲಿದೆ. ಇದೇ ರೀತಿ 45ರೂ.ಗಳ ಪ್ಲ್ಯಾನಿನಲ್ಲಿಯೂ ಸಹ 100MB ಡೇಟಾ ಪ್ರಯೋಜನೆ ಸಿಗಲಿದ್ದು, ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಪ್ರತಿ ನಿಮಿಷಕ್ಕೆ ಒಂದು ಪೈಸಾದಂತೆ ಕಡಿತವಾಗಲಿದೆ.

65ರೂ, 69ರೂ ಮತ್ತು 95ರೂ.ಪ್ಲ್ಯಾನ್

65ರೂ, 69ರೂ ಮತ್ತು 95ರೂ.ಪ್ಲ್ಯಾನ್

ವೊಡಾಫೋನಿನ 65ರೂ. ಪ್ಲ್ಯಾನ್‌ 55ರೂ ಟಾಕ್‌ಟೈಮ್‌ ಜೊತೆಗೆ ಪ್ರತಿ ನಿಮಿಷಕ್ಕೆ 60ಪೈಸಾದಲ್ಲಿ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳಿಗೆ ಲಭ್ಯವಾಗಲಿವೆ. ಇದರೊಮದಿಗೆ 200MB ಡೇಟಾ ಸಿಗಲಿದೆ. 69ರೂ.ಗಳ ಪ್ಲ್ಯಾನ್‌ನಲ್ಲಿ ಲೋಕಲ್ ಮತ್ತು ಎಸ್‌ಟಿಡಿ ಸೇರಿ 150 ನಿಮಿಷ ಲಭ್ಯವಾಗಲಿದ್ದು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ಸಿಗಲಿವೆ. ಇದರೊಂದಿಗೆ 250MB ಡೇಟಾ ಸೌಲಭ್ಯ ಲಭ್ಯ. ಇನ್ನು 95ರೂ.ಪ್ಲ್ಯಾನ್‌ನಲ್ಲಿ 500MB ಡೇಟಾ ಜೊತೆಗೆ ಲೋಕಲ್, ಪ್ರತಿ ನಿಮಿಷಕ್ಕೆ 60ಪೈಸಾದಲ್ಲಿ ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಮಾಡಬಹುದು. 28ದಿನಗಳ ವ್ಯಾಲಿಡಿಟಿ ಇರಲಿದೆ.

145ರೂ ಮತ್ತು 245.ರೂ ಪ್ಲ್ಯಾನ್‌

145ರೂ ಮತ್ತು 245.ರೂ ಪ್ಲ್ಯಾನ್‌

ವೊಡಾಫೋನ್‌ 145ರೂ.ಪ್ಲ್ಯಾನಿನಲ್ಲಿ 1GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿ ನಿಮಿಷಕ್ಕೆ 30ಪೈಸಾದಲ್ಲಿ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಇರಲಿವೆ. ಇಟ್ಟು 42ದಿನಗಳ ವ್ಯಾಲಿಡಿಟಿ ಇರಲಿದೆ. ಹಾಗೆಯೇ 245ರೂ.ಗಳ ಪ್ಲ್ಯಾನಿನಲ್ಲಿ 84ದಿನಗಳ ವ್ಯಾಲಿಡಿಟಿ ಜೊತೆಗೆ 2GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಲೋಕಲ್, ನ್ಯಾಷನಲ್ ಮತ್ತು ರೋಮಿಂಗ್ ಕರೆಗಳು ಪ್ರತಿ ನಿಮಿಷಕ್ಕೆ 30ಪೈಸಾದಲ್ಲಿ ಇರಲಿವೆ.

Best Mobiles in India

English summary
new All-Rounder Packs are all below the price of Rs 300. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X