ನವರಾತ್ರಿ ಸೇಲ್ ನಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆಸಿದ್ದ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್ ಮತ್ತೊಂದು ಸೇಲ್ ಆರಂಭಿಸಿದೆ. ದೀಪಾವಳಿ ಸೇಲ್ ಅಕ್ಟೋಬರ್ 14 ರಿಂದ 17ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನೀವು ಉಹಿಸಲಾಗದ ಆಫರ್ ಗಳನ್ನು ನೀಡಲು ಮುಂದಾಗಿದೆ.

ಓದಿರಿ: ಬರಲಿದೆ ಒನ್‌ಪ್ಲಸ್ ನಿಂದ ಮತ್ತೊಂದು ಟಾಪ್ ಎಂಡ್ ಫೋನ್: ಇಲ್ಲಿದೇ ಲೀಕ್ ಫೋಟೋ.!
ಈ ಹಿಂದಿನಂತೆ ಡಿಸ್ಕೌಂಟ್ ಮತ್ತು ಕ್ಯಾಷ್ ಬ್ಯಾಕ್ ಸೇರಿದಂತೆ ಹಲವಾರು ಆಫರ್ ಗಳನ್ನು ನೀಡುವುದರೊಂದಿಗೆ ಬಜೆಟ್ ಹಾಗೂ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ನೀಡಲು ಮುಂದಾಗಿದೆ.
ವಿವಿಧ ಬ್ಯಾಂಕ್ ಕಾರ್ಡ್‌ಗಳ ಮೇಲೆ ಆಫರ್:
HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಭರ್ಜರಿ ಆಫರ್ ಕಾಣಬಹುದಾಗಿದ್ದು, ಪ್ರತಿ ಖರೀದಿಯ ಮೇಲೆ 10% ಡಿಸ್ಕೌಂಟ್, ಅಲ್ಲದೇ ನೋ ಕಾಸ್ಟ್ EMI ಆಫರ್ ಸಹ HDFC ಕಾರ್ಡುದಾರರಿಗೆ ದೊರೆಯಲಿದೆ. ಇದಲ್ಲದೇ ಫೋನ್ ಪೇ ಮೂಲಕ ಪೇಮೆಂಟ್ ಮಾಡಿದರೆ ಶೇ.20% ಆಫ್ ಸಹ ಲಭ್ಯವಿದೆ.
ವಿವಿಧ ಫೋನ್‌ಗಳು:
ಅತೀ ಹೆಚ್ಚು ಮಾರಾಟವಾಗುತ್ತಿರುವ ರೆಡ್‌ಮಿ ನೋಟ್4 ಮೇಲೆ ರೂ. 2000 ಕಡಿತವನ್ನು ಕಾಣಬಹುದಾಗಿದೆ. ಇದಲ್ಲದೇ ಮೊಟೊ c ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ರೂ.2000 ಕಡಿತವನ್ನು ನೀಡಲಾಗಿದೆ, ಜೊತೆಗೆ ಲಿನೋವೊ K8 ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ರೂ.2000 ಕಡಿಮೆಯಾಗಿದೆ. ಒಟ್ಟಿನಲ್ಲಿ ಸ್ಮಾರ್ಟ್‌ಫೋನ್ ಖರೀಸಲು ಸುಸಮಯ.
ಇನ್ನು ಇದೆ:
ಇದಲ್ಲದೇ LED TVಗಳ ಮೇಲೆ ಸಹ ಕಡಿತವನ್ನು ಕಾಣಬಹುದಾಗಿದ್ದು, ಇದರೊಂದಿಗೆ ಲ್ಯಾಪ್‌ಟಾಪ್, ಕ್ಯಾಮೆರಾಗಳು, ಪವರ್ ಬ್ಯಾಂಕ್, ಹೆಡ್‌ಫೋನ್, ಸೇರಿದಂತೆ ವಿವಿಧ ವಸ್ತುಗಳ ಮೇಲೆಯೂ ಭರ್ಜರಿ ಆಫರ್ ಅನ್ನು ಇಲ್ಲಿ ನೀಡಲಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.