ಮುಗಿತು ಜಿಯೋ-ಏರ್‌ಟೆಲ್ ಕಥೆ: ವೊಡಾದಿಂದ ಸೂಪರ್ ಆಫರ್
ಜಿಯೋ-ಏರ್‌ಟೆಲ್ ಬೆಲೆ ಕಡಿಮೆ ಮಾಡಿದ ಮಾದರಿಯಲ್ಲಿಯೇ ವ್ಯಾಲಿಡಿಟಿಯನ್ನು ಕಡಿಮೆ ಮಾಡಿವೆ, ಆದರೆ ವೊಡಾಪೋನ್ ತನ್ನ ಗ್ರಾಹಕರಿಗೆ ಭರ್ಜರಿ ಡೇಟಾ, ವಾಯ್ಸ್ ಕಾಲ್ ಮತ್ತು ಹೆಚ್ಚಿನ ವ್ಯಾಲಿಡಿಟಿ ಇರುವಂತಹ ಆಫರ್ ವೊಂದನ್ನು ಲಾಂಚ್ ಮಾಡಿದೆ.
ದಿನೇ ದಿನೇ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ-ಏರ್‌ಟೆಲ್ ಆರ್ಭಟ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ಸ್ಪರ್ಧೆಗೆ ಧುಮುಕಿರುವ ವೊಡಾಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ವೊಂದನ್ನು ನೀಡಿದ್ದು, ಇದನ್ನು ಪಡೆದ ಗ್ರಾಹಕರು ಖಂಡಿತ ಜಿಯೋ-ಏರ್‌ಟೆಲ್ ಕಡೆ ಮುಖ ಮಾಡುವುದಿಲ್ಲ ಎನ್ನಲಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್: ನೀವು ಊಹಿಸಲಾಗದ ಆಫರ್ ಗಳು..!
ಜಿಯೋ-ಏರ್‌ಟೆಲ್ ಬೆಲೆ ಕಡಿಮೆ ಮಾಡಿದ ಮಾದರಿಯಲ್ಲಿಯೇ ವ್ಯಾಲಿಡಿಟಿಯನ್ನು ಕಡಿಮೆ ಮಾಡಿವೆ, ಆದರೆ ವೊಡಾಪೋನ್ ತನ್ನ ಗ್ರಾಹಕರಿಗೆ ಭರ್ಜರಿ ಡೇಟಾ, ವಾಯ್ಸ್ ಕಾಲ್ ಮತ್ತು ಹೆಚ್ಚಿನ ವ್ಯಾಲಿಡಿಟಿ ಇರುವಂತಹ ಆಫರ್ ವೊಂದನ್ನು ಲಾಂಚ್ ಮಾಡಿದೆ.

ಆರು ತಿಂಗಳಿಗೆ ರೂ.399:
ವೊಡಾ ಫೋನ್ ತಿಂಗಳಿಗೆ ರೂ.399ಕ್ಕೆ ಆರು ತಿಂಗಳ ವ್ಯಾಲಿಡಿಟಿ ಇರುವ ಆಫರ್ ಘೋಷಣೆ ಮಾಡಿದೆ. ಇದೇ ಜಿಯೋ-ಏರ್‌ಟೆಲ್ ನಲ್ಲಿ ಎರಡು ತಿಂಗಳು ಮಾತ್ರವೇ ಆಫರ್ ಇದೆ. ಇದರಿಂದ ವೊಡಾ ಕಡೆಗೆ ಗ್ರಾಹಕರು ಆಗಮಿಸುವ ಸಾಧ್ಯತೆ ಇದೆ.

90 GB 4G ಡೇಟಾ ಬಳಕೆಗೆ ಮುಕ್ತ:
ಇದಲ್ಲದೇ ವೊಡಾ ಗ್ರಾಹಕರು 6 ತಿಂಗಳ ಕಾಲವಧಿಗೆ 90 GB 4G ಡೇಟಾವನ್ನು ಬಳಕೆಗೆ ನೀಡುತ್ತಿದೆ. ಇದರಿಂದಾಗಿ ಗ್ರಾಹಕರು ಪ್ರತಿ ತಿಂಗಳು 10 GB ಗಿಂತಲೂ ಹೆಚ್ಚಿನ ಡೇಟಾವನ್ನು ಬಳಕೆ ಮಾಡಿಕೊಳ್ಳ ಬಹುದಾಗಿದೆ.

ಅನ್‌ಲಿಮಿಡೆಟ್ ವಾಯ್ಸ್ ಕಾಲ್:
ಇದರೊಂದಿಗೆ ಪ್ರತಿ ತಿಂಗಳು ಅಲ್‌ಲಿಮಿಡೆಟ್ ವಾಯ್ಸ್ ಕರೆ ಮಾಡುವ ಅವಕಾಶವನ್ನು ವೊಡಾಫೋನ್ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಬೇರೆಲ್ಲಾ ಆಫರ್ ಗಳಿಗಿಂತಲೂ ವೊಡಾಪೋನ್ ಬೆಸ್ಟ್ ಆಫರ್ ನೀಡುತ್ತಿದೆ.


Click it and Unblock the Notifications








