Subscribe to Gizbot

ಜಿಯೋ ಮುಗಿಸಲು ಒಂದಾದ ದೈತ್ಯ ಕಂಪನಿಗಳು: ಶೀಘ್ರವೇ ದೊಡ್ಡ ಅತೀ ಟೆಲಿಕಾಂ ಕಂಪನಿ ಲಾಂಚ್..!

Posted By:

ದೇಶಿಯ ಟೆಲಿಕಾಂ ಮಾರುಕಟ್ಟೆ ಬದಾಲವಣೆಯ ಹಾದಿಯನ್ನು ಹಿಡಿದಿದ್ದು, ಜಿಯೋ ಆರಂಭದ ನಂತರದಲ್ಲ ತನ್ನ ಚಹರೆಯನ್ನು ವಿವಿಧ ಹಂತದಲ್ಲಿ ಬದಲಾಯಿಸಿಕೊಂಡಿದೆ. ಗ್ರಾಹಕ ಜೇಬಿಗೆ ಕನ್ನ ಹಾಕಿ ದುಡ್ಡು ಮಾಡುತ್ತಿದ್ದ ದೈತ್ಯ ಟೆಲಿಕಾಂ ಕಂಪನಿಗಳು ನಷ್ಟದ ಹಾದಿ ಹಿಡಿದರೆ ಇನ್ನೊಂದು ಕಡೆ ಜಿಯೋ ಸ್ಪರ್ಧೆಗೆ ಎದುರು ಉತ್ತರ ನೀಡಲಾಗದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ ಎನ್ನಲಾಗದೆ.

ಶೀಘ್ರವೇ ದೊಡ್ಡ ಅತೀ ಟೆಲಿಕಾಂ ಕಂಪನಿ ಲಾಂಚ್..!

ಈ ಹಿನ್ನಲೆಯಲ್ಲಿ ಕೆಲವು ದೈತ್ಯ ಟೆಲಿಕಾಂ ಕಂಪನಿಗಳು ಮುಚ್ಚುವ ಹಂತವನ್ನು ತಲುಪಿದ್ದರೇ ಇನ್ನು ಕೆಲವು ವಿಲೀನಗೊಳ್ಳಲು ಮುಂದಾಗಿದೆ. ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ವಿಸ್ತಾರವಾಗಿ ನೆಟ್‌ವರ್ಕ್ ಜಾಲ ಮತ್ತು ಬಳಕೆದಾರರನ್ನು ಹೊಂದಿರುವ ಐಡಿಯಾ ಮತ್ತು ವೊಡಾಫೋನ್‌ಗಳು ವಿಲೀನವಾಗಲಿದೆ ಎನ್ನಲಾಗಿದೆ. ಈ ಎರಡು ದೈತ್ಯ ಕಂಪನಿಗಳ ವಿಲೀನಕ್ಕೆ ವೇದಿಕೆಯೂ ಸೃಷ್ಠಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಹೆಸರು:

ಹೊಸ ಹೆಸರು:

ಐಡಿಯಾ ಮತ್ತು ವೊಡಾಫೋನ್ ಒಂದಾಗುವ ಮೂಲಕ ದೇಶದ ಅತೀ ದೊಡ್ಡ ಟೆಲಿಕಾಂ ಕಂಪನಿಯಾಗಲಿದ್ದು, ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಎರಡು ಕಂಪನಿಗಳು ನೂತನ ಹೆಸರಿನ ಹುಡುಕಾಟದಲ್ಲಿದೆ. ಈ ಹೊಸ ಹೆಸರಿನ ಕಂಪನಿಯೂ ದೇಶದ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತೀ ದೊಡ್ಡ ಟೆಲಿಕಾಂ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ.

ನಷ್ಟದಲ್ಲಿ ವೊಡಾಫೋನ್:

ನಷ್ಟದಲ್ಲಿ ವೊಡಾಫೋನ್:

ದೇಶದಲ್ಲಿ ಜಿಯೋ ಆರಂಭದವರೆಗೂ ಉತ್ತಮ ಸೇವೆಯನ್ನು ನೀಡುವುದರರೊಂದಿಗೆ ಹೆಚ್ಚಿನ ಹೊಸ ಗ್ರಾಹಕರನ್ನು ಮತ್ತು ಪೋರ್ಟಬಲಿಟಿ ಮೂಲಕ ಇನಷ್ಟು ಗ್ರಾಹಕರನ್ನು ಸೆಳೆಯಲು ಶಕ್ತವಾಗಿದ್ದ ವೊಡಾಫೋನ್ ದರ ಸಮರದಲ್ಲಿ ಹೋರಾಡಲು ಆಗದೆ ಬಳಕೆದಾರರನ್ನು ಒಂದೇ ಸಮನೆ ಕಳೆದುಕೊಂಡು ನಷ್ಟದ ಹಾದಿ ಹಿಡಿದಿದೆ.

ಐಡಿಯಾದ ಕಥೆಯೂ ಹಾಗೆ ಇದೆ:

ಐಡಿಯಾದ ಕಥೆಯೂ ಹಾಗೆ ಇದೆ:

ಕಳೆದ 5 ತ್ರೈಮಾಸಿಕ ಗಳಿಂದ ಐಡಿಯಾ ನಷ್ಟದಲ್ಲಿದ್ದು, ದಿನದಿಂದ ದಿನಕ್ಕೆ ನಷ್ಟದ ಪ್ರಮಾಣವು ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ನಷ್ಟವನ್ನು ಸರಿದೂಗಿಸಿಕೊಂಡು ಹೆಚ್ಚಿನ ಜನರನ್ನು ಆಕರ್ಷಿಸುವ ಸಲುವಾಗಿ ವೊಡಾಫೋನ್‌ನೊಂದಿಗೆ ಕೈ ಜೋಡಿಸುತ್ತಿದೆ.

ಈಗಾಗಲೇ ಒಪ್ಪಂದ ಮುಗಿದಿದೆ:

ಈಗಾಗಲೇ ಒಪ್ಪಂದ ಮುಗಿದಿದೆ:

ಐಡಿಯಾ ಮತ್ತು ವೊಡಾಫೋನ್‌ ಕಂಪನಿಗಳು ವಿಲೀನವಾಗಲು ಒಪ್ಪಂದಗಳು ಮುಗಿದ್ದು, ಶೀಘ್ರವೇ ಬಹಿರಂಗವಾಗಿ ಘೋಷಿಸಲಿದ್ದು ಮತ್ತು ಹೊಸ ಕಂಪನಿಯ ಹೆಸರನ್ನು ತಿಳಿಸಲಿವೆ ಎನ್ನಲಾಗಿದೆ.

ಜಿಯೋಗೆ ಉತ್ತರ ನೀಡಲು:

ಜಿಯೋಗೆ ಉತ್ತರ ನೀಡಲು:

ಮಾರುಕಟ್ಟೆಯಲ್ಲಿ ಜಿಯೋವನ್ನು ಮಣ್ಣಿಸಲು ತೊಡೆ ತಟ್ಟಿರುವ ಈ ಎರಡು ಕಂಪನಿಗಳು ಜಿಯೋಗೆ ಉತ್ತರವನ್ನು ನೀಡುವ ಸಲುವಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತರಲಿವೆ ಎನ್ನಲಾಗಿದೆ. ಇದಲ್ಲದೇ ಜಿಯೋ ಮೀರಿಸುವ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ.

ಜಿಯೋಗೆ ಹೊಡೆತ ನೀಡುತ್ತಾ ವೊಡಾಫೋನ್ ಈ ಹೊಸ ಆಫರ್..!

ಜಿಯೋಗೆ ಹೊಡೆತ ನೀಡುತ್ತಾ ವೊಡಾಫೋನ್ ಈ ಹೊಸ ಆಫರ್..!

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೊ ಅಬ್ಬರ ಜೋರಾಗಿದ್ದು, ಇದೇ ಸಂದರ್ಭದಲ್ಲಿ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುವ ಮೂಲಕ ಮತ್ತಷ್ಟು ಜನರನ್ನು ಸೆಳೆಯಲು ಜಿಯೋ ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋಗೆ ಕೌಂಟರ್ ನೀಡುವ ಸಲುವಾಗಿ ವೊಡಾಫೋನ್ ತನ್ನದೇ ನೂತನ ಆಫರ್ ಗಳನ್ನು ಲಾಂಚ್ ಮಾಡದೆ. ಈ ಮೂಲಕ ಜಿಯೋಗೆ ನೇರ ಕೌಂಟರ್ ನೀಡಲು ಮುಂದಾಗಿದೆ.

ಎರಡು ಹೊಸ ಆಫರ್ ಗಳನ್ನು ವೊಡಾಫೋನ್ ಲಾಂಚ್ ಮಾಡಿದ್ದು, ಈ ಮೂಲಕ ಹೆಚ್ಚಿನ ಜನರನ್ನು ಸೆಳೆಯುವ ಕ್ರಮಕ್ಕೆ ಮುಂದಾಗಿದೆ. ಈ ಎರಡು ಆಫರ್ ಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೇರಿದಂತೆ ಹೆಚ್ಚಿನ ಲಾಭಗಳನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ರೂ. 458 ಪ್ಲಾನ್:

ರೂ. 458 ಪ್ಲಾನ್:

ವೊಡಾಫೋನ್ ರೂ.458 ಪ್ಲಾನ್ ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ 70 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಇದರೊಂದಿಗೆ 70GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಇದರಲ್ಲಿ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ರೂ. 509 ಆಫರ್:

ರೂ. 509 ಆಫರ್:

ಇದಲ್ಲದೇ ಹೆಚ್ಚಿನ ಡೇಟಾ ಮತ್ತು ಕರೆಯ ಆಫರ್ ಬೇಕು ಎನ್ನುವವರಿಗಾಗಿ ವೊಡಾಫೋನ್ ಈ ಆಫರ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಪ್ರತಿ ನಿತ್ಯ ಒಂದು GB ಡೇಟಾದಂತೆ 91GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದು. ಅಲ್ಲದೇ ಇದರಲ್ಲಿಯೂ ಗ್ರಾಹಕರು ಅನಿಯಮಿತ.

ಜಿಯೋ ಕೌಂಟರ್:

ಜಿಯೋ ಕೌಂಟರ್:

ಜಿಯೋ ಸಹ ತನ್ನ ಬಳಕೆದಾರರಿಗೆ ಹೆಚ್ಚಿನ ವ್ಯಾಲಿಡಿಟಿಯೊಂದಿಗೆ ಡೇಟಾವನ್ನು ನೀಡಲು ಮುಂದಾಗಿತ್ತು. ವೊಡಾಫೋನ್ ಸಹ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದ್ದು, ತನ್ನ ಬಳಕೆದಾರರು ಜಿಯೋಗೆ ವಲಸೆ ಹೋಗುವುದುದನ್ನು ತಡೆಯಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಜಿಯೋಗಿಂತಲೂ ಬೆಸ್ಟ್ ಆಫರ್ ಕೊಟ್ಟ BSNL: ರಿಚಾರ್ಜ್ ಮೇಲೆ 50% ಕ್ಯಾಷ್ ಬ್ಯಾಕ್..!

English summary
Vodafone, Idea may have a new brand name after merger. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot