Home
ಸುದ್ದಿಜಾಲ

ಜಿಯೋ, ವಿ ಟೆಲಿಕಾಂ 600ರೂ. ಪ್ಲ್ಯಾನ್: ಬಜೆಟ್‌ ಬೆಲೆಯಲ್ಲಿ ಯಾವುದು ಉತ್ತಮ?

ದೇಶದಲ್ಲಿ ಜಿಯೋ ಮತ್ತು ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಅವುಗಳಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಆಕರ್ಷಿಸಿದ್ದು, ಅವುಗಳು ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿವೆ.

ವೊಡಾಫೋನ್

ಹೌದು, ಜಿಯೋ, ಜಿಯೋ ಮತ್ತು ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಸಂಸ್ಥೆಗಳು ಸಾಮ್ಯತೆ ಬೆಲೆಯ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿವೆ. ಆ ಪೈಕಿ ಬಹುತೇಕ ಬಳಕೆದಾರರು 600ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಹೆಚ್ಚು ರೀಚಾರ್ಜ್‌ ಮಾಡಿಸಿಕೊಳ್ಳಲು ಇಚ್ಛಿಸುತ್ತಾರೆ. ಕೆಲವರು ಜಿಯೋ ರೀಚಾರ್ಜ್ ಮಾಡಿಸಿಕೊಂಡರೇ, ಮತ್ತೆ ಕೆಲವರು ವಿ ಟೆಲಿಕಾಂ ರೀಚಾರ್ಜ್‌ ಮಾಡಿಸಿಕೊಳ್ಳುತ್ತಾರೆ. ಗಮನಿಸಬೇಕಾದ ಅಂಶವೆಂದರೇ ನಿಖರವಾಗಿ 600ರೂ. ಯೋಜನೆ ಇಲ್ಲ. ಬದಲಿಗೆ ಜಿಯೋ 599ರೂ. ಪ್ಲ್ಯಾನ್ ಹೊಂದಿದೆ, ವಿ ಟೆಲಿಕಾಂ 601ರೂ. ಪ್ಲ್ಯಾನ್‌ ಹೊಂದಿದೆ. ಹಾಗಾದರೇ ಈ ಎರಡು ಪ್ಲ್ಯಾನ್‌ಗಳ ಪ್ರಯೋಜನಗಳೆನು ಯಾವುದು ಉತ್ತಮ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ. ಉಳಿದಂತೆ ಜಿಯೋ ಸೇವೆಗಳು ಹಾಗೂ ಜಿಯೋ ಆಪ್ಸ್‌ ಸೌಲಭ್ಯ ದೊರೆಯಲಿದೆ.

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ ಸಂಸ್ಥೆಯ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ. ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 32GB ಡೇಟಾ ಲಭ್ಯವಾಗಲಿದೆ. ವಿಕೇಂಡ್‌ ಡೇಟಾ ರೋಲ್‌ಓವರ್‌, ಪ್ರಯೋಜನವು ಪಡೆದಿದೆ.

ರೀಚಾರ್ಜ್‌ಗೆ ಯಾವುದು ಯೋಗ್ಯ?

ರೀಚಾರ್ಜ್‌ಗೆ ಯಾವುದು ಯೋಗ್ಯ?

ವಿ ಟೆಲಿಕಾಂ ಮತ್ತು ಜಿಯೋ ಈ ಎರಡು ಕಂಪನಿಗಳು ಆಕರ್ಷಕ ಸೌಲಭ್ಯಗಳನ್ನು ನೀಡಿವೆ. ಅದಾಗ್ಯೂ ವ್ಯಾಲಿಡಿಟಿಗಿಂತ ಮುಖ್ಯವಾಗಿ ನೀವು ಹೆಚ್ಚಿನ ಡೇಟಾವನ್ನು ಬಯಸುತ್ತಿದ್ದರೇ, ನಿಮಗೆ ವೊಡಾಫೋನ್ ಐಡಿಯಾವನ್ನು 601ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಉತ್ತಮ ಎನಿಸಲಿದೆ. ಈ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ OTT ಸೌಲಭ್ಯ ಪಡೆದಿದ್ದು, ಡೈಲಿ 3GB ಡೇಟಾ ಒದಗಿಸಲಿದೆ. ಇನ್ನು ಡೈಲಿ 2GB ಡೇಟಾ ಜೊತೆಗೆ ವ್ಯಾಲಿಡಿಟಿ ಹೆಚ್ಚಿರಬೇಕು ಎಂದು ನೀವು ಬಯಸಿದರೇ, ಜಿಯೋ 599ರೂ. ಯೋಜನೆಯು ಉತ್ತಮ ಆಯ್ಕೆ ಎನಿಸಲಿದೆ.

Best Mobiles in India

English summary
Plan for exactly Rs 600; but, Jio offers a plan for Rs 599, and Vi offers a plan for Rs 601, which are both just Rs 1 off from the Rs 600 mark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+