Just In
Don't Miss
- Sports
IND Vs NZ 2nd ODI: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ಉಮ್ರಾನ್ ಮಲಿಕ್ಗೆ ಸಿಗದ ಅವಕಾಶ
- Finance
LIC Scheme: ಪಿಎಂವಿವಿವೈ ಅಡಿಯಲ್ಲಿ ವಿವಾಹಿತ ಜೋಡಿಗೆ 18,500 ರೂ ಪಿಂಚಣಿ, ಅರ್ಹತೆ ತಿಳಿಯಿರಿ
- News
ಫೆಬ್ರವರಿ 17 ರಂದು ರಾಜ್ಯ ಬಜೆಟ್; ಜನವರಿ 23ರಿಂದ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ
- Movies
'ಕಾಂತಾರ 2' ಶೂಟಿಂಗ್ ಆರಂಭ ಹಾಗೂ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ವಿಜಯ್; ಮುಂದುವರಿದ ಕಥೆ ಅಲ್ಲ!
- Automobiles
ಕಡಿಮೆ ಬೆಲೆಯ ಹೆಚ್ಚು ರೇಂಜ್ ನೀಡುವ 'ಸಿಟ್ರನ್ eC3' ರಿವ್ಯೂ
- Lifestyle
Horoscope Today 21 Jan 2023: ಶನಿವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೊಡಾಫೋನ್ ಗ್ರಾಹಕರಿಗೆ ಲಭ್ಯವಾಗಲಿದೆ ಹೆಚ್ಚುವರಿ ಉಚಿತ ಡೇಟಾ!
ದೇಶಿಯ ಟೆಲಿಕಾಂ ಸಂಸ್ಥೆಯು ಸದ್ಯ ಪೈಪೋಟಿಯ ಕಣವಾಗಿದ್ದು, ಜಿಯೋ, ಏರ್‌ಟೆಲ್ ಸೇರಿದಂತೆ ವೊಡಾಫೋನ್ ಕಂಪನಿಯು ಸಹ ಅತ್ಯುತ್ತಮ ಆಫರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪಣತೊಟ್ಟಿವೆ. ಈ ದಿಸೆಯಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆಯು ತನ್ನ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಆಯ್ದ ರೀಚಾರ್ಜ್ ಪ್ಲ್ಯಾನ್‌ಗಳಗೆ ಹೆಚ್ಚುವರಿಯಾಗಿ ಉಚಿತ ಡೇಟಾವನ್ನು ಪ್ರಯೋಜನವನ್ನು ನೀಡಲು ಮುಂದಾಗಿದೆ.

ಹೌದು, ವೊಡಾಫೋನ್ ಐಡಿಯಾ ಸಂಸ್ಥೆಯು ಇದೀಗ ತನ್ನ ಜನಪ್ರಿಯ 399ರೂ ಮತ್ತು 499ರೂ ರೀಚಾರ್ಜ್ ಪ್ಲ್ಯಾನ್‌ಗಳಗೆ ಹೆಚ್ಚುವರಿಯಾಗಿ ಪ್ರತಿದಿನ 400MB ಉಚಿತ ಡೇಟಾವನ್ನು ನೀಡಲು ಆರಂಭಿಸಿದೆ. ಗ್ರಾಹಕರಿಗೆ ಇನ್ಮುಂದೆ ಪ್ರತಿದಿನ 1.4GB ಮತ್ತು 2.4GB ಉಚಿತ ಡೇಟಾ ದೊರೆಯಲಿದೆ. ಗ್ರಾಹಕರು ಮೈ ವೊಡಾಫೋನ್ ಆಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ವೊಡಾಫೋನ್ ಹೆಚ್ಚುವರಿ ಉಚಿತ ಡೇಟಾದ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಹಳೆಯ ಪ್ಲ್ಯಾನ್ ಪರಿಷ್ಕರಣೆ
ವೊಡಾಫೋನ್ ಸಂಸ್ಥೆಯ 399ರೂ ಮತ್ತು 499ರೂ.ಗಳ ಜನಪ್ರಿಯ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಅನಿಯಮಿತ ಉಚಿತ ಕರೆಗಳೊಂದಿಗೆ ಪ್ರತಿದಿನ 1GB ಉಚಿತ ಡೇಟಾ ಲಭ್ಯವಾಗುತ್ತಿತ್ತು. ಆದ್ರೆ ಈಗ ಈ ಪ್ಲ್ಯಾನ್ ಪರಿಷ್ಕರಣೆ ಮಾಡಿರುವುದರಿಂದ ಪ್ರತಿದಿನ 1.4GB ಉಚಿತ ಡೇಟಾವು ಗ್ರಾಹಕರಿಗೆ ಲಭ್ಯವಾಗಲಿದೆ. ಉಳಿದಂತೆ ಉಚಿತ ಕರೆ ಮತ್ತು ಎಸ್‌ಎಮ್‌ಎಸ್ ಸೇವೆಗಳು ಸಹ ಇರಲಿವೆ.

139ರೂ. ಪ್ಲ್ಯಾನಿನಲ್ಲೂ ಚೇಂಜ್
ವೊಡಾಫೋನ್ ಕಂಪನಿಯ 139ರೂ. ಪ್ಲ್ಯಾನ್‌ನಲ್ಲಿಯೂ ಸಹ 2GB ಉಚಿತ ಡೇಟಾವನ್ನು ಹೆಚ್ಚುವರಿಯಾಗಿ ಸೇರಿಸಿದೆ. 28ದಿನಗಳ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲ್ಯಾನಿನಲ್ಲಿ ಈ ಮೊದಲು ವ್ಯಾಲಿಡಿಟಿ ಅವಧಿಯಲ್ಲಿ 3GB ಡೇಟಾವನ್ನು ನೀಡಲಾಗುತ್ತಿತ್ತು ಆದ್ರೆ ಈಗ ಹೆಚ್ಚುವರಿಯಾಗಿ 2GB ಉಚಿತ ಡೇಟಾ ಸೇರಿಸಿದ್ದು, ಗ್ರಾಹಕರಿಗೆ ಇನ್ಮುಂದೆ 5GB ಡೇಟಾ ದೊರೆಯಲಿದೆ.

ಇತರೆ ರೀಚಾರ್ಜ್ ಪ್ಲ್ಯಾನ್‌ಗಳು
ವೊಡಾಫೋನ್ ಸಂಸ್ಥೆಯು ಕಡಿಮೆ ಬೆಲೆಯ 129ರೂ, 139ರೂ ಮತ್ತು 149ರೂ.ಗಳ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದ್ದು, ಇವು 28ದಿನಗಳ ವ್ಯಾಲಿಡಿಟಿ ಹೊಂದಿವೆ. ಈ ಪ್ಲ್ಯಾನ್‌ಗಳು ಸಹ ಗ್ರಾಹಕರಿಗೆ ಉಚಿತ ಕರೆಗಳು, ಎಸ್‌ಎಮ್‌ಎಸ್ ಮತ್ತು ಉಚಿತ ಡೇಟಾ ಪ್ರಯೋಜನಗಳನ್ನು ನೀಡಲಿದೆ. ಆದರೆ ಕಡಿಮೆ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ರೀಚಾರ್ಜ್ ಪ್ಲ್ಯಾನ್‌ಗಳಿ ಬೆಸ್ಟ್ ಎನ್ನಬಹುದಾಗಿದೆ.

ಮೊಬೈಲ್‌ನಲ್ಲಿ ರೀಚಾರ್ಜ್ ಮಾಡಿ
ವೊಡಾಫೋನ್ ಸಂಸ್ಥೆಯು ಹೆಚ್ಚುವರಿ ಡೇಟಾಗಳ ಪ್ರಯೋಜನವನ್ನು ಪಡೆಯಲು ಗ್ರಾಹಕರು ಸ್ಮಾರ್ಟ್‌ಫೋನ್ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳುವುದು ಬೆಟರ್. ಹಾಗೆಯೇ ಕಂಪನಿಯ ಮೈ ವೊಡಾಫೋನ್ ಆಪ್ ಮೂಲಕ ರೀಚಾರ್ಜ್ ಮಾಡಿಕೊಂಡರೇ ಹೆಚ್ಚಿನ ರಿಯಾಯಿತಿಗಳು ದೊರೆಯುವ ಅವಕಾಶಗಳು ಲಭ್ಯವಾಗಲಿವೆ.
ಪ್ರತಿಯೊಬ್ಬರಿಗೂ ಈಗ ಆಫರ್ ಖಚಿತ
ವೊಡಾಫೋನ್ ಸಂಸ್ಥೆಯು ತನ್ನ ಎಲ್ಲ ಪ್ರೀಪೇಡ್ ಗ್ರಾಹಕರಿಗೆ ಅತ್ಯುತ್ತಮ ಆಫರ್ ಪರಿಚಯಿಸಿದೆ. ಅಬ್ ಸಬ್ಕಾ ಟೈಮ್ ಆಗಯಾ (Ab Sabka Time Aa Gaya) ಹೆಸರಿನಲ್ಲಿ ಈ ಕೊಡುಗೆ ನೀಡಿದ್ದು, ರೀಚಾರ್ಜ್ ಮಾಡಿಸಿಕೊಳ್ಳುವ ಪ್ರತಿಯೊಬ್ಬರಿಗೂ ಉಚಿತ ಕರೆ, ಕ್ಯಾಶ್‌ಬ್ಯಾಕ್, ಹೆಚ್ಚುವರಿ ಡೇಟಾ, ಕಾಲರ್ ಟ್ಯೂನ್, ಇವುಗಳಲ್ಲಿ ಒಂದಲ್ಲಾ ಒಂದು ಖಚಿತ ರಿಯಾಯಿತಿ ದೊರೆಯಲಿದೆ. ಈ ಕೊಡುಗೆಯು ಸೆಪ್ಟೆಂಬರ ಮೊದಲ ವಾರದೊರೆಗೂ ಲಭ್ಯವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470