Home
ಸುದ್ದಿಜಾಲ

ವೊಡಾಫೋನ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಈ ಆರು ಪ್ಲ್ಯಾನ್‌ಗಳಲ್ಲಿ 40ರೂ. ಡಿಸ್ಕೌಂಟ್‌!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿರುವ ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ಈಗ ಮತ್ತೊಂದು ಅಚ್ಚರಿ ಹೊರಹಾಕಿದೆ. ಇದೀಗ ವಿ ಟೆಲಿಕಾಂ ತನ್ನ ಆರು ಜನಪ್ರಿಯ ಪ್ರೀಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಈಗ ಭರ್ಜರಿ ಇಳಿಕೆ ಘೋಷಿಸಿದೆ. ಇಳಿಕೆ ಕಂಡ ಯೋಜನೆಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಪಡೆದಿವೆ.

ಯೋಜನೆಗಳ

ಹೌದು, ವಿ ಟೆಲಿಕಾಂ ತನ್ನ 449ರೂ, 699ರೂ, 399ರೂ, 801ರೂ, 401ರೂ ಮತ್ತು 1,197ರೂ. ಪ್ರೀಪೇಯ್ಡ್‌ ಯೋಜನೆಗಳ ದರದಲ್ಲಿ 40ರೂ.ಗಳ ರಿಯಾಯಿತಿ ಕೊಡುಗೆ ನೀಡದೆ. ಆದರೆ ಈ ವಿಶೇಷ ಡಿಸ್ಕೌಂಟ್‌ ಕೊಡುಗೆಯು ಎಲ್ಲ ಬಳಕೆದಾರರಿಗೆ ಲಭ್ಯವಿರುವುದಿಲ್ಲ ಎನ್ನಲಾಗಿದೆ. ಬಳಕೆದಾರರ ರೀಚಾರ್ಜ್‌ ಹಿಸ್ಟರಿ ಆಧಾರದ ಮೇಲೆ ಕೆಲವು ಬಳಕೆದಾರರಿಗೆ ಈ ಆರು ಯೋಜನೆಗಳಲ್ಲಿ 40ರೂ. ರಿಯಾಯಿತಿ ಸಿಗಲಿದೆ ಎಂದು ಹೇಳಲಾಗಿದೆ. ಹಾಗಾದರೇ ಈ ವಿ ಟೆಲಿಕಾಂನ ಈ ಆರು ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಿ ಟೆಲಿಕಾಂ 399ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 399ರೂ. ಪ್ರೀಪೇಯ್ಡ್‌ ಯೋಜನೆ

ವೊಡಾಫೋನಿನ 399ರೂ. ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ.

ವಿ ಟೆಲಿಕಾಂ 499ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 499ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂನ 401ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 401ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ. ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ.

ವಿ ಟೆಲಿಕಾಂನ 801ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ 801ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂನ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ. ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ.

ವೊಡಾಫೋನ್-ಐಡಿಯಾ (ವಿ) 1197ರೂ. ಪ್ಲ್ಯಾನ್

ವೊಡಾಫೋನ್-ಐಡಿಯಾ (ವಿ) 1197ರೂ. ಪ್ಲ್ಯಾನ್

ವೊಡಾಫೋನಿನ 1197ರೂ. ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 180 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಸಿಗಲಿದೆ.

Best Mobiles in India

English summary
These plans are - Rs 449, Rs 699, Rs 399, Rs 801, Rs 401, Rs 1,197. All of these plans are available at a Rs 40 discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+