ವೊಡಾಫೋನ್ ಐಡಿಯಾದಿಂದ ಮತ್ತೆ ಭರ್ಜರಿ ಉಚಿತ ಡೇಟಾ ಕೊಡುಗೆ!

|

ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಬಳಕೆದಾರರಿಗೆ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಮತ್ತೆ ನೂತನ ಕೊಡುಗೆಯನ್ನು ನೀಡಿದ್ದು, 1GB ದೈನಂದಿನ ಡೇಟಾವನ್ನು 7 ದಿನಗಳವರೆಗೆ ಉಚಿತವಾಗಿ ನೀಡುತ್ತಿದೆ. ಕೆಲವು ಗ್ರಾಹಕರು ತಾವು ವಾಸಿಸುವ ಪ್ರದೇಶ ಅಥವಾ ಅವರು ಹೊಂದಿರುವ ಪ್ಯಾಕ್ ಅನ್ನು ಅವಲಂಬಿಸಿ ಮಾತ್ರ ಈ ಕೊಡುಗೆ ಲಭ್ಯವಿರಬಹುದು.

ಸ್ವೀಕರಿಸಿದ್ದಾರೆ

ಮಧ್ಯಪ್ರದೇಶ ಮತ್ತು ಛತ್ತೀಸಗಡ್ ವಲಯದಲ್ಲಿ ವಾಸಿಸುತ್ತಿರುವ ಚಂದಾದಾರರು ಈ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆ. ಈ ಪ್ರಸ್ತಾಪವನ್ನು ಇಂದು ಒದಗಿಸಲಾಗಿದೆ, ಅಂದರೆ ಈ ಕೊಡುಗೆಯು ಜೂನ್ 17, 2021, ರಿಂದ ಜೂನ್ 23, 2021 ರವರೆಗೆ ಇರುತ್ತದೆ. ಟೆಲಿಕಾಂ ತನ್ನ ಮೊಬೈಲ್ ನೆಟ್‌ವರ್ಕ್ ಸೇವೆಗಳತ್ತ ಬಳಕೆದಾರರನ್ನು ಆಕರ್ಷಿಸಲು ಇಂತಹ ಕೊಡುಗೆಗಳನ್ನು ಈ ಹಿಂದೆಯು ಘೋಷಿಸಿದೆ.

ವೊಡಾಫೋನ್-ಐಡಿಯಾ 699ರೂ. ಯೋಜನೆ

ವೊಡಾಫೋನ್-ಐಡಿಯಾ 699ರೂ. ಯೋಜನೆ

ವಿ ಟೆಲಿಕಾಂನ 699ರೂ. ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ವಿ ಟೆಲಿಕಾಂನ ಇತರೆ ಡಬಲ್‌ ಡೇಟಾ ಯೋಜನೆಗಳ ಬಗ್ಗೆ ಮುಂದೆ ಓದಿರಿ.

ವೊಡಾಫೋನ್-ಐಡಿಯಾ 499ರೂ. ಯೋಜನೆ

ವೊಡಾಫೋನ್-ಐಡಿಯಾ 499ರೂ. ಯೋಜನೆ

ವಿ ಟೆಲಿಕಾಂನ 499ರೂ. ಯೋಜನೆಯಲ್ಲಿ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವೊಡಾಫೋನ್-ಐಡಿಯಾ 299ರೂ. ಯೋಜನೆ

ವೊಡಾಫೋನ್-ಐಡಿಯಾ 299ರೂ. ಯೋಜನೆ

ವಿ ಟೆಲಿಕಾಂನ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಇತರೆ ಆಕರ್ಷಕ ಯೋಜನೆಗಳು

ಇತರೆ ಆಕರ್ಷಕ ಯೋಜನೆಗಳು

ವಿ ಟೆಲಿಕಾಂನ 401ರೂ, 601ರೂ ಮತ್ತು 801ರೂ ಬೆಲೆಯ ಯೋಜನೆಗಳನ್ನು ಹೊಂದಿದ್ದು, ಈ ಯೋಜನೆಗಳು ಆಕರ್ಷಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನಗಳನ್ನು ಪಡೆದಿವೆ. ಈ ಮೂರು ಯೋಜನೆಗಳಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ಲಭ್ಯವಿದ್ದು, ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಸದಸ್ಯತ್ವ ಸಹ ಲಭ್ಯವಾಗಲಿದೆ.

Most Read Articles
Best Mobiles in India

English summary
Vodafone Idea (Vi), the third-largest telecom operator in the country, is offering users 1GB of daily data for free for 7 days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X