Home
ಸುದ್ದಿಜಾಲ

ವೊಡಾಫೋನ್ ಐಡಿಯಾದಿಂದ ಹೊಸ ಪ್ಲ್ಯಾನ್‌ ಘೋಷಣೆ! ನಿತ್ಯವೂ 2GB ಡೇಟಾ

ವೊಡಾಫೋನ್ ಐಡಿಯಾ (Vodafone Idea) ಇತ್ತೀಚೆಗೆ ಹೊಸ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ದೀರ್ಘ ಅವಧಿಯ ಪ್ಲ್ಯಾನ್‌ ವೊಂದನ್ನು ಘೋಷಣೆ ಮಾಡಿದ್ದು, ಈ ಮೂಲಕ ಗ್ರಾಹಕರು ನಿತ್ಯವೂ 2GB ಡೇಟಾ ಸೌಲಭ್ಯ ಪಡೆಯಬಹುದಾಗಿದೆ.

ಹೌದು, ವೊಡಾಫೋನ್ ಐಡಿಯಾ (Vi) ಇದೀಗ ಕಡಿಮೆ ಹಣದಲ್ಲಿ ಹೆಚ್ಚಿನ ಸೌಲಭ್ಯ ಇರುವ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದ್ದು, ಈ ಮೂಲಕ ಏರ್‌ಟೆಲ್‌ ಹಾಗೂ ಜಿಯೋಗೆ (Airtel and Jio) ಟಕ್ಕರ್ ನೀಡಲಿದೆ. ಅಲ್ಲದೆ ವಿ ಟೆಲಿಕಾಂ ಗ್ರಾಹಕರು ಈ ಪ್ಲ್ಯಾನ್‌ನಿಂದ ವಿವಿಧ ಪ್ರಯೋಜನ ಸಹ ಪಡೆಯಬಹುದಾಗಿದೆ. ಹಾಗಿದ್ರೆ, ಈ ಪ್ಲ್ಯಾನ್‌ ಬೆಲೆ ಎಷ್ಟು?, ಮಾನ್ಯತೆ ದಿನಗಳು ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವೊಡಾಫೋನ್ ಐಡಿಯಾದಿಂದ ಹೊಸ ಪ್ಲ್ಯಾನ್‌ ಘೋಷಣೆ! ನಿತ್ಯವೂ 2GB ಡೇಟಾ

ವೊಡಾಫೋನ್ ಐಡಿಯಾ (Vi) ಹೊಸ ಪ್ಲ್ಯಾನ್: ವೊಡಾಫೋನ್ ಐಡಿಯಾ ಇದೀಗ 904ರೂ.ಗಳ ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಘೋಷಣೆ ಮಾಡಿದೆ. ಇದು 90 ದಿನಗಳ ಸಂಪೂರ್ಣ ಮಾನ್ಯತೆಯ ಅವಧಿಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಅಲ್ಲದೆ ಬಳಕೆದಾರರು ಅನಿಯಮಿತ ಧ್ವನಿ ಕರೆಗಳು ಮತ್ತು ನಿತ್ಯವೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಇದರೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಹೆಚ್ಚುವರಿ ಪ್ರಯೋಜನಗಳೆಂದರೆ ಅಮೆಜಾನ್‌ ಪ್ರೈಮ್ ಲೈಟ್ ಚಂದಾದಾರಿಕೆಯನ್ನು (Amazon Prime Lite subscription) ನೀಡುತ್ತದೆ. ಅರ್ಹ ಉತ್ಪನ್ನಗಳ ಉಚಿತ ಮತ್ತು ವೇಗದ ವಿತರಣೆ ಮತ್ತು ಪ್ರೈಮ್ ವಿಡಿಯೋಗೆ ಪ್ರವೇಶ ಸೇರಿದಂತೆ ವಿಶೇಷ ಪ್ರೈಮ್ ಪ್ರಯೋಜನಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯೊಂದಿಗೆ, ನೀವು 12 AM ನಿಂದ 6 AM ವರೆಗೆ ಅನಿಯಮಿತ ಡೇಟಾವನ್ನು ಆನಂದಿಸಬಹುದು ಮತ್ತು ವಾರಾಂತ್ಯದಲ್ಲಿ ವಾರದ ದಿನಗಳಲ್ಲಿ ಉಳಿದ ಡೇಟಾವನ್ನು ಬಳಸಿಕೊಳ್ಳಬಹುದು. ಈ ಯೋಜನೆಯು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಿಂಗಳಿಗೆ ಹೆಚ್ಚುವರಿ 2GB ಬ್ಯಾಕಪ್ ಡೇಟಾವನ್ನು ನೀಡುತ್ತದೆ.

ಅಸ್ತಿತ್ವದಲ್ಲಿರುವ ಇತ್ತೀಚಿನ ವಿ ಪ್ರಿಪೇಯ್ಡ್ ಪ್ಲ್ಯಾನ್‌ ಬಗ್ಗೆ ಹೇಳುವುದಾದರೆ 901ರೂ.ಗಳು, 902 ರೂ.ಗಳು ಮತ್ತು 903 ರೂ.ಗಳ ಲಿಸ್ಟ್‌ಗೆ ಈ ಹೊಸ ಪ್ಲ್ಯಾನ್‌ ಸೇರುತ್ತದೆ. 90 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ 3GB ಡೇಟಾ/ದಿನ, 48GB ಹೆಚ್ಚುವರಿ ಡೇಟಾ, ಅನಿಯಮಿತ ಕರೆಗಳು ಮತ್ತು 100 ಎಸ್‌ಎಮ್ಎಸ್ ನೊಂದಿಗೆ 70 ದಿನಗಳವರೆಗೆ ಬರುತ್ತದೆ. ಇದು ಬಳಕೆದಾರರಿಗೆ ಪ್ಯಾಕ್ ಕಡಿತವಿಲ್ಲದೆ ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನಿಯಮಿತ ರಾತ್ರಿ ಡೇಟಾವನ್ನು ಆನಂದಿಸಲು ಮತ್ತು ಪ್ರತಿ ತಿಂಗಳು 2GB ಡೇಟಾವನ್ನು ಬ್ಯಾಕಪ್ ಮಾಡಲು ಅನುಮತಿಸುತ್ತದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ ಒಂದು ವರ್ಷದ ಪ್ರವೇಶವನ್ನು ಪಡೆಯಬಹುದು.

ವೊಡಾಫೋನ್ ಐಡಿಯಾದಿಂದ ಹೊಸ ಪ್ಲ್ಯಾನ್‌ ಘೋಷಣೆ! ನಿತ್ಯವೂ 2GB ಡೇಟಾ

ಮತ್ತೊಂದೆಡೆ 902 ರೂ.ಗಳು ಮತ್ತು 903 ರೂ.ಗಳ ಎರಡೂ ಪ್ರಿಪೇಯ್ಡ್ ಪ್ಲ್ಯಾನ್‌ಗಳು 2GB ಡೇಟಾ/ದಿನ, ಅನಿಯಮಿತ ಕರೆಗಳು ಮತ್ತು 90 ದಿನಗಳ ಮಾನ್ಯತೆಯ ಅವಧಿಗೆ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡಲಿದೆ. ಇದರೊಂದಿಗೆ 902 ರೂ.ಗಳ ಪ್ರಿಪೇಯ್ಡ್ ಯೋಜನೆಯು ಸೋನಿ ಲಿವ್‌ ಮೊಬೈಲ್‌ಗೆ ಉಚಿತ ಪ್ರವೇಶವನ್ನು ನೀಡಲಿದೆ. ಆದರೆ, 903 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಸೋನಿ ಲಿವ್‌ ಬದಲಾಗಿ ನೀವು SUNNXT TV + ಮೊಬೈಲ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು.

ಇನ್ನು ಈಗ ನಿಮ್ಮ ಪ್ರಿಪೇಯ್ಡ್ ಪ್ಲ್ಯಾನ್‌ನೊಂದಿಗೆ ಉಚಿತ ಅಮೆಜಾನ್‌ ಪ್ರೈಮ್‌ ಅನ್ನು ಹುಡುಕುತ್ತಿದ್ದರೆ, ವಿ ಟೆಲಿಕಾಂ ನ ಈ ಹೊಸ 904 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಉತ್ತಮ ಆಯ್ಕೆ ಆಗಿರಲಿದೆ. ಡೇಟಾ, ಕರೆಗಳು ಮತ್ತು ಎಸ್‌ಎಮ್‌ಎಸ್‌ನ ಸಮಗ್ರ ಪ್ಯಾಕೇಜ್ ಇರುವುದರಿಂದ ನೀವು ಇದರಲ್ಲಿ ಉತ್ತಮ ಸೌಲಭ್ಯ ಪಡೆಯುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
Vodafone Idea (Vi) has now announced a plan with more features for less money, vi Telecom customers can also get various benefits from this plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+