Home
ಸುದ್ದಿಜಾಲ

Vodafone Idea 5G: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಶುಭಸುದ್ದಿ: ಈ ಸೇವೆ ಪಡೆಯಲು ಆರೇ ತಿಂಗಳು ಬಾಕಿ

ವೊಡಾಫೋನ್ ಐಡಿಯಾ (Vodafone Idea) ಅಥವಾ ವಿ ಟೆಲಿಕಾಂ (Vi Telecom) ಏರ್‌ಟೆಲ್‌ ಹಾಗೂ ಜಿಯೋ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸೆಣಸುತ್ತಿದೆ. ಅದರಲ್ಲೂ ಈ ಎರಡೂ ಮುಖ್ಯ ಟೆಲಿಕಾಂ ಪ್ಲ್ಯಾನ್‌ಗಳಿಗಿಂತ ವಿ ಟೆಲಿಕಾಂನಲ್ಲಿ ಅಗ್ಗದ ಪ್ಲ್ಯಾನ್ ಲಭ್ಯ ಇದ್ದು, ಬಳಕೆದಾರರಿಗೆ ವಿವಿಧ ಪ್ರಯೋಜನ ಕಲ್ಪಿಸಿಕೊಡುತ್ತಿದೆ.

ಹೌದು, ಏರ್‌ಟೆಲ್‌ ಹಾಗೂ ಜಿಯೋ (Airtel and Jio) ಸರಿಸಮನಾಗಿ ತಾಮುಂದು ನಾಮುಂದು ಎಂದುಕೊಂಡು ವಿಶೇಷ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಿಕೊಡುತ್ತಿದೆ. ಅದರಂತೆ ಈಗ ವೊಡಾಫೋನ್ ಐಡಿಯಾ ನಿಮಗಿಂತ ನಾನೇನು ಕಡಿಮೆ ಇಲ್ಲ ಎಂದು ತೋರಿಸಲು ಇನ್ನೇನು ಕೆಲವೇ ದಿನಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದೆ. ಈ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಎಲ್ಲಾ ತಯಾರಿ ನಡೆಸಿದೆ. ಹಾಗಿದ್ರೆ, ಆರಂಭದಲ್ಲಿ ಎಲ್ಲೆಲ್ಲಿ ಈ ಸೇವೆ ಲಭ್ಯ ಇರಲಿದೆ?, ಬೆಲೆ ಹೇಗಿರಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ವೊಡಾಫೋನ್ ಐಡಿಯಾ ಗ್ರಾಹಕರಿಗೆ ಶುಭಸುದ್ದಿ: ಈ ಸೇವೆ ಪಡೆಯಲು ಆರೇ ತಿಂಗಳು ಬಾಕಿ

ವೊಡಾಫೋನ್ ಐಡಿಯಾ 5G: ಏರ್‌ಟೆಲ್ ಮತ್ತು ರಿಲಯನ್ಸ್ ಬೆಂಬಲಿತ ಜಿಯೋ ಈಗಾಗಲೇ ದೇಶದಲ್ಲಿ 5G ನೆಟ್‌ವರ್ಕ್ ಸೌಲಭ್ಯವನ್ನು ನೀಡುತ್ತಿದೆ. ಅದರಂತೆ ಶೀಘ್ರದಲ್ಲೇ ದೇಶದಲ್ಲಿ ಮೀಸಲಾದ 5G ಪ್ಲ್ಯಾನ್‌ಗಳನ್ನು ಘೋಷಣೆ ಮಾಡಲು ಸಜ್ಜಾಗಿವೆ. ವಿಷಯ ಏನೆಂದರೆ 4G ಪ್ಯಾಕ್‌ಗಳಿಗಿಂತ 5-10 ಪ್ರತಿಶತ ಹೆಚ್ಚು 5G ದುಬಾರಿಯಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ಅದಾಗ್ಯೂ ಈವರೆಗೆ ವೊಡಾಫೋನ್ ಐಡಿಯಾ ಇನ್ನೂ ಯಾವುದೇ 5G ರೋಲ್‌ಔಟ್ ಯೋಜನೆಗಳನ್ನು ಘೋಷಿಸಿರಲಿಲ್ಲ. ಆದರೆ, ಇದೀಗ ಈ ವಿಷಯದಲ್ಲಿ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ಇಟಿ ಟೆಲಿಕಾಂ ವರದಿ ಮಾಡಿದ್ದು, ಟೆಲಿಕಾಂ ನೆಟ್‌ವರ್ಕ್‌ ಮುಂದಿನ 6-7 ತಿಂಗಳುಗಳಲ್ಲಿ ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಲ್ಲೇಖ ಮಾಡಿದೆ. ವಿ ಈಗಾಗಲೇ ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ. ಈ ನಡುವೆ ವಿ ಟೆಲಿಕಾಂ ತನ್ನ 3G ಸೇವೆಗಳನ್ನು ಮುಚ್ಚಲು ಮುಂದಾಗಿದೆ. ಇದರ ಬದಲಾಗಿ 4G ವ್ಯಾಪ್ತಿಯನ್ನು ಸುಧಾರಿಸಲು ಬ್ಯಾಂಡ್‌ವಿಡ್ತ್ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ.

ವೊಡಾಫೋನ್ ಐಡಿಯಾ ಗ್ರಾಹಕರಿಗೆ ಶುಭಸುದ್ದಿ: ಈ ಸೇವೆ ಪಡೆಯಲು ಆರೇ ತಿಂಗಳು ಬಾಕಿ

ಈ ಸಂಬಂಧ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಮೂಂದ್ರಾ ಅವರು ಮಾಹಿತಿ ನೀಡಿದ್ದು, ಅಧಿಕೃತ ಉಡಾವಣೆಯ ಮೊದಲು 5G ಯ ಹಣಗಳಿಕೆಯ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ವಿ ಎಲ್ಲಾ ತಯಾರಿ ಮಾಡುತ್ತಿದೆ. ಕಂಪನಿಯು ತನ್ನ 5G ರೋಲ್‌ಔಟ್ ಅನ್ನು ಅಂತಿಮಗೊಳಿಸಲು ವಿವಿಧ ತಂತ್ರಜ್ಞಾನ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಈ ವೇಳೆ ಹೇಳಿದ್ದಾರೆ.

2024 ರ ಅಂತ್ಯದ ವೇಳೆಗೆ ವಿ ಟೆಲಿಕಾಂ 5G ಸೇವೆಗಳನ್ನು ಹೊರತರಲು ಪ್ರಾರಂಭಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು. ಇನ್ನು ಆಂಧ್ರ ಪ್ರದೇಶ, ಬಿಹಾರ, ದೆಹಲಿ, ಗುಜರಾತ್, ಮಹಾರಾಷ್ಟ್ರ, ಮುಂಬೈ, ಪಂಜಾಬ್, ರಾಜಸ್ಥಾನ, ಹರಿಯಾಣ, ಕರ್ನಾಟಕ, ಕೇರಳ, ಕೋಲ್ಕತ್ತಾ, ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ (ಪೂರ್ವ), ಉತ್ತರ ಪ್ರದೇಶ (ಪಶ್ಚಿಮ), ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಭಾರತದಾದ್ಯಂತ 17 ವಲಯಗಳಲ್ಲಿ 5G ತರಂಗಾಂತರ ಹಂಚಿಕೆಯನ್ನು ಪಡೆದುಕೊಂಡಿದೆ. ಈಗಾಗಲೇ ಮುಂಬೈ ಮತ್ತು ಪುಣೆಯ ಕೆಲವು ಬಳಕೆದಾರರು 5G ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆದಿದ್ದಾರೆ.

ವೊಡಾಫೋನ್ ಐಡಿಯಾ ಗ್ರಾಹಕರಿಗೆ ಶುಭಸುದ್ದಿ: ಈ ಸೇವೆ ಪಡೆಯಲು ಆರೇ ತಿಂಗಳು ಬಾಕಿ

ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಗಳೊಂದಿಗೆ ವಿ ಹೊಸ ವಾರ್ಷಿಕ ಪ್ಲ್ಯಾನ್‌ಗಳನ್ನು ಆರಂಭ ಮಾಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಜಿಯೋ ಮತ್ತು ಏರ್‌ಟೆಲ್‌ನ ಅದೇ ಸೌಲಭ್ಯದ ಪ್ಲ್ಯಾನ್‌ಗಳಿಗಿಂತ ಇದು ಅಗ್ಗವಾಗಿವೆ. ಈ ನಡುವೆ ಪ್ರಸ್ತುತ ಭಾರತದಲ್ಲಿ 228 ಮಿಲಿಯನ್ ಬಳಕೆದಾರರನ್ನು ಹೊಂದಿದೆಯಾದರೂ ಸಹ ಈ ಸಂಖ್ಯೆಯು ಇಳಿಮುಖವಾಗುತ್ತಲೇ ಸಾಗಿದೆ.

Best Mobiles in India

English summary
Vodafone Idea is all set to launch 5G in India in a few days. 5G spectrum in 17 zones across India including Andhra Pradesh, Bihar, Delhi, Gujarat, Maharashtra, Mumbai, Punjab, Rajasthan, Haryana, Karnataka, Kerala and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+