ನಾಲ್ಕು ಅಗ್ಗದ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ ವೊಡಾಫೋನ್!
ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ತಮ್ಮ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಅನಿಸಿವೆ. ಆ ಬೆನ್ನಲ್ಲೇ ಮತ್ತೆ ಗ್ರಾಹಕರನ್ನು ಸೆಳೆಯಲು ಸರ್ಕಸ್ ನಡೆಸಿರುವ ಖಾಸಗಿ ಟೆಲಿಕಾಂ ಸಂಸ್ಥೆಗಳು ಹಲವು ಭಿನ್ನ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸುದ್ದಿ ಆಗಿವೆ. ಆ ಪೈಕಿ ವೊಡಾಫೋನ್ ಸಹ ಒಂದಾಗಿದೆ. ವೊಡಾಫೋನ್ ಇದೀಗ ನಾಲ್ಕ ಆಕರ್ಷಕ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ಹೌದು, ವೊಡಾಫೋನ್ ಟೆಲಿಕಾಂ ಸಂಸ್ಥೆಯು ಸದ್ಯ 39ರೂ, 129ರೂ, 199ರೂ, ಮತ್ತು 269ರೂ. ಬೆಲೆಯ ನಾಲ್ಕು ಹೊಸ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಪ್ರೀಪೇಡ್ ಪ್ಲ್ಯಾನ್‌ಗಳು ಡಾಟಾ, ಅನಿಯಮಿತ ಕರೆ, ಎಸ್‌ಎಮ್‌ಎಸ್, ಸೇರಿದಂತೆ ಭಿನ್ನ ವ್ಯಾಲಿಡಿಟಿ ಅವಧಿಗಳನ್ನು ಈ ಪ್ರೀಪೇಡ್ ಪ್ಲ್ಯಾನ್‌ಗಳು ಪಡೆದುಕೊಂಡಿವೆ. ಹಾಗಾದರೇ ವೊಡಾಫೋನಿನ ನಾಲ್ಕು ಹೊಸ ಪ್ರೀಪೇಡ್ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವೊಡಾಫೋನ್ 269ರೂ. ಪ್ಲ್ಯಾನ್
ವೊಡಾಫೋನಿನ ಈ 269ರೂ. ಪ್ಲ್ಯಾನ್ ಅಗ್ಗದ ದರದಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಉತ್ತಮ ಅನಿಸಲಿದೆ. ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆಗಳು, 600ಎಸ್‌ಎಮ್‌ಎಸ್, ಹಾಗೂ ಪೂರ್ಣ ವ್ಯಾಲಿಡಿಟಿ ಅವಧಿಗೆ 4GB ಡಾಟಾ ಪ್ರಯೋಜನ ಲಭ್ಯವಾಗಲಿದೆ.

ವೊಡಾಫೋನ್ 199ರೂ. ಪ್ಲ್ಯಾನ್
ವೊಡಾಫೋನಿನ 199ರೂ. ಪ್ಲ್ಯಾನ್ ಅಗ್ಗದ ದರದಲ್ಲಿ ಪ್ರತಿದಿನ 1GB ಡಾಟಾ ಬಯಸುವ ಗ್ರಾಹಕರಿಗೆ ಬೆಸ್ಟ್. ಈ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್, ಹಾಗೂ ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1GB ಡಾಟಾ ಪ್ರಯೋಜನ ಒಳಗೊಂಡಿದೆ.

ವೊಡಾಫೋನ್ 129ರೂ. ಪ್ಲ್ಯಾನ್
ವೊಡಾಫೋನಿನ 129ರೂ. ಪ್ಲ್ಯಾನ್ ಅಲ್ಪಾವಧಿ ವ್ಯಾಲಿಡಿಟಿಯ ಪ್ಲ್ಯಾನ್ ಆಗಿದೆ. ಈ ಪ್ಲ್ಯಾನ್ ಒಟ್ಟು 14 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯಿಸ್ ಕರೆಗಳು ಸೇರಿದಂತೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಉಚಿತ ಎಸ್‌ಎಮ್‌ಎಸ್, ಹಾಗೂ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 2GB ಡಾಟಾ ಪ್ರಯೋಜನ ಸಿಗಲಿದೆ.

ವೊಡಾಫೋನ್ 39ರೂ. ಪ್ಲ್ಯಾನ್
ವೊಡಾಫೋನ್ 39ರೂ, ಪ್ಲ್ಯಾನ್ ಆಲ್ ರೌಂಡರ್ ಪ್ರೀಪೇಡ್ ಪ್ಲ್ಯಾನ್ ಆಗಿದೆ. ಇನ್ನು ಈ ಫ್ಲ್ಯಾನಿನಲ್ಲಿ 39 ದಿನಗಳ ಪೂರ್ಣ ಟಾಕ್ ಟೈಮ್ ಅವಕಾಶ ಸಿಗಲಿದೆ. ಮತ್ತು 28 ದಿನಗಳ ವ್ಯಾಲಿಡಿಟಿ ಅವಧಿಗೆ ಒಟ್ಟು 100MB ಡೇಟಾ ದೊರೆಯಲಿದೆ. ಈ ಪ್ಲ್ಯಾನ್ ದರ ಕಟ್ಟರ್ ಯೋಜನೆಯನ್ನು ಪಡೆದಿದೆ. ಇದರ ಭಾಗವಾಗಿ ಹೊರಹೋಗುವ ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುತ್ತದೆ.


Click it and Unblock the Notifications








