ವೊಡಾಫೋನ್ ಐಡಿಯಾದಿಂದ ಕ್ರೆಡಿಟ್ ಕಾರ್ಡ್ ಜೊತೆಗೆ ಶೇ.50 ಕ್ಯಾಶ್‌ಬ್ಯಾಕ್ ಆಫರ್!!

|

ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಇಂಡಿಯಾ ವಿಲೀನದ ನಂತರ, ಹೊಸ ಟೆಲಿಕಾಂ ಆಪರೇಟರ್ಗಳೊಂದಿಗೆ ಸ್ಪರ್ಧಿಸಲು ವೊಡಾಫೋನ್ ಐಡಿಯಾ ಆಕ್ರಮಣಕಾರಿ ಆಫರ್ ಒಂದನ್ನು ಪ್ರಕಟಿಸಿದೆ. ಆದರೆ, ಈ ಆಫರ್ ಅನ್ನು ನೀಡುವ ಮುನ್ನ ವೊಡಾಪೋನ್ ಐಡಿಯಾ ಕಂಪೆನಿ ಮತ್ತೊಂದು ಬಿಗ್‌ಪ್ಲಾನ್ ಮಾಡಿಕೊಂಡಿದ್ದು, ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಸಹ ಒದಗಿಸಲಿದೆ.

ಹೌದು, ಇಂತಹದೊಂದು ಹೊಸ ಯೋಜನೆಯನ್ನು ವೊಡಾಪೋನ್ ಐಡಿಯಾ ಕಂಪೆನಿ ತಂದಿದ್ದು, ವೊಡಾಫೋನ್ ಅಥವಾ ಐಡಿಯಾ ಅಪ್ಲಿಕೇಶನ್ನಿಂದ ಹೊಸ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಡೆಯಬಹುದಾಗಿದೆ. ಈ ಆಪ್‌ಗಳ ಮೂಲಕ ಅರ್ಜಿ ಸಲ್ಲಿಸಿ ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ, ಆ ಕ್ರೆಡಿಟ್ ಕಾರ್ಡ್ ಮೇಲೆ ಶೇ. 50 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಅನ್ನು ಕಂಪೆನಿ ಘೋಷಿಸಿದೆ.

ವೊಡಾಫೋನ್ ಐಡಿಯಾದಿಂದ ಕ್ರೆಡಿಟ್ ಕಾರ್ಡ್ ಜೊತೆಗೆ ಶೇ.50 ಕ್ಯಾಶ್‌ಬ್ಯಾಕ್ ಆಫರ್!!

ವೊಡಾಪೋನ್ ಐಡಿಯಾ ಪ್ರಕಟಿಸಿರುವ ಹೊಸ ಪ್ರಸ್ತಾವನೆಯ ಅಡಿಯಲ್ಲಿ, ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಡೆದುಕೊಂಡವರಿಗೆ ಮಾಸಿಕ ಬಿಲ್‌ಗಳಲ್ಲಿ 50 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕ್ರೆಡಿಟ್ ಕಾರ್ಡ್ ಮೂಲಕ ಒಂದು ವರ್ಷದಲ್ಲಿ 2,400 ರೂ. ಹಾಗೂ ಪ್ರತಿ ತಿಂಗಳು 200 ರೂ.ಗಳಷ್ಟು ಕ್ಯಾಶ್ ಬ್ಯಾಕ್ ಹಣವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಒಮ್ಮೆ ನೀವು ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆದರೆ, ನೀವು ಆಫರ್ ಅರ್ಹತೆ ಪಡೆದುಕೊಳ್ಳಲು 60 ದಿನಗಳಲ್ಲಿ 4,000 ರೂಪಾಯಿಗಳ ವ್ಯವಹಾರವನ್ನು ನಡೆಸಬೇಕಾಗುತ್ತದೆ. ಇದು ಒಂದೇ ವಹಿವಾಟುವಾಗಿರಬಹುದು ಅಥವಾ ಬಹುಪಾಲು ವಹಿವಾಟುಗಳಾಗಬಹುದು. ಈ ರ್ಹತೆಯನ್ನು ಒಮ್ಮೆ ಒಮ್ಮೆ ಪೂರೈಸಿದ ನಂತರ SMS ಮೂಲಕ ಆಫರ್ ಬಗ್ಗೆ ನಿಮಗೆ ಸೂಚಿಸಲಾಗುತ್ತದೆ.

ವೊಡಾಫೋನ್ ಐಡಿಯಾದಿಂದ ಕ್ರೆಡಿಟ್ ಕಾರ್ಡ್ ಜೊತೆಗೆ ಶೇ.50 ಕ್ಯಾಶ್‌ಬ್ಯಾಕ್ ಆಫರ್!!

ಇದೇ ಮೊದಲ ಬಾರಿಗೆ ಶೇ. 50 ರಷ್ಟು ಕ್ಯಾಶ್‌ಬ್ಯಾಕ್ ಅನ್ನು ನೀಡಿರುವ ಮೊದಲ ಟೆಲಿಕಾಂ ಕಂಪೆನಿಯಾಗಿ ವೊಡಾಫೋನ್ ಹೊರಹೊಮ್ಮಿದೆ. ಆದರೆ, ಸಾಮಾನ್ಯ ಬಳಕೆದಾರರಿಗೆ ಏನೂ ಪ್ರಯೋನಕ್ಕೆ ಬಾರದಂತಿರುವ ಈ ಆಫರ್ ಕೆಲವರಿಗಷ್ಟೆ ಉತ್ತಮ. ಪ್ರತಿ ತಿಂಗಳು 300 ರೂ. ಬಿಲ್ ಪಾವತಿಸಲು ಕ್ರೆಡಿಟ್ ಕಾರ್ಡ್ ನೀಡುವ ಯೋಜನೇಯೇ ಹಾಸ್ಯಾಸ್ಪದವಾಗಿದೆ ಅಲ್ಲವೇ.?

ಓದಿರಿ: ಗೂಗಲ್​ ಮ್ಯಾಪ್​ನಿಂದ ಇಲ್ಲೊಂದು ಸಂಸಾರವೇ ಮುರಿದುಬಿತ್ತು​!..ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!!

Best Mobiles in India

English summary
Vodafone Idea partners Citibank to offer 50% discount on monthly bills to postpaid customers. to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X