Home
ಸುದ್ದಿಜಾಲ

Vodafone Idea: ಇದೇ ನೋಡಿ ವೊಡಾಫೋನ್‌ ಐಡಿಯಾದ ಜನಪ್ರಿಯ ಪ್ಲ್ಯಾನ್‌! ಭರ್ಜರಿ ಪ್ರಯೋಜನಗಳು ಲಭ್ಯ

ವೊಡಾಫೋನ್‌ ಐಡಿಯಾ (Vodafone Idea) ಈಗಾಗಲೇ ಸಾಕಷ್ಟು ವಿಶೇಷ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಇನ್ನೇನು ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಎಲ್ಲರಿಗೂ 5G ಸೌಲಭ್ಯ ಕಲ್ಪಿಸಿಕೊಡಲಿದೆ. ಈ ನಡುವೆ ವೊಡಾಫೋನ್‌ ಐಡಿಯಾ ಹೆಚ್ಚು ಜನಪ್ರಿಯವಾಗಿರುವ ಪ್ಲ್ಯಾನ್‌ ಬಗ್ಗೆ ಮಾಹಿತಿ ನೀಡಿದೆ.

ಹೌದು, ವೊಡಾಫೋನ್‌ ಐಡಿಯಾ (Vi) ತನ್ನ ವೆಬ್‌ಸೈಟ್‌ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ವಿಶೇಷ ಪ್ಲ್ಯಾನ್‌ ವೊಂದನ್ನು ಮಾರ್ಕ್‌ ಮಾಡಿದೆ. ಈ ಪ್ಲ್ಯಾನ್‌ ಗೆ ಸಾಕಷ್ಟು ವಿ ಬಳಕೆದಾರರು ಆಕರ್ಷಿತರಾಗಿದ್ದಾರಂತೆ. ಹಾಗಿದ್ರೆ, ಯಾವುದು ಈ ವಿಶೇಷ ಪ್ಲ್ಯಾನ್‌?, ಅಂತಹುದ್ದೇನಿದೆ ಇದರಲ್ಲಿ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇದೇ ನೋಡಿ ವೊಡಾಫೋನ್‌ ಐಡಿಯಾದ ಜನಪ್ರಿಯ ಪ್ಲ್ಯಾನ್‌! ಭರ್ಜರಿ ಪ್ರಯೋಜನಗಳು ಲಭ್ಯ

299 ರೂ.ಗಳ ಪ್ಲ್ಯಾನ್‌: ವೊಡಾಫೋನ್‌ ಐಡಿಯಾ ಪ್ಲ್ಯಾನ್‌ಗಳಲ್ಲಿ ಉತ್ತಮ ಮಾರಾಟಗಾರ ಎಂದು ಈ ಪ್ಲ್ಯಾನ್‌ ಗುರುತಿಸಿಕೊಂಡಿದೆ. ಈ 299ರೂ.ಗಳ ಪ್ಲ್ಯಾನ್‌ 1.5GB ದೈನಂದಿನ ಡೇಟಾ, ನಿತ್ಯ 100 SMS ಸೌಲಭ್ಯ ನೀಡಲಿದ್ದು, 28 ದಿನಗಳ ವರೆಗೆ ಅನಿಯಮಿತ ವಾಯ್ಸ್‌ ಕರೆಗಳೊಂದಿಗೆ ಬರುತ್ತದೆ. ಅಷ್ಟೇ ಅಲ್ಲದೆ ಈ ಪ್ಲ್ಯಾನ್‌ನಲ್ಲಿ ಹೆಚ್ಚುವರಿ ಸೌಲಭ್ಯವನ್ನೂ ಸಹ ಪಡೆಯಬಹುದಾಗಿದೆ. ಅಂದರೆ ವಿ ಮೂವಿಸ್‌ & ಟಿವಿ, ವಿ ಆಪ್‌ನಲ್ಲಿ ಹಂಗಾಮಾ ಮ್ಯೂಸಿಕ್‌ ಮತ್ತು ವಿ ಹೀರೋ ಅನ್‌ಲಿಮಿಟೆಡ್ ಪ್ರಯೋಜನಗಳನ್ನು ನೀಡಲಾಗುತ್ತದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವೊಡಾಫೋನ್‌ ಐಡಿಯಾ, ಭಾರತದಲ್ಲಿ ಮೂರನೇ ಅತಿ ದೊಡ್ಡ ಟೆಲಿಕಾಂ ಪ್ಲೇಯರ್ ಆಗಿರುವ ವೊಡಾಫೋನ್‌ ಐಡಿಯಾ 299 ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ ತನ್ನ ಅತ್ಯುತ್ತಮ ಮಾರಾಟದ ಕೊಡುಗೆಯಾಗಿದೆ ಎಂದಿದೆ. ಅಲ್ಲದೆ ಈ ಪ್ಲ್ಯಾನ್‌ ಅನ್ನು ಭಾರತದ ಎಲ್ಲಾ ಟೆಲಿಕಾಂ ವಲಯಗಳಲ್ಲೂ ಸಹ ನೀಡಲಾಗುತ್ತಿರುವುದು ವಿಶೇಷ ಸಂಗತಿ.

ಇದೇ ನೋಡಿ ವೊಡಾಫೋನ್‌ ಐಡಿಯಾದ ಜನಪ್ರಿಯ ಪ್ಲ್ಯಾನ್‌! ಭರ್ಜರಿ ಪ್ರಯೋಜನಗಳು ಲಭ್ಯ

ಅಂದರೆ ಜಿಯೋ ಮತ್ತು ಏರ್‌ಟೆಲ್ (Jio and Airtel) ತಮ್ಮ 299 ರೂ.ಗಳ ಪ್ಲ್ಯಾನ್‌ನೊಂದಿಗೆ ಗ್ರಾಹಕರಿಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡುತ್ತವೆ. ಆದರೆ ವೊಡಾಫೋನ್‌ ಮಾತ್ರ ಈ ಸೌಲಭ್ಯ ನೀಡುತ್ತಿಲ್ಲ. ಯಾಕೆಂದರೆ ನಿಮಗೆ ತಿಳಿದಿರುವ ಹಾಗೆ ಇದು ಇನ್ನೂ ಸಹ 5G ಅನ್ನು ಪರಿಚಯಿಸಿಲ್ಲ. ಇನ್ನು ಈ ಪ್ಲ್ಯಾನ್‌ನಲ್ಲಿ ಲಭ್ಯ ಇರುವ ವಿ ಹೀರೋ ದಲ್ಲಿ ಅನಿಯಮಿತ ಪ್ರಯೋಜನಗಳೆಂದರೆ ವೀಕೆಂಡ್ ಡೇಟಾ ರೋಲ್‌ಓವರ್, ಬಿಂಗ್ ಆಲ್ ನೈಟ್ ಮತ್ತು ಡೇಟಾ ಡಿಲೈಟ್ಸ್.

ವಾರಾಂತ್ಯದ ಡೇಟಾ ರೋಲ್‌ಓವರ್ ಆಯ್ಕೆಯು ವಾರಾಂತ್ಯದಲ್ಲಿ ವಾರದ ದಿನಗಳಲ್ಲಿ ಉಳಿದ ಡೇಟಾವನ್ನು ಬಳಕೆ ಮಾಡಲು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ. ಜೊತೆಗೆ ಈ ಪ್ಲ್ಯಾನ್‌ನಲ್ಲಿ ಬಿಂಗ್ ಆಲ್ ನೈಟ್ ಸೌಲಭ್ಯ ಇದ್ದು, ಗ್ರಾಹಕರು ಪ್ರತಿ ರಾತ್ರಿ 12 AM ಮತ್ತು 6 AM ವರೆಗೆ ಎಷ್ಟು ಬೇಕಾದರೂ ಸಹ ಡೇಟಾವನ್ನು ಬಳಸಲು ಅನುಮತಿಸುತ್ತದೆ. ಹಾಗೆಯೇ ಡೇಟಾ ಡಿಲೈಟ್ಸ್ ಆಫರ್‌ನೊಂದಿಗೆ, ಗ್ರಾಹಕರು ವಿ ನಿಂದ 2GB ತುರ್ತು ಡೇಟಾವನ್ನು ಪಡೆಯಬಹುದಾಗಿದೆ ಅದು ಒಂದು ಸಮಯದಲ್ಲಿ ದಿನಕ್ಕೆ 1GB ರೂಪದಲ್ಲಿ ರಿಡೀಮ್ ಆಯ್ಕೆಯನ್ನು ನೀಡುತ್ತದೆ.

ಇದೇ ನೋಡಿ ವೊಡಾಫೋನ್‌ ಐಡಿಯಾದ ಜನಪ್ರಿಯ ಪ್ಲ್ಯಾನ್‌! ಭರ್ಜರಿ ಪ್ರಯೋಜನಗಳು ಲಭ್ಯ

ಈ ತುರ್ತು ಡೇಟಾವನ್ನು ತಿಂಗಳಿಗೆ 2GB ವರೆಗೆ ಮಾತ್ರ ಬಳಕೆ ಮಾಡಲು ಸಾಧ್ಯ. ಗ್ರಾಹಕರು 1GB ತುರ್ತು ಡೇಟಾವನ್ನು ರಿಡೀಮ್ ಮಾಡಲು ನಿರ್ಧರಿಸಿದರೆ ಅಂದೇ ಆ ಡೇಟಾವನ್ನು ಖಾಲಿ ಮಾಡಬೇಕಾಗುತ್ತದೆ. ಏಕೆಂದರೆ ಅದು ದಿನದ ಕೊನೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಎಲ್ಲಾ ಕಾರಣಕ್ಕೆ ಈ ಪ್ಲ್ಯಾನ್‌ ಗೆ ಹೆಚ್ಚಿನ ಜನರು ಮಾರುಹೋಗಿದ್ದಾರೆ. ನೀವು ಸಹ ಈ ಪ್ಲ್ಯಾನ್‌ನಿಂದ ವಿವಿಧ ಸೌಲಭ್ಯ ಪಡೆಯುತ್ತಿದ್ದರೆ ಗಿಜ್‌ಬಾಟ್‌ನೊಂದಿಗೆ ನಿಮ್ಮ ಅನುಭವ ಹಂಚಿಕೊಳ್ಳಿ.

Best Mobiles in India

English summary
Vodafone Idea (Vi) has marked a very popular special plan on its website. That is the Rs 299 plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+