ವೊಡಾಫೋನ್‌ನಿಂದ ಮತ್ತೆ ಡಬಲ್ ಡೇಟಾ ಆಫರ್; ಪ್ರತಿದಿನ ಸಿಗುತ್ತೆ 4GB!
ಭಾರತೀಯ ಟೆಲಿಕಾಂ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆಯುತ್ತ ಸಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಟೆಲಿಕಾಂಗಳು ತಮ್ಮ ಗ್ರಾಹಕರಿಗೆ ಭಾರಿ ಡೇಟಾ, ವ್ಯಾಲಿಡಿಟಿ ಕೊಡುಗೆಗಳನ್ನು ಘೋಷಿಸುತ್ತಿವೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಅನುಕೂಲವಾಗಲೆಂದು ವೊಡಾಫೋನ್ ಸಂಸ್ಥೆಯು ಇತ್ತೀಚಿಗಷ್ಟೆ ಡಬಲ್ ಡೇಟಾ ಯೋಜನೆಗಳನ್ನು ಪರಿಚಯಿಸಿತ್ತು. ಇದೀಗ ಮತ್ತೆ ಡಬಲ್ ಧಮಾಕಾ ಪ್ಲ್ಯಾನ್ ಕೊಡುಗೆ ಘೋಷಿಸಿದೆ.

ಹೌದು, ವೊಡಾಫೋನ್ ಇತ್ತೀಚಿಗೆ 14 ಟೆಲಿಕಾಂ ವ್ಯಾಪ್ತಿಗಳಲ್ಲಿ ತನ್ನ ಕೆಲವು ಪ್ರೀಪೇಯ್ಡ್ ಯೋಜನೆಗಳಿಗೆ ಡಬಲ್ ಡೇಟಾ ಆಫರ್ ನೀಡುತ್ತಿತ್ತು. ಈಗ ಮತ್ತೆ ಐದು ಜನಪ್ರಿಯ ಪ್ರೀಪೇಯ್ಡ್ ಪ್ಲ್ಯಾನ್‌ಗಳಿಗೆ ಡಬಲ್ ಡೇಟಾ ಆಫರ್ ಅನ್ನು ಘೋಷಿಸಿ ಚಂದಾದಾರರಿಗೆ ಸಂತಸ ನೀಡಿದೆ. ಈ ಡಬಲ್ ಡೇಟಾ ಯೋಜನೆಯು ಪ್ಯಾನ್ ಇಂಡಿಯಾ ಮಾದರಿಯದ್ದಾಗಿದೆ. ಹೆಚ್ಚುವರಿಯಾಗಿ 2GB ಡೇಟಾ ಪ್ರಯೋಜನೆ ಲಭ್ಯವಾಗಲಿದೆ. ಹಾಗಾದರೆ ಯಾವೆಲ್ಲಾ ಪ್ಲ್ಯಾನ್‌ಗಳಿಗೆ ಡಬಲ್ ಡೇಟಾ ಲಭ್ಯವಾಗಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಐದು ಪ್ಲ್ಯಾನ್‌ಗಳಿಗೆ ಡಬಲ್ ಡೇಟಾ
ವೊಡಾಫೋನಿನ 299ರೂ, 399ರೂ, 449ರೂ, 599ರೂ ಮತ್ತು 699ರೂ ಪ್ರೀಫೇಯ್ಡ್ ಯೋಜನೆಗಳಿಗೆ ಸಂಸ್ಥೆಯು ಡಬಲ್ ಡೇಟಾ ಘೋಷಿಸಿದೆ. ಹೀಗಾಗಿ ಪ್ರಸ್ತುತ ಈ ಪ್ಲ್ಯಾನ್‌ಗಳ ಪ್ರಯೋಜನಗಳ ಜೊತೆಗೆ ಡೇಟಾ ಸೌಲಭ್ಯ ಡಬಲ್ ದೊರೆಯುತ್ತದೆ.

ಕರ್ನಾಟಕದಲ್ಲಿ- ಡಬಲ್ ಡೇಟಾ ಲಭ್ಯತೆ
ವೊಡಾಫೋನ್ ಘೋಷಿಸಿರುವ ಡಬಲ್ ಡೇಟಾ ಯೋಜನೆಯು ಆಂಧ್ರಪ್ರದೇಶ, ಅಸ್ಸಾಂ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಕೋಲ್ಕತಾ, ಮಧ್ಯಪ್ರದೇಶ, ಮುಂಬೈ, ಒಡಿಶಾ, ರಾಜಸ್ಥಾನ, ಯುಪಿ ಪೂರ್ವ ಮತ್ತು ಪಶ್ಚಿಮ ಬಂಗಾಳದಲ್ಲಿ ಲಭ್ಯವಾಗಲಿದೆ. ಕರ್ನಾಟಕದಲ್ಲಿ 299ರೂ, 499ರೂ ಮತ್ತು 699ರೂ ಪ್ರೀಫೇಯ್ಡ್ ಯೋಜನೆಗಳಿಗೆ ಸಂಸ್ಥೆಯು ಡಬಲ್ ಡೇಟಾ ಘೋಷಿಸಿದೆ.

ವೊಡಾಫೋನ್ 299ರೂ. ಪ್ಲ್ಯಾನ್
ವೊಡಾಫೋನಿನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್ 499ರೂ. ಪ್ಲ್ಯಾನ್
ವೊಡಾಫೋನಿನ 499ರೂ. ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್ 699ರೂ. ಪ್ಲ್ಯಾನ್
ವೊಡಾಫೋನಿನ 699ರೂ. ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಆದರೆ ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.


Click it and Unblock the Notifications




