Subscribe to Gizbot

ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ!..ಇದು ಭಾರತದ ಭವಿಷ್ಯ?

Written By:

ಜನರು ಯಾವುದೇ ಸ್ಮಾರ್ಟ್‌ಫೋನ್ ಬಳಕೆ ಇಲ್ಲದೇ ಕೇವಲ ಆಧಾರ್ ಕಾರ್ಡ್ ನಂಬರ್ ಮತ್ತು ಹೆಬ್ಬೆಟ್ಟು ಗುರುತು ನೀಡಿ ಹಣ ಪಾವತಿ ಮಾಡುವ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಶೀಘ್ರದಲ್ಲಿಯೇ ಜಾರಿಯಾಗಲಿದೆ.!!

ಸ್ಮಾರ್ಟ್‌ಫೋನ್ ಮತ್ತು ಆಪ್‌ಗಳಿಲ್ಲದೇ ಕೇವಲ ಬಯೋಮೆಟ್ರಿಕ್ ಸಿಸ್ಟಮ್ ಮೂಲಕ ವ್ಯವಹರಿಸಬಹುದಾದ ಆಧಾರ್ ಬಯೋಮೆಟ್ರಿಕ್ ಪೇಮೆಂಟ್ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಈಟಿ ಸಚಿವ ಶಂಕರ್‌ ಪ್ರಸಾದ್‌ ಹೇಳಿದ್ದಾರೆ.

 ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ!..ಇದು ಭಾರತದ ಭವಿಷ್ಯ?

ಏರ್‌ಟೆಲ್‌ಗೆ ಭಾರಿ ದಂಡ ವಿಧಿಸಲು ಜಿಯೋ ಆಗ್ರಹ!..ಬೀದಿಗೆ ಬಂದ ಜಗಳ!!

ಭೀಮ್ ಆಪ್‌ ಸಹ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆಯೊಳಗೇ ಸೇರಿಕೊಳ್ಳಲಿದ್ದು, ಈಗಾಗಲೇ 14 ಬ್ಯಾಂಕ್‌ಗಳು ಆಧಾರ್‌ ಬಯೋಮೆಟ್ರಿಕ್ ಯೋಜನೆಯ ಸಹಯೋಗಕ್ಕೆ ಸಿದ್ದವಿವೆ. ಹಾಗಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ದೇಶದಾದ್ಯಂತ ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ.

 ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ!..ಇದು ಭಾರತದ ಭವಿಷ್ಯ?

ವರದಿ ಒಂದರ ಪ್ರಕಾರ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಕೇವಲ 22% ಇದ್ದು, ದೇಶದ 90 ಪರ್ಸೆಂಟ್‌ಗಿಂತ ಹೆಚ್ಚು ಜನರು ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿದ್ದು, ಇ- ಆಧಾರ್‌ ಪೇಮೆಂಟ್ ಮೂಲಕ ದೇಶದಲ್ಲಿ ಕ್ಯಾಶ್‌ಲೆಸ್‌ ವ್ಯವಹಾರದ ದಿಕ್ಕೆ ಬದಲಾಗುವುವ ಸಂಭವವಿದೆ.!

English summary
With Aadhaar Pay, people will not require their phone for payment. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot