ಎರಡು ಪ್ರಿಪೇಯ್ಡ್ ಪ್ಲ್ಯಾನ್ ಪರಿಷ್ಕರಿಸಿದ ವಿ ಟೆಲಿಕಾಂ; ಗ್ರಾಹಕರಿಗೆ ಅಧಿಕ ಲಾಭ!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ವೊಡಾಫೋನ್ ಐಡಿಯಾ ಇತ್ತೀಚೆಗೆ ತನ್ನ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಹಲವು ಬದಲಾವಣೆ ಮಾಡಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಈಗ ಎರಡು ಪ್ರಮುಖ ಜನಪ್ರಿಯ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದ್ದು, ಈ ಮೂಲಕ ಗ್ರಾಹಕರು ಹಲವು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೌದು, ವೊಡಾಫೋನ್ ಐಡಿಯಾ ತನ್ನ ಎರಡು ಪ್ರಮುಖ ರೀಚಾರ್ಜ್ ಪ್ಲ್ಯಾನ್‌ಗಳಾದ 195 ರೂ. ಹಾಗೂ 319 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ಬದಲಾವಣೆ ತಂದಿದ್ದು, ಈ ಎರಡೂ ಪ್ಲ್ಯಾನ್‌ಗಳನ್ನು ವೊಡಾಫೋನ್ ಐಡಿಯಾ ಮೇ 2022 ರಂದು ಘೋಷಣೆ ಮಾಡಿತ್ತು. ಇದಾಗಿ ಒಂದು ವರ್ಷದ ಒಳಗೆ ಈ ಪ್ಲ್ಯಾನ್‌ಗಳನ್ನು ಪರಿಷ್ಕರಿಸಲಾಗಿದೆ. ಹಾಗಿದ್ರೆ, ಈ ಪರಿಷ್ಕರಿಸಿದ ಪ್ಲ್ಯಾನ್‌ಗಳಿಂದ ಏನೆಲ್ಲಾ ಲಾಭ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ.

ವೊಡಾಫೋನ್ ಐಡಿಯಾ 195 ರೂ. ಪ್ಲ್ಯಾನ್
ಪರಿಷ್ಕರಿಸಿದ ಪ್ಲ್ಯಾನ್‌ಗಳಲ್ಲಿ ಒಂದಾದ 195 ರೂ. ಪ್ಲ್ಯಾನ್ ಮೂಲಕ ಇನ್ಮುಂದೆ ಗ್ರಾಹಕರು 3GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಹಾಗೂ 300 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ವಿ ಮೂವಿಸ್& ಟಿವಿ ಅನ್ನು ಹೆಚ್ಚುವರಿ ಪ್ರಯೋಜನವಾಗಿ ನೀಡಲಾಗುತ್ತದೆ. ಈ ಪ್ಲ್ಯಾನ್ ಒಂದು ತಿಂಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ 195 ರೂ. ಗಳ ಇದೇ ಪ್ಲ್ಯಾನ್‌ನಲ್ಲಿ ಈ ಹಿಂದೆ 2GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಮತ್ತು 300 ಎಸ್‌ಎಮ್‌ಎಸ್ ಸೌಲಭ್ಯವನ್ನು ನೀಡಲಾಗುತ್ತಿತ್ತು. ಇದು 31 ದಿನಗಳ ಮಾನ್ಯತೆಯನ್ನು ಹೊಂದಿತ್ತು.
ವೊಡಾಫೋನ್ ಐಡಿಯಾ 319 ರೂ. ಗಳ ಪ್ಲ್ಯಾನ್
ವೊಡಾಫೋನ್ ಐಡಿಯಾದ 319 ರೂ. ಗಳ ಪ್ಲ್ಯಾನ್ ನಲ್ಲಿ ಗ್ರಾಹಕರು ಇನ್ಮುಂದೆ 2GB ದೈನಂದಿನ ಡೇಟಾದೊಂದಿಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಬಿಂಜ್ ಆಲ್ ನೈಟ್, ವೀಕೆಂಡ್ ಡಾಟಾ ರೋಲ್‌ಓವರ್, ವಿ ಮೂವಿಸ್ ಹಾಗೂ ಟಿವಿ ಕ್ಲಾಸಿಕ್, ಡಾಟಾ ಡಿಲೈಟ್ಸ್ ಸೇರಿದಂತೆ ಇನ್ನಿತರೆ ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದು 31 ದಿನಗಳ ಮಾನ್ಯತೆಯನ್ನು ಹೊಂದಿದೆ.

ಇದರಲ್ಲಿ ಹಳೆಯ ಪ್ಲ್ಯಾನ್‌ಗೂ ಪರಿಷ್ಕರಿಸಿದ ಪ್ಲ್ಯಾನ್‌ಗೂ ಇರುವ ವ್ಯತ್ಯಾಸ ಎಂದರೆ ಮಾನ್ಯತೆಯ ದಿನಗಳು. ಹಳೆಯ ಪ್ಲ್ಯಾನ್ ಒಂದು ತಿಂಗಳ ಮಾನ್ಯತೆಯನ್ನು ಮಾತ್ರ ಹೊಂದಿತ್ತು. ಆದರೆ, ಪರಿಷ್ಕರಿಸಿದ ಪ್ಲ್ಯಾನ್ ಬರೋಬ್ಬರಿ 31 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಮೂಲಕ ಹೆಚ್ಚಿನ ದಿನದ ಬಳಕೆಯ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
296 ರೂ. ಗಳ ಹೊಸ ಪ್ಲ್ಯಾನ್
ಇದರೊಂದಿಗೆ ವೊಡಾಫೋನ್ ಐಡಿಯಾ ಹೊಸ 296 ರೂ. ಗಳ ಪ್ಲ್ಯಾನ್ ಬಗ್ಗೆಯೂ ಘೋಷಣೆ ಮಾಡಿದ್ದು, ಇದು ಹಲವು ಗ್ರಾಹಕರಿಗೆ ಉಪಯೋಗಆಗಲಿದೆ. ಅಂದರೆ ಈ ವೊಡಾಫೋನ್ ಐಡಿಯಾದ 296 ರೂ. ಗಳ ಪ್ಲ್ಯಾನ್ 30 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, 25GB ಯ ಬೃಹತ್ ಡೇಟಾ, ಅನಿಯಮಿತ ವಾಯ್ಸ್ ಕಾಲ್ ಹಾಗೂ ಪ್ರತಿ ದಿನ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇದೇ ದರದ ಪ್ಲ್ಯಾನ್ ಅನ್ನು ಈಗಾಗಲೇ ಏರ್‌ಟೆಲ್ ಹಾಗೂ ಜಿಯೋ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಇವೆರಡಕ್ಕೂ ಪೈಪೋಟಿ ನೀಡಲು ಮುಂದಾಗಿರುವ ವೊಡಾಪೋನ್ ಐಡಿಯಾದ 296 ರೂ. ಗಳ ಪ್ಲ್ಯಾನ್‌ನಲ್ಲಿ ಕೇವಲ ವಿ ಮೂವಿಸ್& ಟಿವಿ ಯ ಒಂದೇ ಒಂದು ಸೌಲಭ್ಯ ಇದ್ದರೆ, ಜಿಯೋ ಹಾಗೂ ಏರ್‌ಟೆಲ್‌ನಲ್ಲಿ ನಾಲ್ಕು ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಗ್ರಾಹಕರಿಗೆ ನೆಚ್ಚಿನ ರೀಚಾರ್ಜ್ ಪ್ಲ್ಯಾನ್‌ಆಗಿದೆ.


Click it and Unblock the Notifications








